For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಇನ್ನೂ ಸಲ್ಲಿಸಲಿಲ್ಲವೇ? ಇಂದೇ ಕೊನೆ ದಿನ

ಆದಾಯ ತೆರಿಗೆ ಸಲ್ಲಿಕೆಯ ಗಡುವನ್ನು ವಿಸ್ತರಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಮಾಹಿತಿ ಸುಳ್ಳು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

|

ಆದಾಯ ತೆರಿಗೆ ಸಲ್ಲಿಕೆಯ ಗಡುವನ್ನು ವಿಸ್ತರಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಮಾಹಿತಿ ಸುಳ್ಳು ಎಂದು ಆದಾಯ ತೆರಿಗೆ ಇಲಾಖೆ ಸಸ್ಪಷ್ಟಪಡಿಸಿದೆ.
ಐಟಿ ರಿಟರ್ನ್ಸ್ ಸಲ್ಲಿಸಲು ನಿಗದಿತ ದಿನಾಂಕವನ್ನು ವಿಸ್ತರಣೆಗೆ ಸಂಬಂಧಿಸಿದ ಅಧಿಸೂಚನೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಸಿಬಿಡಿಟಿಯ ಗಮನಕ್ಕೆ ಬಂದಿದೆ. ಆದರೆ ಈ ಆದೇಶವು ನಿಜವಲ್ಲ ಎಂದು ನಿರ್ದಿಷ್ಟವಾಗಿ ಹೇಳಲಾಗಿದೆ.

ಟ್ವಿಟರ್ ನಲ್ಲಿ ಸ್ಪಷ್ಟನೆ

ಅಗಸ್ಟ್ 31.08.2019 ಐಟಿಆರ್ ಸಲ್ಲಿಸಲು ಅಂತಿಮ ದಿನಾಂಕವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯು ತನ್ನ ಟ್ವೀಟರ್ ನಲ್ಲಿ ನಕಲಿ ಆದೇಶವನ್ನು ಲಗತ್ತಿಸಿದೆ.

ಐಟಿಆರ್ ಸಲ್ಲಿಕೆ ಕಡ್ಡಾಯ

ಐಟಿಆರ್ ಸಲ್ಲಿಕೆ ಕಡ್ಡಾಯ

- ಎಲ್ಲಾ ನೋಂದಾಯಿತ ತೆರಿಗೆದಾರರು ಪ್ರತಿವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು
- ರೂ. 2,50,000 ಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಗಳಿಸುವ ವ್ಯಕ್ತಿಗಳು ಆಗಸ್ಟ್ 31 ರ ಗಡುವಿನ ಮೊದಲು ತೆರಿಗೆ ರಿಟರ್ನ್ ಸಲ್ಲಿಸಬೇಕು.
- ಆಗಸ್ಟ್ 31 ರೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ನೀವು ಸಲ್ಲಿಸದಿದ್ದರೆ, ನೀವು ರೂ. 5,000 ಮತ್ತು ರೂ. 10,000 ತಡವಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ
- 2018-19ರ ಹಣಕಾಸು ವರ್ಷಕ್ಕೆ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಇನ್ನೂ ಸಲ್ಲಿಸಲಿಲ್ಲವೇ? ಗಡುವು ಇಂದು (ಶನಿವಾರ) ಮುಗಿಯುತ್ತಿದೆ.

ಐಟಿಆರ್ ಸಲ್ಲಿಸಲು ಅಗತ್ಯವಾದ ದಾಖಲೆಗಳು

ಐಟಿಆರ್ ಸಲ್ಲಿಸಲು ಅಗತ್ಯವಾದ ದಾಖಲೆಗಳು

ಎ) ಪ್ಯಾನ್
ಬಿ) ಆಧಾರ್
ಸಿ) ಬ್ಯಾಂಕ್ ಖಾತೆ ವಿವರಗಳು
ಡಿ) ಫಾರ್ಮ್ 16 (ಇದು ಉದ್ಯೋಗದಾತನು ನೀಡಿದ ಪ್ರಮಾಣಪತ್ರವಾಗಿದ್ದು, ಉದ್ಯೋಗದಾತನು ನೌಕರನ ಸಂಬಳದಿಂದ ಎಷ್ಟು ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ ಮತ್ತು ಅದನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದಾಗ ಎಲ್ಲಾ ವಿವರಗಳನ್ನು ಹೊಂದಿರುತ್ತದೆ)
ಇ) ಹೂಡಿಕೆ ವಿವರಗಳು

 

 

<strong>ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ? ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ</strong>ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ? ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ

English summary

Last date for filing ITR is today, no extension: IT Department

The income tax department has said that an order circulating on social media about extension of income tax filing deadline is not genuine.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X