For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳ ವಿಲೀನ: ರಾಜ್ಯದ ಹೆಮ್ಮೆಯ ಕೆನರಾ, ಸಿಂಡಿಕೇಟ್, ವಿಜಯಾ, ಕಾರ್ಪೋರೇಶನ್ ಬ್ಯಾಂಕ್ ಹುಟ್ಟಿದ ರೋಚಕ ಕತೆ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬ್ಯಾಂಕುಗಳ ವಿಲೀನದ ಮಹಾಪರ್ವವೇ ಆರಂಭಗೊಂಡಿದೆ.

|

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬ್ಯಾಂಕುಗಳ ವಿಲೀನದ ಮಹಾಪರ್ವವೇ ಆರಂಭಗೊಂಡಿದೆ. ದೇಶದ ಆರ್ಥಿಕ ಬೆಳವಣಿಗೆಗಾಗಿ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಲ್ಲಿ ಕರ್ನಾಟಕ ರಾಜ್ಯದ ಕರಾವಳಿ ಭಾಗದ ವಿಜಯಾ, ಕೆನರಾ, ಸಿಂಡಿಕೇಟ್, ಕಾರ್ಪೊರೇಶನ್ ಬ್ಯಾಂಕುಗಳು ಸೇರಿಕೊಂಡಿವೆ.
ಕೇಂದ್ರದ ಮೊದಲ ಪ್ರಯತ್ನದಲ್ಲಿ ಎಸ್ಬಿಐ ಹಾಗು ಅದರ ಸಹವರ್ತ ಬ್ಯಾಂಕುಗಳ ವಿಲೀನ, ನಂತರ ಎರಡನೇ ಪ್ರಯತ್ನದಲ್ಲಿ, ಬ್ಯಾಂಕ್ ಆಫ್ ಬರೋಡಾ, ದೇನಾ ಮತ್ತು ವಿಜಯಾ ಬ್ಯಾಂಕುಗಳನ್ನು ವಿಲೀನಗೊಳಿಸಿತ್ತು. ಇದೀಗ ಮೂರನೇಯ ಹಂತದಲ್ಲಿ ದೇಶದ ಪ್ರಮುಖ ಹತ್ತು ಬ್ಯಾಂಕುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಬ್ಯಾಂಕುಗಳ ಮಹಾ ವಿಲೀನದ ಸಂದರ್ಭದಲ್ಲಿ ನಮ್ಮ ಕರಾವಳಿ ಭಾಗದ ಬ್ಯಾಂಕುಗಳ ಪರಿಚಯ ಇಲ್ಲಿ ನೀಡಲಾಗಿದೆ.

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ಅನ್ನು ಅಮ್ಮೆಂಬಳ ಸುಬ್ಬರಾವ್ ಪೈ ಅವರು ಹಿಂದು ಶಾಶ್ವತ ನಿಧಿ ಹೆಸರಿನಡಿಯಲ್ಲಿ ೧೯೦೬ರಲ್ಲಿ ಮಂಗಳೂರಿನಲ್ಲಿ ಸ್ಥಾಪಿಸಿದರು. ರಾಷ್ಟ್ರೀಕರಣದ ನಂತರ ಕೆನರಾ ಬ್ಯಾಂಕ್ ನ ಪ್ರಧಾನ ಕಚೇರಿ ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ದೇಶದಾದ್ಯಂತ ಸುಮಾರು ೨೫೦೦ಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದೆ.

ಸಿಂಡಿಕೇಟ್ ಬ್ಯಾಂಕ್

ಸಿಂಡಿಕೇಟ್ ಬ್ಯಾಂಕ್

ಉಪೇಂದ್ರ ಪೈ, ಡಾ. ಟಿಎಂಎ ಪೈ ಸೇರಿಕೊಂಡು ೧೯೨೫ರಲ್ಲಿ ಅತೀ ಕಡಿಮೆ ಬಂಡವಾಳದೊಂದಿದೆ ಕೆನರಾ ಇಂಡಸ್ಟ್ರೀಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿ. ಸ್ಥಾಪನೆ ಮಾಡಿದರು. ಇದು ಮುಂದೆ ಸಿಂಡಿಕೇಟ್ ಬ್ಯಾಂಕ್ ಆಗಿ ಪರಿವರ್ತನೆ ಆಯಿತು. ಆ ಸಂದರ್ಭದಲ್ಲಿ ಫಿಗ್ಮಿ ಮೂಲಕವೇ ಕೋಟಿವರೆಗೆ ಸಂಗ್ರಹಿಸಲಾಗುತಿತ್ತು.

ಕಾರ್ಪೋರೇಶನ್ ಬ್ಯಾಂಕ್

ಕಾರ್ಪೋರೇಶನ್ ಬ್ಯಾಂಕ್

ಕರಾವಳಿಯ ಹೆಮ್ಮೆಯ ಬ್ಯಾಂಕುಗಳಲ್ಲಿ ಒಂದಾದ ಕಾರ್ಪೋರೇಶನ್ ಅನ್ನು ೧೯೦೬ರಲ್ಲಿ ಖಾನ್ ಬಹದ್ದೂರ್ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಎಂಬುವರು ದ ಕೆನರಾ ಬ್ಯಾಂಕಿಂಗ್ ಕಾರ್ಪೋರೇಶನ್ ಸ್ಥಾಪನೆ ಮಾಡಿದರು. ೧೯೭೨ರಲ್ಲಿ ಕಾರ್ಪೋರೇಶನ್ ಬ್ಯಾಮಕ್ ಎಂಬುದಾಗಿ ಬದಲಾಯಿತು.

ವಿಜಯಾ ಬ್ಯಾಂಕ್

ವಿಜಯಾ ಬ್ಯಾಂಕ್

೧೯೩೧ರಲ್ಲಿ ವಿಜಯಾ ಬ್ಯಾಂಕ್ ಮಂಗಳೂರಿನ ಎಬಿ ಶೆಟ್ಟಿ ಹಾಗು ರೈತ ವರ್ಗದವರು ಸೇರಿಕೊಂಡು ಸ್ಥಾಪಿಸಿದರು. ೧೯೮೦ರಲ್ಲಿ ವಿಜಯಾ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಆಯಿತು.

Read more about: bank banking money finance news
English summary

Bank Merger: Karnataka origin canara, syndicate, vijaya, corporation bank history

Bank Merger: coastal origin canara, syndicate, vijaya, corporation bank stories given here.
Story first published: Tuesday, September 3, 2019, 13:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X