ಭಾರೀ ಷೇರು ಕುಸಿತ, ಮಾರುತಿ ಸುಜುಕಿಯ ಗುರುಗ್ರಾಮ್, ಮಾನೆಸರ್ ಘಟಕಗಳು ಬಂದ್
ಕೇಂದ್ರ ಸರ್ಕಾರ ಒಂದೇಡೆ ಆರ್ಥಿಕ ಕುಸಿತ ತಡೆಯಲು ಹೆಣಗಾಡುತ್ತಿದ್ದರೆ ಇನ್ನೊಂದೆಡೆ ವಾಹನ ವಲಯದ ಕಂಪನಿಗಳು ತಯಾರಿಕಾ ಘಟಕಗಳ ಬಾಗಿಲು ಮುಚ್ಚುತ್ತಿವೆ!
ಕೇಂದ್ರ ಸರ್ಕಾರ ಒಂದೇಡೆ ಆರ್ಥಿಕ ಕುಸಿತ ತಡೆಯಲು ಹೆಣಗಾಡುತ್ತಿದ್ದರೆ ಇನ್ನೊಂದೆಡೆ ವಾಹನ ವಲಯದ ಕಂಪನಿಗಳು ತಯಾರಿಕಾ ಘಟಕಗಳ ಬಾಗಿಲು ಮುಚ್ಚುತ್ತಿವೆ!
ದೇಶದ ಪ್ರಸಿದ್ದ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸೆಪ್ಟೆಂಬರ್ 7 ಮತ್ತು 9 ರಂದು ಗುರುಗ್ರಾಮ್ ಮತ್ತು ಮಾನೆಸರ್ ಕಾರು ತಯಾರಿಕಾ ಘಟಕಗಳ ಬಾಗಿಲು ಮುಚ್ಚಲು ನಿರ್ಧರಿಸಿರುವುದಾಗಿ ತಿಳಿಸಿದೆ.
ಹರಿಯಾಣದ ಮಾನೆಸರ್ ಮತ್ತು ಗುರುಗ್ರಾಮ್ ಘಟಕದಲ್ಲಿ ಎರಡು ದಿನಗಳ ಕಾಲ ಯಾವುದೇ ಕಾರು ಉತ್ಪಾದನಾ ಕಾರ್ಯಾಚರಣೆ ನಡೆಯುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆರ್ಥಿಕ ಕುಸಿತ, ರೂಪಾಯಿ ಮೌಲ್ಯ ಕುಸಿತ, ವಾಣಿಜ್ಯ ಸಮರದಂತ ಉಲ್ಬಣಗಳ ಹಿನ್ನೆಲೆಯಲ್ಲಿ ಷೇರುಪೇಟೆ ಭಾರೀ ಕುಸಿತ ಕಂಡಿದೆ. ಇದರ ಪರಿಣಾಮ ಮಾರುತಿ ಸುಜುಕಿ ಮೇಲೂ ಬೀರಿದ್ದು, ಕಂಪನಿಯ ಶೇರುಗಳು ಶೇ. 2.36ರಷ್ಟು ಕುಸಿತ ಕಂಡಿವೆ.
ಕಳೆದ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಮಾರುತಿ ಸುಜುಕಿ 1,68,725 ಕಾರುಗಳನ್ನು ಉತ್ಪಾದಿಸಿತ್ತು. ಈ ವರ್ಷ ಆಗಸ್ಟ್ ತಿಂಗಳಿನಲ್ಲಿ 111,370 ಕಾರುಗಳನ್ನು ಉತ್ಪಾದಿಸಿದೆ. ಅಂದರೆ ಬರೋಬ್ಬಿ ಶೇ. 37.7ರಷ್ಟು ಮಾರಾಟ ಪ್ರಮಾಣದಲ್ಲಿ ಇಳಿಕೆಯಾಗಿದೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಟೋಮೊಬೈಲ್ ವಲಯದಲ್ಲಿನ ನಿರಂತರ ಮಂದಗತಿಯು ಭಾರೀ ವಾಣಿಜ್ಯ ವಾಹನಗಳನ್ನು ತಯಾರಿಸುವ ಮತ್ತು ಬಿಡಿ ಭಾಗ ತಯಾರಕರು ಸೇರಿದಂತೆ ಎಲ್ಲಾ ವಾಹನ ಕಂಪನಿಗಳ ಮೇಲೆ ಹೊಡೆತ ಬಿದ್ದಿದೆ. ಮಾರುತಿ ಸುಜುಕಿ ಇಂಡಿಯಾ, ಹ್ಯುಂಡೈ, ಮಹೀಂದ್ರಾ ಮತ್ತು ಮಹೀಂದ್ರಾ, ಹೋಂಡಾ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಎಲ್ಲಾ ಪ್ರಮುಖ ಕಾರು ತಯಾರಕ ಕಂಪನಿಗಳು ಆಗಸ್ಟ್ ಮಾರಾಟದಲ್ಲಿ ನಷ್ಟವನ್ನು ವರದಿ ಮಾಡಿವೆ.


Click it and Unblock the Notifications