For Quick Alerts
ALLOW NOTIFICATIONS  
For Daily Alerts

2019ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ಟಾಪ್ 10 ಕ್ರಿಕೆಟಿಗರು

ಕ್ರಿಕೆಟ್ ಹುಚ್ಚು ಇಡೀ ಜಗತ್ತನ್ನೇ ಆವಸರಿಸಿದ್ದು, ವಿಶ್ವದ ಪ್ರತಿ ದೇಶದಲ್ಲೂ ಕ್ರಿಕೆಟ್ ಪ್ರೇಮಿಗಳ ದಂಡೆ ಇದೆ! ಕಳೆದ ಹಲವಾರು ವರ್ಷಗಳಿಂದ ಕ್ರಿಕೆಟ್ ಹಲವು ಹಂತಗಳಲ್ಲಿ ಬಹಳಷ್ಟು ಬದಲಾಗುತ್ತಾ ಬಂದಿದೆ.

|

ಕ್ರಿಕೆಟ್ ಹುಚ್ಚು ಇಡೀ ಜಗತ್ತನ್ನೇ ಆವಸರಿಸಿದ್ದು, ವಿಶ್ವದ ಪ್ರತಿ ದೇಶದಲ್ಲೂ ಕ್ರಿಕೆಟ್ ಪ್ರೇಮಿಗಳ ದಂಡೆ ಇದೆ! ಕಳೆದ ಹಲವಾರು ವರ್ಷಗಳಿಂದ ಕ್ರಿಕೆಟ್ ಹಲವು ಹಂತಗಳಲ್ಲಿ ಬಹಳಷ್ಟು ಬದಲಾಗುತ್ತಾ ಬಂದಿದೆ.
ಕ್ರಿಕೆಟ್ ಆಟ ಯುವ ಪ್ರೇಕ್ಷಕರನ್ನು ಹೆಚ್ಚು ವೇಗವಾಗಿ ಮತ್ತು ರೋಮಾಂಚನಕಾರಿಯಾಗಿ ಆಕರ್ಷಿಸುತ್ತಿದೆ. ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡೆಗಳಲ್ಲಿ ಇದು ಕೂಡ ಒಂದಾಗಿದೆ. ಕ್ರಿಕೆಟಿಗರಿಗೆ ಅಂತರರಾಷ್ಟ್ರೀಯ ಮತ್ತು ಲೀಗ್ ಪಂದ್ಯಾವಳಿಗಳಿಂದ ಮತ್ತು ಅವರ ಪ್ರಾಯೋಜಕರಿಂದ ಉತ್ತಮ ಆದಯ ಗಳಿಸಲು ಅಪಾರ ಅವಕಾಶಗಳಿವೆ.
ಈ ಪಟ್ಟಿಯು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್ ಆಟಗಾರರ ಕುರಿತಾಗಿದೆ. ಇಲ್ಲಿರುವ ಎಲ್ಲ ಆಟಗಾರರು ಪ್ರಸ್ತುತ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ಪಟ್ಟಿಯನ್ನು ತಯಾರಿಸುವಾಗ, ಹೆಚ್ಚಾಗಿ ರಾಷ್ಟ್ರೀಯ ತಂಡದ ಸಂಬಳ ಮತ್ತು ದೇಶೀಯ/ಫ್ರ್ಯಾಂಚೈಸ್ ತಂಡದ ವೇತನದ ಮೇಲೆ ಕೇಂದ್ರೀಕರಿಸಲಾಗಿದೆ.
2019 ರ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಕ್ರಿಕೆಟ್ ಆಟಗಾರರನ್ನು ನೋಡೋಣ ಬನ್ನಿ..

10. ಯುವರಾಜ್ ಸಿಂಗ್

10. ಯುವರಾಜ್ ಸಿಂಗ್

2019 ರಲ್ಲಿ ಒಟ್ಟು ಆದಾಯ: 3.5 ಮಿಲಿಯನ್/ ರೂ. 23.75 ಕೋಟಿ
ತಂಡ: ಭಾರತ ಮತ್ತು ಮುಂಬೈ ಇಂಡಿಯನ್ಸ್
2002 ರ ನಂತರ ಭಾರತೀಯ ತಂಡ ಉತ್ತಮ ಸಾಧನೆ ತೋರುವಲ್ಲಿ 37 ವರ್ಷದ ಯುವರಾಜ್ ಸಿಂಗ್ ರವರ ಕೊಡುಗೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅವರು ಭಾರತದ 2011 ರ ವಿಶ್ವಕಪ್ ಮತ್ತು 2007ರ ಟಿ20 ವಿಶ್ವಕಪ್ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಯುವರಾಜ್ ಸಿಂಗ್ ಇತ್ತೀಚೆಗೆ 2019 ರ ಜೂನ್ 9 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

 

 

9. ಮೈಕೆಲ್ ಕ್ಲಾರ್ಕ್

9. ಮೈಕೆಲ್ ಕ್ಲಾರ್ಕ್

2019 ರಲ್ಲಿ ಒಟ್ಟು ಆದಾಯ: 3.9 ಮಿಲಿಯನ್/ ರೂ. 26.46 ಕೋಟಿ
ತಂಡ: ಆಸ್ಟ್ರೇಲಿಯಾ ಮತ್ತು ಸಿಡ್ನಿ ಥಂಡರ್

8. ಗೌತಮ್ ಗಂಭೀರ್

8. ಗೌತಮ್ ಗಂಭೀರ್

2019 ರಲ್ಲಿ ಒಟ್ಟು ಆದಾಯ: 79 4.79 ಮಿಲಿಯನ್ / ರೂ. 32.50 ಕೋಟಿ
ತಂಡ: ಭಾರತ ಮತ್ತು ದೆಹಲಿ ಕ್ಯಾಪಿಟಲ್ಸ್
37 ವರ್ಷದ ಗೌತಮ್ ಗಂಭೀರ್ ಪ್ರಸ್ತುತ 2019 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಆಂಧ್ರ ವಿರುದ್ಧ ದೆಹಲಿ ಪರ ತಮ್ಮ ಕೊನೆಯ ರಣಜಿ ಟ್ರೋಫಿ ಪಂದ್ಯವನ್ನು ಆಡಿದ ನಂತರ ಗೌತಮ್ ಗಂಭೀರ್ ಅವರು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಗಂಭೀರ್ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ನಾಯಕತ್ವ ಕೌಶಲ್ಯವನ್ನು ಪ್ರದರ್ಶನ ಮಾಡಿದ್ದರು.

 

 

7. ಶೇನ್ ವ್ಯಾಟ್ಸನ್

7. ಶೇನ್ ವ್ಯಾಟ್ಸನ್

2019 ರಲ್ಲಿ ಒಟ್ಟು ಆದಾಯ: 5.5 ಮಿಲಿಯನ್ / ರೂ. 37.32 ಕೋಟಿ
ತಂಡ: ಆಸ್ಟ್ರೇಲಿಯಾ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್

6. ಶಾಹಿದ್ ಅಫ್ರಿದಿ

6. ಶಾಹಿದ್ ಅಫ್ರಿದಿ

2019 ರಲ್ಲಿ ಒಟ್ಟು ಆದಾಯ: 5.8 ಮಿಲಿಯನ್ / ರೂ. 39.36 ಕೋಟಿ
ತಂಡ: ಪಾಕಿಸ್ತಾನ ಮತ್ತು ಢಾಕಾ ಡೈನಮೈಟ್ಸ್

5. ವೀರೇಂದ್ರ ಸೆಹ್ವಾಗ್

5. ವೀರೇಂದ್ರ ಸೆಹ್ವಾಗ್

2019 ರಲ್ಲಿ ಒಟ್ಟು ಆದಾಯ: 6.1 ಮಿಲಿಯನ್ / ರೂ. 41.39 ಕೋಟಿ
ತಂಡ: ಭಾರತ ಮತ್ತು ಡೈಮಂಡ್ಸ್ ಇಲೆವೆನ್

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್

2019 ರಲ್ಲಿ ಒಟ್ಟು ಆದಾಯ: 4 6.4 ಮಿಲಿಯನ್ / ರೂ. 43.43 ಕೋಟಿ
ತಂಡ: ದಕ್ಷಿಣ ಆಫ್ರಿಕಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು

3. ಕ್ರಿಸ್ ಗೇಲ್

3. ಕ್ರಿಸ್ ಗೇಲ್

2019 ರಲ್ಲಿ ಒಟ್ಟು ಆದಾಯ: .5 7.5 ಮಿಲಿಯನ್ / ರೂ. 50.89 ಕೋಟಿ
ತಂಡ: ವೆಸ್ಟ್ ಇಂಡೀಸ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್

2. ಎಂ.ಎಸ್.ಧೋನಿ

2. ಎಂ.ಎಸ್.ಧೋನಿ

2019 ರಲ್ಲಿ ಒಟ್ಟು ಆದಾಯ: 21.7 ಮಿಲಿಯನ್ / ರೂ. 147.26 ಕೋಟಿ
ತಂಡ: ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್
ಎರಡನೇ ಸ್ಥಾನ ಪಡೆದ ಎಂ.ಎಸ್. ಧೋನಿಯು ಮೂರನೇ ಸ್ಥಾನದಲ್ಲಿರುವ ಕ್ರಿಸ್ ಗೇಲ್ ಗಿಂತರ ಸುಮಾರು ಮೂರು ಪಟ್ಟು ಹೆಚ್ಚು ಆದಾಯ ಗಳಿಸುತ್ತಾರೆ. 2019 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2014 ರಲ್ಲಿ ಫೋರ್ಬ್ಸ್ ಅಗ್ರ -100 ಅತಿ ಹೆಚ್ಚು ಸಂಭಾವನೆ ಪಡೆಯುವ 25 ವರ್ಷದೊಳಗಿನ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಇವರಾಗಿದ್ದಾರೆ. ಆದರೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಅವರ ಬ್ರಾಂಡ್ ಮೌಲ್ಯ ಗಮನಾರ್ಹವಾಗಿ ಕಡಿಮೆಯಾಗಿದೆ.

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

2019 ರಲ್ಲಿ ಒಟ್ಟು ಆದಾಯ: 24 ಮಿಲಿಯನ್ / ರೂ. 162.87 ಕೋಟಿ
ತಂಡ: ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು
ಈ ವರ್ಷದ ಫೋರ್ಬ್ಸ್ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. ಈ ವರ್ಷ ಒಟ್ಟು 24 ದಶಲಕ್ಷಕ್ಕಿಂತ ಹೆಚ್ಚಿನ ಆದಾಯದೊಂದಿಗೆ, 2019 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಗಾಗ್ಗೆ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆಂದು ಕರೆಯಲ್ಪಡುವ ಕೊಹ್ಲಿ ಈ ವರ್ಷದ ಅತ್ಯಂತ ಮಾರುಕಟ್ಟೆ ಹೊಂದಿರುವ ಕ್ರೀಡಾಪಟುಗಳಲ್ಲಿ ಒಬ್ಬರು. ಇವರು 25 ಮಿಲಿಯನ್ ಹೆಚ್ಚು ಟ್ವಿಟ್ಟರ್ ಅನುಯಾಯಿಗಳನ್ನು ಹೊಂದಿರುವ ಏಕೈಕ ಕ್ರಿಕೆಟಿಗ.

 

 

Read more about: money finance news business
English summary

Top 10 Highest Paid Cricketers in the World 2019

The cricketers have enormous opportunities to earn well from the international and league tournaments, as well as from their sponsors. Let’s take a look at the top 10 highest paid cricketers of 2019!
Story first published: Thursday, September 5, 2019, 10:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X