ಚೆನ್ನೈ ಘಟಕದಲ್ಲಿ ಐದು ದಿನ ರಜೆ ಘೋಷಿಸಿದ ಅಶೋಕ್ ಲೇಲ್ಯಾಂಡ್
ಆಟೊಮೊಬೈಲ್ ವಲಯದ ಕುಸಿತದ ಹಿನ್ನೆಲೆಯಲ್ಲಿ ಚೆನ್ನೈ ಪ್ರಧಾನ ವಾಹನ ತಯಾರಕ ಘಟಕದ ಉತ್ಪಾದನೆಯನ್ನು ಅಶೋಕ್ ಲೇಲ್ಯಾಂಡ್ ಶುಕ್ರವಾರದಿಂದ ಐದು ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.
ಆಟೊಮೊಬೈಲ್ ವಲಯದ ಕುಸಿತದ ಹಿನ್ನೆಲೆಯಲ್ಲಿ ಚೆನ್ನೈ ಪ್ರಧಾನ ವಾಹನ ತಯಾರಕ ಘಟಕದ ಉತ್ಪಾದನೆಯನ್ನು ಅಶೋಕ್ ಲೇಲ್ಯಾಂಡ್ ಶುಕ್ರವಾರದಿಂದ ಐದು ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ಆರ್ಥಿಕ ಹಿಜರಿತದಿಂದ ಕಂಗೆಟ್ಟಿರುವ ವಾಹನ ಉದ್ಯಮದ ಪ್ರಮುಖ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಎದುರಾಗಿರುವ ನಷ್ಟವನ್ನು ಕಡಿಮೆಗೊಳಿಸಲು ಅಶೋಕ್ ಲೈಲ್ಯಾಂಡ್ ಮುಂದಾಗಿದ್ದು, ತನ್ನ ಉದ್ಯೋಗಿಗಳಿಗೆಗೆ ಐದು ದಿನಗಳವರೆಗೆ ರಜೆ ಘೋಷಿಸಿದೆ. ಚೆನ್ನೈ ತಯಾರಕ ಘಟಕದ ಕಾರ್ಮಿಕರಿಗೆ ಈ ಮಾಹಿತಿ ರವಾನಿಸಲಾಗಿದ್ದು, ಶುಕ್ರವಾರದಿಂದ ಐದು ದಿನ ರಜೆ ಘೋಷಣೆ ಮಾಡಲಾಗಿದೆ.
ವಾಣಿಜ್ಯ ವಾಹನಗಳ ಉತ್ಪಾದನೆ ಮಾಡುವ ಅಶೋಕ್ ಲೈಲ್ಯಾಂಡ್, ವ್ಯಾಪಾರದಲ್ಲಿ ಮಂದಗತಿ ಆಗಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಐದು ದಿನ ಉತ್ಪಾದನಾ ಕಾರ್ಯಾಚರಣೆ ಸ್ಥಗಿತಗೊಳಿಸುವುದರಿಂದ ಐದು ಸಾವಿರ ಉದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಐದು ದಿನಗಳ ರಜಾ ವೇತನವನ್ನು ನಂತರದಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ದೇಶದ ಆಟೊಮೊಬೈಲ್ ಕ್ಷೇತ್ರವು ಮಾರಾಟ ಕುಸಿತ ಕಂಡಿದ್ದು, ಜೊತೆಗೆ ಉದ್ಯೋಗ ನಷ್ಟ ಎದುರಿಸಿದೆ.
ಇದಕ್ಕೂ ಮುನ್ನ ಗುರುವಾರ, ಮಾರುತಿ ಸುಜುಕಿ ತನ್ನ ಗುರುಗ್ರಾಮ್ ಮತ್ತು ಮಾನೇಸರ್ ಉತ್ಪಾದನಾ ಘಟಕಗಳನ್ನು ಸೆಪ್ಟೆಂಬರ್ 7 ಮತ್ತು 9 ರಂದು ಎರಡು ದಿನ ಸ್ಥಗಿತಗೊಳಿಸಿತ್ತು. ತೀವ್ರ ಮಂದಗತಿಯಲ್ಲಿ ಸಿಲುಕಿರುವ ಮಾರುತಿ ಸುಜುಕಿ ಇಂಡಿಯಾ ಆಗಸ್ಟ್‌ನಲ್ಲಿ ತನ್ನ ಉತ್ಪಾದನೆಯನ್ನು ಶೇಕಡಾ 33.99 ರಷ್ಟು ಇಳಿಸಿತ್ತು.


Click it and Unblock the Notifications