ಮುಕೇಶ್ ಅಂಬಾನಿಯ ಬಹು ನಿರೀಕ್ಷಿತ ಫೈಬರ್-ಟು-ಹೋಮ್ (ಎಫ್‌ಟಿಟಿಎಚ್) ಸೇವೆ ಅಂತಿಮವಾಗಿ ಲಾಂಚ್ ಆಗಿದೆ. ಜಿಯೋ ಫೈಬರ್ ಯೋಜನೆ ಬೆಲೆ ರೂ. 699 ದಿಂದ ಪ್ರಾರಂಭವಾಗಲಿದ್ದು, ರೂ. 8,499 ವರೆಗೆ ಇರಲಿದೆ.
ಮುಕೇಶ್ ಅಂಬಾನಿಯ ಬಹು ನಿರೀಕ್ಷಿತ ಫೈಬರ್-ಟು-ಹೋಮ್ (ಎಫ್‌ಟಿಟಿಎಚ್) ಸೇವೆ ಅಂತಿಮವಾಗಿ ಲಾಂಚ್ ಆಗಿದೆ. ಜಿಯೋ ಫೈಬರ್ ಯೋಜನೆ ಬೆಲೆ ರೂ. 699 ದಿಂದ ಪ್ರಾರಂಭವಾಗಲಿದ್ದು, ರೂ. 8,499 ವರೆಗೆ ಇರಲಿದೆ. ಕಡಿಮೆ ಟಾರಿಪ್ 100 Mbps ವೇಗದಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಟಾರಿಪ್ ಯೋಜನೆಗಳು ಎಲ್ಲಾ ಸೇವೆಗಳ ಪ್ರವೇಶದೊಂದಿಗೆ ಬರುತ್ತವೆ.
ಆಗಸ್ಟ್ 12 ರಂದು ಪ್ರಾರಂಭವಾದ ಜಿಯೋ ಫೈಬರ್ ವಾಣಿಜ್ಯಾತ್ಮಕ ರೋಲ್ ಔಟ್ ಆಗಿದೆ. ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಸೇವೆಯು ಉಚಿತ ಎಚ್‌ಡಿ ಟಿವಿ ಸೆಟ್, ಲ್ಯಾಂಡ್‌ಲೈನ್ ಉಚಿತ ಧ್ವನಿ ಕರೆಗಳು, 100 ಮೆಗಾಬಿಟ್ (ಎಮ್‌ಬಿಪಿಎಸ್) ನಿಂದ 1 ಜಿಬಿಪಿಎಸ್ ಬ್ರಾಡ್‌ಬ್ಯಾಂಡ್ ವೇಗಕ್ಕೆ ತಿಂಗಳಿಗೆ ರೂ. 700 ಚಂದಾದಾರಿಕೆ ಇದೆ.
ಜಿಯೋ ಫೈಬರ್ ತಿಂಗಳ ಪ್ರಿಪೇಡ್ ಯೋಜನೆ
ಜಿಯೋ ಫೈಬರ್ ತಿಂಗಳ ಪ್ರಿಪೇಡ್ ಯೋಜನೆಗಳ ವಿವರ ಇಲ್ಲಿದೆ.
ಯಾವ ಸೇವೆಗಳನ್ನು ಪಡೆಯಬಹುದು?
1. ಅಲ್ಟ್ರಾ-ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ (1 ಜಿಬಿಪಿಎಸ್ ವರೆಗೆ)
2. ಉಚಿತ ದೇಶೀಯ ಧ್ವನಿ ಕರೆ, ಕಾನ್ಫರೆನ್ಸಿಂಗ್ ಮತ್ತು ಅಂತರರಾಷ್ಟ್ರೀಯ ಕರೆ
3. ಟಿವಿ ವಿಡಿಯೋ ಕರೆ ಮತ್ತು ಕಾನ್ಫರೆನ್ಸಿಂಗ್
4. ಮನರಂಜನೆ ಒಟಿಟಿ ಅಪ್ಲಿಕೇಶನ್‌ಗಳು
5. ಗೇಮಿಂಗ್
6. ಹೋಮ್ ನೆಟ್‌ವರ್ಕಿಂಗ್
7. ಸಾಧನ ಸುರಕ್ಷತೆ
8. ವಿಆರ್ ಅನುಭವ
9. ಪ್ರೀಮಿಯಂ ವಿಷಯ ಪ್ಲಾಟ್‌ಫಾರ್ಮ್
ಗೇಮ್‌ಚೇಂಜರ್ ಆಗಬಹುದಾದ ಈ ಯೋಜನೆಗಾಗಿ ಅಂಬಾನಿ 3.5 ಕೋಟಿ ಚಂದಾದಾರರ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಭಾರತದ 1,600 ನಗರಗಳಲ್ಲಿ 1.5 ಕೋಟಿ ನೋಂದಣಿ ಪಡೆದಿದ್ದಾರೆ.
ದೀರ್ಘಾವಧಿಯ ಯೋಜನೆಗಳು
1. ಜಿಯೋಫೈಬರ್ ಬಳಕೆದಾರರು 3, 6 ಮತ್ತು 12 ತಿಂಗಳ ಯೋಜನೆಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ. ಅದು ಗಣನೀಯವಾಗಿ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.
2. ಬ್ಯಾಂಕ್ ಟೈ-ಅಪ್‌ಗಳ ಮೂಲಕ, ಜಿಯೋ ಆಕರ್ಷಕ ಇಎಂಐ ಯೋಜನೆಗಳನ್ನು ಒದಗಿಸುತ್ತದೆ, ಆದ್ದರಿಂದ ಗ್ರಾಹಕರು ವಾರ್ಷಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಮಾಸಿಕ ಇಎಂಐ ಅನ್ನು ಮಾತ್ರ ಪಾವತಿಸುವ ಮೂಲಕ ಯೋಜಿಸುತ್ತದೆ.
ಜಿಯೋ ಚಂದಾದಾರಿಕೆ ಖರೀದಿ, ಉಚಿತ ಸೇವೆ
ಜಿಯೋ ನೀಡುತ್ತಿರುವ ಚಂದಾದಾರಿಕೆ ಯೋಜನೆಗಳು, ಹೇಗೆ ಖರೀದಿಸುವುದು ಮತ್ತು ಇತರ ಸೇವೆಗಳ ಬಗ್ಗೆ ಎಲ್ಲಾ ವಿವರಗಳು ಇಲ್ಲಿವೆ:
* ಚಂದಾದಾರಿಕೆ ಯೋಜನೆ
ಯೋಜನೆಗಳು ರೂ. 699 ಗಳಿಂದ ಪ್ರಾರಂಭವಾಗಲಿದ್ದು, 100 Mbps ನಿಂದ 1Gbps ವರೆಗಿನ ಇಂಟರ್ನೆಟ್ ವೇಗವನ್ನು ಅವಲಂಬಿಸಿ ತಿಂಗಳಿಗೆ ರೂ. 8,499 ವರೆಗೆ ಇರಲಿದೆ.
* 2-ತಿಂಗಳವರೆಗೆ ಉಚಿತ
ಪೂರ್ವವೀಕ್ಷಣೆ ಕೊಡುಗೆ ಅಡಿಯಲ್ಲಿ ಹೊಸ ಚಂದಾದಾರರು ಎರಡು ತಿಂಗಳವರೆಗೆ ಜಿಯೋ ಫೈಬರ್ ಸೇವೆಗಳನ್ನು ಉಚಿತವಾಗಿ ಪಡೆಯುತ್ತಾರೆ.
ಜಿಯೋ ಫೈಬರ್ ಅನ್ನು ಹೇಗೆ ಪಡೆಯಬಹುದು?
ಜಿಯೋ ಫೈಬರ್ ಸಂಪರ್ಕಕ್ಕಾಗಿ ನೋಂದಾಯಿಸಲು ಜಿಯೋ ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ. ವಿಳಾಸ, ಹೆಸರು ಮತ್ತು ಮೊಬೈಲ್ ಸಂಖ್ಯೆಯಂತಹ ನಿಮ್ಮ ವಿವರಗಳನ್ನು ಸಲ್ಲಿಸಬೇಕು. ಮೊಬೈಲ್ ಒಟಿಪಿ ಮೂಲಕ ನೋಂದಣಿ ಮಾಡಿದ ನಂತರ, ಎಲ್ಲಾ ಮಾಹಿತಿಯನ್ನು ಪರಿಶೀಲಿಸಲು ಜಿಯೋ ಕಾರ್ಯನಿರ್ವಾಹಕ ನಿಮ್ಮ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಜಿಯೋ ಫೈಬರ್ ಕೇಬಲ್ ಟಿವಿ
ಕೇಬಲ್ ಫೈಬರ್ ಅಥವಾ ಡಿಟಿಎಚ್ ಮೂಲಕ ಕೇಬಲ್ ಟಿವಿ ಸೇವೆಯನ್ನು ಪ್ರತ್ಯೇಕವಾದ ಚಂದಾದಾರಿಕೆ ಯೋಜನೆಯಡಿಯಲ್ಲಿ ಒದಗಿಸಲಾಗುವುದು. ಜೊತೆಗೆ ಜಿಯೋ ಉಚಿತ ಸೆಟ್ ಟಾಪ್ ಬಾಕ್ಸ್ ಅನ್ನು ಸಹ ನೀಡುತ್ತದೆ.
ಇತರೆ ಸೇವೆಗಳು
ಉಚಿತ ಹೈ ಡೆಫಿನಿಷನ್ ಟಿವಿ:
ಕಂಪನಿಯು ತನ್ನ ವೆಲ್ಕಂ ಆಫರ್ ಅಡಿಯಲ್ಲಿ 4 ಕೆ ಎಲ್ಇಡಿ ಟಿವಿಯನ್ನು ಉಚಿತವಾಗಿ ನೀಡಲಿದೆ.
ಉಚಿತ ಧ್ವನಿ ಕರೆಗಳು:
ಜಿಯೋ ಹೋಮ್ ಫೋನ್ ಅಡಿಯಲ್ಲಿ, ಕಂಪನಿಯು ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಸಂಯೋಜಿಸಲಾದ ಲ್ಯಾಂಡ್‌ಲೈನ್ ಸೇವೆಗಳನ್ನು ನೀಡುತ್ತದೆ. ಇದು ದೇಶೀಯ ಫೋನ್ ಬಳಕೆದಾರರಿಗೆ ಉಚಿತ ಧ್ವನಿ ಕರೆಗಳನ್ನು ಮತ್ತು ಕೈಗೆಟುಕುವ ಅಂತರರಾಷ್ಟ್ರೀಯ ಕರೆಗಳನ್ನು ನೀಡುತ್ತದೆ.
ಇನಸ್ಟಾಲೆಶನ್ ಶುಲ್ಕ:
ಜಿಯೋ ಫೈಬರ್ ಇನ್ಸ್ಟಾಲೇಸನ್ ಉಚಿತವಾಗಿರಲಿದೆ. ಆದರೆ, ಕಂಪನಿಯು ಇಂಟರ್ನೆಟ್ ರೂಟರ್‌ಗೆ ಮರುಪಾವತಿಸಬಹುದಾದ ರೂ. 2,500 ಶುಲ್ಕ ವಿಧಿಸುತ್ತದೆ.


Click it and Unblock the Notifications