For Quick Alerts
ALLOW NOTIFICATIONS  
For Daily Alerts

ಉಜ್ವಲಾ ಯೋಜನೆಯಡಿ 8 ಕೋಟಿ ಕುಟುಂಬಗಳಿಗೆ ಎಲ್ಪಿಜಿ ಪೂರೈಕೆ

ದೇಶದ ಎಂಟು ಕೋಟಿ ಬಡವರಿಗೆ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಸೌಲಭ್ಯ ಒದಗಿಸಲಾಗಿದೆ. ಎಂಟು ಕೋಟಿ ಎಲ್ಪಿಜಿ ಸಂಪರ್ಕದ ಗುರಿಯನ್ನು ೨೦೨೦ಕ್ಕೆ ಇರಿಸಲಾಗಿತ್ತು. ಆದರೆ ಅವಧಿಗೆ 7 ತಿಂಗಳು ಮೊದಲೇ ಗುರಿ ಸಾಧಿಸಲಾಗಿದೆ.

|

ದೇಶದ ಎಂಟು ಕೋಟಿ ಬಡವರಿಗೆ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಸೌಲಭ್ಯ ಒದಗಿಸಲಾಗಿದೆ. ಎಂಟು ಕೋಟಿ ಎಲ್ಪಿಜಿ ಸಂಪರ್ಕದ ಗುರಿಯನ್ನು ೨೦೨೦ಕ್ಕೆ ಇರಿಸಲಾಗಿತ್ತು. ಆದರೆ ಅವಧಿಗೆ 7 ತಿಂಗಳು ಮೊದಲೇ ಗುರಿ ಸಾಧಿಸಲಾಗಿದೆ.

ಉಜ್ವಲಾ ಯೋಜನೆಯಡಿ 8 ಕೋಟಿ ಕುಟುಂಬಗಳಿಗೆ ಎಲ್ಪಿಜಿ ಪೂರೈಕೆ

ಪ್ರಧಾನ ಮಂತ್ರಿ ಉಜ್ವಾಲಾ ಯೋಜನೆ (ಪಿಎಂಯುವೈ) ಯನ್ನು ಮೇ 1, 2016 ರಂದು ಪ್ರಾರಂಭಿಸಲಾಯಿತು. ಇದು ಬಡ ಕುಟುಂಬಗಳ ಮಹಿಳಾ ಸದಸ್ಯರಿಗೆ ಮಾರ್ಚ್ 2019 ರ ವೇಳೆಗೆ 5 ಕೋಟಿ ಸಂಪರ್ಕವನ್ನು ನೀಡುವ ಗುರಿಯನ್ನು ಹೊಂದಿತು. ನಂತರ ಮಾರ್ಚ್ 2020 ರ ವೇಳೆಗೆ ಈ ಗುರಿಯನ್ನು 8 ಕೋಟಿ ಎಲ್ಪಿಜಿ ಸಂಪರ್ಕಗಳಿಗೆ ಏರಿಸಲಾಗಿತ್ತು.
ಇಂದು ಸೆಪ್ಟಂಬರ್ 7ರಂದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆಯಲಿರುವ ಪಿಎಂಯುವೈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಸೌದೆಯಿಂದ ಅಡುಗೆ ಮಾಡುವುದರಿಂದ ಪರಿಸರ ಮಾಲೀನ್ಯವಾಗುವುದಲ್ಲದೇ, ಮಹಿಳೆಯರಿಗೆ ಹೊಗೆಯಿಂದ ಶ್ವಾಸಕೋಶದ ಸಮಸ್ಯೆಗಳೂ ಎದುರಾಗುತ್ತವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬಡವರಿಗೂ ಎಲ್‌ಪಿಜಿ ಮುಟ್ಟಿಸಲು ಉಜ್ವಲಾ ಯೋಜನೆಯನ್ನು ಆರಂಭಿಸಲಾಗಿದೆ.
ಪಿಎಂಯುವೈ ಅಡಿಯಲ್ಲಿ, ಸರ್ಕಾರವು ಬಡ ಮನೆಗಳಿಗೆ ನೀಡುವ ಪ್ರತಿ ಉಚಿತ ಎಲ್‌ಪಿಜಿ ಅನಿಲ ಸಂಪರ್ಕಕ್ಕಾಗಿ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಿಗೆ ರೂ. 1,600 ಸಹಾಯಧನವನ್ನು ನೀಡುತ್ತದೆ. ಈ ಸಬ್ಸಿಡಿಯನ್ನು ಸಿಲಿಂಡರ್‌ನ ಭದ್ರತಾ ಶುಲ್ಕ ಮತ್ತು ಪಿಟ್ಟಿಂಗ್ ಶುಲ್ಕವನ್ನು ಸರಿದೂಗಿಸಲು ಉದ್ದೇಶಿಸಲಾಗಿದೆ.

Read more about: lpg money finance news
English summary

Free LPG Ujjwala scheme achieves 8 crore target before schedule

The government will achieve the target of giving 8 crore free cooking gas (LPG) connections to the poor.
Story first published: Saturday, September 7, 2019, 13:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X