ಸತತ 10ನೇ ತಿಂಗಳು ವಾಹನ ಮಾರಾಟ ಕುಸಿತ, ಅಗಸ್ಟ್ ನಲ್ಲಿ ಶೇ. 31.57 ಇಳಿಕೆ
ವಾಹನ ಉದ್ಯಮ ಭಾರೀ ಸಂಕಟದಲ್ಲಿ ಸಿಲುಕಿದ್ದು, ತಿಂಗಳಿನಿಂದ ತಿಂಗಳಿಗೆ ಕುಸಿತ ಹೆಚ್ಚಾಗುತ್ತಲೇ ಸಾಗಿದೆ.
ವಾಹನ ಉದ್ಯಮ ಭಾರೀ ಸಂಕಟದಲ್ಲಿ ಸಿಲುಕಿದ್ದು, ತಿಂಗಳಿನಿಂದ ತಿಂಗಳಿಗೆ ಕುಸಿತ ಹೆಚ್ಚಾಗುತ್ತಲೇ ಸಾಗಿದೆ. ದೇಶದಲ್ಲಿ ಸತತ ಹತ್ತನೇ ತಿಂಗಳೂ ಪ್ರಯಾಣಿಕರ ವಾಹನ ಮಾರಾಟ ಪ್ರಮಾಣದಲ್ಲಿ ಶೇಕಡಾ 31.57 ರಷ್ಟು ಕುಸಿದು, 1,96,524 ಯುನಿಟ್‌ಗಳಿಗೆ ತಲುಪಿದೆ.

ಸೋಮವಾರ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ದೇಶೀಯ ಕಾರುಗಳ ಮಾರಾಟವು ಶೇಕಡಾ 41.09 ರಷ್ಟು ಕುಸಿದು 1,15,957 ಯುನಿಟ್ ಗಳಿಗೆ ತಲುಪಿದೆ.
ಮೋಟಾರ್ ಸೈಕಲ್ ಮಾರಾಟವು ಕಳೆದ ತಿಂಗಳು ಶೇಕಡಾ 22.33 ರಷ್ಟು ಕುಸಿದು 9,37,486 ಕ್ಕೆ ತಲುಪಿದೆ. ಒಂದು ವರ್ಷದ ಹಿಂದೆ 12,07,005 ಯುನಿಟ್ ಗಳು ಮಾರಾಟವಾಗಿತ್ತು.
ಆಗಸ್ಟ್‌ನಲ್ಲಿ ವಾಣಿಜ್ಯ ವಾಹನಗಳ ಮಾರಾಟವು ಶೇ. 38.71 ರಷ್ಟು ಕುಸಿದು, 51,897 ಕ್ಕೆ ತಲುಪಿದೆ ಎಂದು ಸಿಯಾಮ್ ತಿಳಿಸಿದೆ. ಎಲ್ಲಾ ವಿಭಾಗಗಳ ವಾಹನಗಳ ಮಾರಾಟವು ಆಗಸ್ಟ್ 2018 ರಲ್ಲಿ 23,82,436 ಯುನಿಟ್ ಗಳಿಂದ 18,21,490 ಯುನಿಟ್ ಗಳಿಗೆ ತಲುಪಿದೆ. ಆಗಸ್ಟ್ ನಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟವು ಶೇಕಡಾ 22.24 ಇಳಿದು 15,14,196 ಕ್ಕೆ ತಲುಪಿದೆ. ಹಿಂದಿನ ವರ್ಷ ದ್ವಿಚಕ್ರ ವಾಹನ ಮಾರಾಟವು 19,47,304 ಯುನಿಟ್ ಗಳಷ್ಟಿತ್ತು.


Click it and Unblock the Notifications