For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಸಿಹಿಕಹಿ! ಗೃಹ ಸಾಲ, ಎಫ್ಡಿ ಮೇಲಿನ ಬಡ್ಡಿದರ ಕಡಿತ

ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಸಿಹಿಯ ಜೊತೆಗೆ ಕಹಿ ಸುದ್ದಿ ನಿಡಿದೆ.

|

ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಸಿಹಿಯ ಜೊತೆಗೆ ಕಹಿ ಸುದ್ದಿ ನಿಡಿದೆ.
ಎಸ್ಬಿಐ ಒಂದೇಡೆ ಸಾಲ ಪಡೆಯುವ ಗ್ರಾಹಕರ ಎಂಸಿಎಲ್ಆರ್ ದರವನ್ನು 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದರೆ, ಇನ್ನೊಂದೆಡೆ ಸ್ಥಿರ ಠೇವಣಿ (ಎಫ್ಡಿ) ಮೇಲಿನ ಬಡ್ಡಿದರ ಕಡಿತಗೊಳಿಸಿ ಬೇಸರ ಮೂಡಿಸಿದೆ. ಬಡಡಿದರದಲ್ಲಿನ ಕಡಿತವು ಆರ್ಬಿಐ ರೆಪೊ ದರದಲ್ಲಿ ಶೇಕಡಾ 1.1ರಷ್ಟು ಕಡಿತ ಮಾಡಿರುವ ಹಿನ್ನಲೆಯಲ್ಲಿ ಬಂದಿದೆ. ಹೊಸ ಬಡ್ಡಿ ದರ ಸೆಪ್ಟೆಂಬರ್ 10 ರಿಂದ ಜಾರಿಗೆ ಬರಲಿದ್ದು, ಎಸ್ಬಿಐ ಒಂದೇ ವರ್ಷದಲ್ಲಿ ಐದನೇ ಬಾರಿ ಎಂಸಿಎಲ್ಆರ್ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದಂತಾಗಿದೆ.

 

ಗೃಹ ಸಾಲ ಬಡ್ಡಿದರ

ಗೃಹ ಸಾಲ ಬಡ್ಡಿದರ

ಎಸ್ಬಿಐ ಗೃಹ ಸಾಲದ ಮೇಲಿನ ಬಡ್ಡಿದರ ಶೇಕಡಾ 8.05ರಿಂದ ಆರಂಭವಾಗಲಿದೆ. ಎಸ್‌ಬಿಐ ತನ್ನ ಒಂದು ವರ್ಷದ ಎಂಸಿಎಲ್ಆರ್ ದರ ಶೇ 8.15 ರಷ್ಟಾಗಲಿದೆ. ಶೇಕಡಾ 8.25ರಷ್ಟಿದ್ದ ಬಡ್ಡಿ ದರ ಶೇಕಡಾ 8.15ರಷ್ಟಕ್ಕೆ ಇಳಿದಿದೆ. ಎಸ್ಬಿಐ ಮೇ 1 ರಂದು ಸಾಲದ ಮೇಲಿನ ಬಡ್ಡಿ ದರದಲ್ಲಿ 40 ಬೇಸಿಕ್ ಪಾಯಿಂಟ್ ಇಳಿಕೆ ಮಾಡಿತ್ತು.

ಇಎಂಐ ಕಡಿಮೆ

ಇಎಂಐ ಕಡಿಮೆ

ಎಂಸಿಎಲ್ಆರ್ ದರವನ್ನು ಕಡಿತಗೊಳಿಸುವುದರಿಂದ ಬಡ್ಡಿದರ ಕಡಿಮೆಯಾಗಲಿದೆ. ಜೊತೆಗೆ ಮಾಸಿಕ ಇಎಂಐ ಕೂಡ ಕಡಿಮೆ ಬರಲಿದೆ. ಜೂನ್ 10 ರಂದು ಬ್ಯಾಂಕ್ ಬಡ್ಡಿ ದರವನ್ನು ಇಳಿಕೆ ಮಾಡಿತ್ತು. ಬಡ್ಡಿದರ ಇಳಿಕೆಯಿಂದ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗುವ ಜೊತೆಗೆ ತಿಂಗಳ ಇಎಂಐ ಕಡಿಮೆಯಾಗಿತ್ತು.

ರೆಪೊ ಲಿಂಕ್ಡ್ ಆದೇಶ
 

ರೆಪೊ ಲಿಂಕ್ಡ್ ಆದೇಶ

ಕಳೆದ ವಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕುಗಳಿಗೆ ಸಾಲಗಳನ್ನು ಕೆಲ ಬಾಹ್ಯ ಮಾನದಂಡ ಆಧಾರಿತ ಬಡ್ಡಿದರಗಳೊಂದಿಗೆ ಅಕ್ಟೋಬರ್ 1 ರಿಂದ ಲಿಂಕ್ ಮಾಡಲು ಆದೇಶಿಸಿತ್ತು. ರೆಪೊ ರೇಟ್ ಲಿಂಕ್ಡ್ ಹೋಮ್ ಲೋನ್ ಗೆ ಆದ್ಯತೆ ನೀಡಿತ್ತು. ಇತ್ತೀಚಿನ ಆರ್ಬಿಐ ರೆಪೊ ದರ ಕಡಿತದ ಪ್ರಯೋಜನಗಳನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸರಿಯಾಗಿ ವರ್ಗಾವಣೆ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

English summary

SBI Cuts Interest Rates On Home Loans and Fixed Deposits

SBI on Monday announced a reduction in its marginal cost-based lending rate or MCLR by 10 basis points. It also lowered interest rates on term deposits across all maturities by up to 25 basis points.
Story first published: Monday, September 9, 2019, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X