For Quick Alerts
ALLOW NOTIFICATIONS  
For Daily Alerts

ವಾಹನ ಕಂಪನಿಗಳಿಗೆ ಬಿಗ್ ಶಾಕ್, ಜಿಎಸ್ಟಿ ದರ ಇಳಿಕೆ ಅಸಂಭವ

ವಾಹನ ವಲಯವು ಕಳೆದ ಹಣಕಾಸು ವರ್ಷದ ದ್ವಿತೀಯಾರ್ಧದ ನಂತರ ಒತ್ತಡಕ್ಕೆ ಒಳಗಾಗಲು ಪ್ರಾರಂಭಿಸಿ, ಪ್ರಸ್ತುತ ವಾಹನ ಮಾರಾಟ ಭಾರೀ ಕುಸಿತ ಕಂಡಿದ್ದರೂ ಸರ್ಕಾರವು ವಾಹನ ವಲಯಕ್ಕೆ ಜಿಎಸ್ಟಿ ರಿಯಾಯಿತಿಗಳನ್ನು ನೀಡಲು ಅಸಂಭವವಾಗಿದೆ.

|

ವಾಹನ ವಲಯವು ಕಳೆದ ಹಣಕಾಸು ವರ್ಷದ ದ್ವಿತೀಯಾರ್ಧದ ನಂತರ ಒತ್ತಡಕ್ಕೆ ಒಳಗಾಗಲು ಪ್ರಾರಂಭಿಸಿ, ಪ್ರಸ್ತುತ ವಾಹನ ಮಾರಾಟ ಭಾರೀ ಕುಸಿತ ಕಂಡಿದ್ದರೂ ಸರ್ಕಾರವು ವಾಹನ ವಲಯಕ್ಕೆ ಜಿಎಸ್ಟಿ ರಿಯಾಯಿತಿಗಳನ್ನು ನೀಡಲು ಅಸಂಭವವಾಗಿದೆ.

 

ವಾಹನ ಕಂಪನಿಗಳಿಗೆ ಬಿಗ್ ಶಾಕ್, ಜಿಎಸ್ಟಿ ದರ ಇಳಿಕೆ ಅಸಂಭವ

ಇದು ಆಟೋಮೊಬೈಲ್ ಕಂಪನಿಗಳಿಗೆ ನಿರಾಶದಾಯಕವಾಗಿದ್ದು, ನಿರಂತರವಾಗಿ ವಾಹನಗಳ ಮಾರಾಟ ಕುಸಿಯುತ್ತಲೇ ಸಾಗಿದೆ. ಈ ಮಧ್ಯೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರ ಕಡಿತಗೊಳ್ಳುವ ಭರವಸೆಯಲ್ಲಿದ್ದ ಕಂಪನಿಗಳಿಗೆ ಮತ್ತೆ ನಿರಾಶೆ ಎದುರಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾಹನ ಮಾರಾಟವು 17% ಕ್ಕಿಂತಲೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಎಸ್ಟಿ ಸಮಿತಿಯಲ್ಲಿ ಒಮ್ಮತವಿಲ್ಲದ ಕಾರಣ, ಜಿಎಸ್ಟಿ ಮಂಡಳಿ ಸಭೆಯಲ್ಲಿ ಆಟೋಮೋಬೈಲ್ ವಲಯದ ಜಿಎಸ್ಟಿ ದರ ಇಳಿಕೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಸತತವಾಗಿ ವಾಹನ ಮಾರಾಟದಲ್ಲಿ ಕುಸಿತಕ್ಕೆ ಒಳಗಾಗಿದ್ದು, ಕಾರುಗಳ ಮಾರಾಟವು ಎರಡು ದಶಕಗಳಲ್ಲಿ ಇದೇ ಮೊದಲ ಬಾರಿ ಭಾರೀ ಕುಸಿತ ಕಂಡಿದೆ. ಇದಕ್ಕೆ ಜಿಎಸ್ಟಿ ಕಾರಣವೆಂದು ಹೇಳಲಾಗಿದೆ.
ಜಿಎಸ್ಟಿ ದರ ಕಡಿತಗೊಳಿಸದಿದ್ದರೆ ಸುಮಾರು 30 ಸಾವಿರ ಕೋಟಿ ಆದಾಯ ನಷ್ಟವಾಗಲಿದೆ. ರಾಜ್ಯಗಳು ಆಟೊಮೊಬೈಲ್ ವಲಯದಲ್ಲಿ ಕುಸಿತ ಕಾಣುವ ಆದಾಯದ ಹೊಣೆಯನ್ನು ಭರಿಸಲು ಸಿದ್ಧವಿಲ್ಲ ಎನ್ನಲಾಗಿದೆ.

Read more about: gst tax taxes automobile money
English summary

Government unlikely to offer GST concessions to auto companies

The government is unlikely to offer GST concessions to the auto sector as it believes that the current slowdown is the result of higher growth in the last few years.
Story first published: Friday, September 13, 2019, 13:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X