ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಕ್ಟೋಬರ್ ಒಂದರಿಂದ ಜಾರಿಯಾಗುವಂತೆ ವಿವಿಧ ಸೇವಾ ಶುಲ್ಕಗಳನ್ನು ಪರಿಷ್ಕರಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಕ್ಟೋಬರ್ ಒಂದರಿಂದ ಜಾರಿಯಾಗುವಂತೆ ವಿವಿಧ ಸೇವಾ ಶುಲ್ಕಗಳನ್ನು ಪರಿಷ್ಕರಿಸಿದೆ.
ಎಸ್ಬಿಐ ತನ್ನ ವಿವಿಧ ಸೇವಾ ಶುಲ್ಕ ಪರಿಷ್ಕರಣೆ ಕುರಿತು ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಡಿಪಾಸಿಟ್, ಮಾಸಿಕ ಕನಿಷ್ಟ ಬಾಕಿ ಮತ್ತು ಹಣ ಹಿಂಪಡೆಯುವಂತಹ ಸೇವೆಗಳ ಶುಲ್ಕಗಳನ್ನು ಪರಿಷ್ಕರಿಸಿದೆ.
ತಿಂಗಳ ಕನಿಷ್ಟ ಬಾಕಿ
ಗ್ರಾಹಕರು ಉಳಿತಾಯ ಖಾತೆಯಲ್ಲಿ ಹೊಂದಿರಬೇಕಾದ ಸರಾಸರಿ ಮಾಸಿಕ ಬಾಕಿ (ಎಎಂಬಿ) ಅಂದರೆ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು ಪರಿಷ್ಕರಿಸಿದೆ.
ಮಹಾನಗರ- ರೂ. 3000 (ಎಎಂಬಿ)
ಅರೆ ಪಟ್ಟಣ- ರೂ. 2000
ಗ್ರಾಮೀಣ ಪ್ರದೇಶ- ರೂ. 1000 ಕನಿಷ್ಟ ಬಾಕಿ ಮೊತ್ತ ಖಾತೆಯಲ್ಲಿರಬೇಕು. ಇಲ್ಲದಿದ್ದರೆ ಕೊರತೆ ಪ್ರಮಾಣ ಆಧರಿಸಿ ಶುಲ್ಕ ವಿಧಿಸಲಾಗುತ್ತದೆ.
ನೆಫ್ಟ್, ಆರ್ಟಿಜಿಎಸ್ ಶುಲ್ಕ
ಫಂಡ್ ವರ್ಗಾವಣೆಗೆ ಅವಕಾಶ ಕಲ್ಪಿಸುವ ನೆಫ್ಟ್ ಮತ್ತು ಆರ್ಟಿಜಿಎಸ್ ಸೇವಾ ಶುಲ್ಕಗಳು ಬದಲಾಗಿವೆ. ನೆಟ್ ಮತ್ತು ಯೋನೊ ಆಪ್ ಮುಖಾಂತರ ಫಂಡ್ ವರ್ಗಾವಣೆ ಉಚಿತವಾಗಿರಲಿದೆ.
ಬ್ಯಾಂಕ್ ಶಾಖೆಗಳಲ್ಲಿ ನೆಫ್ಟ್ ವರ್ಗಾವಣೆ ಶುಲ್ಕ:
ಹತ್ತು ಸಾವಿರ ಮೊತ್ತಕ್ಕೆ 2 ರೂಪಾಯಿ ಹಾಗು ಜಿಎಸ್ಟಿ
10 ಸಾವಿರದಿಂದ 1 ಲಕ್ಷದವರೆಗೆ 2 ರೂಪಾಯಿ ಮತ್ತು ಜಿಎಸ್ಟಿ
2 ಲಕ್ಷಕ್ಕಿಂತ ಹೆಚ್ಚು 20 ರೂಪಾಯಿ ಮತ್ತು ಜಿಎಸ್ಟಿ
ಆರ್ಟಿಜಿಎಸ್ ಶುಲ್ಕ:
2 ಲಕ್ಷದಿಂದ 5 ಲಕ್ಷ 20 ರೂಪಾಯಿ ಮತ್ತು ಜಿಎಸ್ಟಿ
5 ಲಕ್ಷಕ್ಕಿಂತ ಹೆಚ್ಚಿನ ಮೊತ್ತ 40 ರೂಪಾಯಿ ಮತ್ತು ಜಿಎಸ್ಟಿ
ಹಣ ವಿತ್ ಡ್ರಾ
ಎಸ್ಬಿಐ ವೆಬ್ಸೈಟ್ ಮಾಹಿತಿ ಪ್ರಕಾರ, ತನ್ನ ಗ್ರಾಹಕರಿಗೆ ಎಟಿಎಂಗಳಲ್ಲಿ ಎಂಟರಿಂದ ಹತ್ತು ಬಾರಿ ಉಚಿತ ವಹಿವಾಟು ನಡೆಸಲು ಅವಕಾಶ ನೀಡಿದೆ.
ನಿಯಮಿತ ಉಳಿತಾಯ ಖಾತೆದಾರರು ಎಸ್ಬಿಐ ಎಟಿಎಂಗಳಲ್ಲಿ ಐದು ಬಾರಿ ವಿತ್ ಡ್ರಾ ಹಾಗು ಇತರೆ ಎಟಿಎಂಗಳಲ್ಲಿ ಮೂರು ವಹಿವಾಟು ಒಳಗೊಂಡಂತೆ ಒಟ್ಟು ಎಂಟು ಬಾರಿ ಹಣ ವಿತ್ ಡ್ರಾ ಮಾಡಬಹುದು.
ಮಹಾನಗರಗಳಲ್ಲಿ, ಅಂತಹ ಖಾತೆದಾರರು 10 ಉಚಿತ ವಹಿವಾಟುಗಳನ್ನು ಪಡೆಯುತ್ತಾರೆ. ಇದರಲ್ಲಿ ಎಸ್‌ಬಿಐ ಎಟಿಎಂಗಳಲ್ಲಿ ಐದು ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ ಐದು ಸೇರಿವೆ.
ಕನಿಷ್ಟ ವಿತ್ ಡ್ರಾ ಮಿತಿ ಮಿರಿದರೆ ಶುಲ್ಕ?
- ಮೇಲೆ ಉಲ್ಲೇಖಿಸಿದ ಮಿತಿಯನ್ನು ಮೀರಿದ ಯಾವುದೇ ಹೆಚ್ಚುವರಿ ವಹಿವಾಟುಗಳಿಗೆ ಎಸ್‌ಬಿಐ ಶುಲ್ಕ 5 ರೂಪಾಯಿ ಜೊತೆಗೆ ಜಿಎಸ್‌ಟಿಯಿಂದ 20 ರೂಪಾಯಿ ಮತ್ತು ಜಿಎಸ್‌ಟಿ ವರೆಗೆ ಶುಲ್ಕ ವಿಧಿಸುತ್ತದೆ.
- ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ, ಮಿನಿಮಮ್ ಬ್ಯಾಲೆನ್ಸ್ ಹೊಂದಿರದಿದ್ದರೆ ₹ 20 ಜೊತೆಗೆ ಜಿಎಸ್‌ಟಿಯನ್ನು ವಿಧಿಸುತ್ತದೆ
- ಎಟಿಎಂಗಳಲ್ಲಿ ಕಾರ್ಡ್‌ಲೆಸ್ ನಗದು ಹಿಂಪಡೆಯಲು ಎಸ್‌ಬಿಐ ರೂ. 22 ಜೊತೆಗೆ ಜಿಎಸ್‌ಟಿ ವಿಧಿಸುತ್ತದೆ.
- ಎಲ್ಲಾ ಸ್ಥಳಗಳಲ್ಲಿನ ಎಲ್ಲಾ ಸಂಬಳ ಖಾತೆದಾರರಿಗೆ, ಎಸ್‌ಬಿಐ ಸ್ಟೇಟ್ ಬ್ಯಾಂಕ್ ಗ್ರೂಪ್ (ಎಸ್‌ಬಿಜಿ) ಎಟಿಎಂ ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ ಉಚಿತ ಅನಿಯಮಿತ ವಹಿವಾಟುಗಳನ್ನು ನೀಡುತ್ತದೆ.


Click it and Unblock the Notifications