ಹಬ್ಬದ ಸೀಸನ್ ಆರಂಭವಾದರೆ ಸಾಕು ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಸೇಲ್ ಆಫರ್ ಗಳನ್ನು ಘೊಷಿಸುತ್ತವೆ.
ಹಬ್ಬದ ಸೀಸನ್ ಆರಂಭವಾದರೆ ಸಾಕು ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಸೇಲ್ ಆಫರ್ ಗಳನ್ನು ಘೊಷಿಸುತ್ತವೆ.
ದಸರಾ, ದೀಪಾವಳಿ ಹಬ್ಬಗಳು ಆರಂಭವಾಗುವ ಹಿನ್ನೆಲೆಯಲ್ಲಿ ಅಮೆಜಾನ್ ಇಂಡಿಯಾ ಭರ್ಜರಿ ಮಾರಾಟ ಮೇಳ ಆರಂಭಿಸುತ್ತಿದ್ದು, ಈ ವರ್ಷ ಕೂಡ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸಲಿದೆ.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸೆಪ್ಟೆಂಬರ್ 29 ರಿಂದ ಶುರುವಾಗಿ ಅಕ್ಟೋಬರ್ 4 ರವರೆಗೆ ಒಟ್ಟು ಆರು ದಿನ ಸೇಲ್ ನಡೆಯಲಿದೆ.
ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಾಭ
ಅಮೆಜಾನ್ ಇಂಡಿಯಾದ ಪ್ರೈಮ್ ಸದಸ್ಯರು ಸೆಪ್ಟೆಂಬರ್ 28 ರಂದು ಮಧ್ಯಾಹ್ನ 12 ಗಂಟೆಯಿಂದಲೇ ಈಮಾರಾಟ ಮೇಳದ ಲಾಭ ಪಡೆಯಬಹುದು. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಸ್ಮಾರ್ಟ್ಫೋನ್, ಲ್ಯಾಪ್ ಟ್ಯಾಪ್, ಕ್ಯಾಮೆರಾ, ಅಡುಗೆ ಉತ್ಪನ್ನಗಳು, ಟಿವಿ, ಫ್ಯಾಶನ್, ದಿನಸಿ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
ಕ್ಯಾಶ್ಬಾಕ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ನಲ್ಲಿ ಗ್ರಾಹಕರಿಗೆ ಡಿಸ್ಕೌಂಟ್ ದರದಲ್ಲಿ ವಸ್ತುಗಳು ಸಿಗುವ ಜೊತೆಗೆ ಕ್ಯಾಶ್ಬ್ಯಾಕ್, ಬ್ಯಾಂಕ್ ರಿಯಾಯಿತಿ ಕೂಡ ಸಿಗಲಿದೆ. ಗ್ರೇಟ್ ಇಂಡಿಯಾ ಮಾರಾಟ ಮೇಳದ ಸಂದರ್ಭದಲ್ಲಿ ಸ್ಮಾರ್ಟ್ಫೋನ್ ಖರೀದಿ ಮಾಡುವ ಗ್ರಾಹಕರಿಗೆ ಸ್ಕ್ರೀನ್ ಪ್ರೊಟೆಕ್ಷನ್ ಉಚಿತವಾಗಿ ಸಿಗಲಿದೆ.
ಹೆಚ್ಚಿನ ಕೊಡುಗೆಗಳು
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಭಾರತದಲ್ಲಿ ಗ್ರಾಹಕರಿಗೆ ಬಹುನಿರೀಕ್ಷಿತ ಶಾಪಿಂಗ್ ಸೀಸನ್ ಆರಂಭವಾಗಲಿದೆ. ಅತ್ಯಾಕರ್ಷಕ ಮತ್ತು ವ್ಯಾಪಕವಾದ ಡೀಲ್ಸ್, ತ್ವರಿತ ಬ್ಯಾಂಕ್ ರಿಯಾಯಿತಿಗಳು, ಅಮೆಜಾನ್ ಪೇ ಇಎಂಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಮತ್ತು ಬಜಾಜ್ ಫಿನ್‌ಸರ್ವ್ ಕಾರ್ಡ್‌ಗಳು, ವೇಗದ ವಿತರಣೆ ಮತ್ತು ಉಪಕರಣಗಳ ಸ್ಥಾಪನೆ, ಮೊಬೈಲ್ ಫೋನ್‌ಗಳು ಮತ್ತು ದೊಡ್ಡ ಉಪಕರಣಗಳ ವಿನಿಮಯ, ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಮತ್ತು ಇನ್ನೂ ಹೆಚ್ಚಿನ ಕೊಡುಗೆಗಳನ್ನು ಎದುರು ನೋಡಬಹುದು ಎಂದು ಅಮೆಜಾನ್ ಇಂಡಿಯಾದ ಕೆಟಗರಿ ಮ್ಯಾನೆಜ್ಮೆಂಟ್ ಉಪಾಧ್ಯಕ್ಷ ಮನೀಶ್ ತಿವಾರಿ ಹೇಳಿದರು.


Click it and Unblock the Notifications