For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಮುಷ್ಕರ, ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ

ಬ್ಯಾಂಕ್ ಗ್ರಾಹಕರಿಗೆ ಇದು ಬಹುಮುಖ್ಯವಾದ ಸುದ್ದಿಯಾಗಿದ್ದು, ಇದೇ ತಿಂಗಳು ಮುಷ್ಕರ ಮತ್ತು ರಜಾದಿನಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ ಸೆಪ್ಟಂಬರ್ 26 ರಿಂದ 29 ರವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

|

ಬ್ಯಾಂಕ್ ಗ್ರಾಹಕರಿಗೆ ಇದು ಬಹುಮುಖ್ಯವಾದ ಸುದ್ದಿಯಾಗಿದ್ದು, ಇದೇ ತಿಂಗಳು ಮುಷ್ಕರ ಮತ್ತು ರಜಾದಿನಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ ಸೆಪ್ಟಂಬರ್ 26 ರಿಂದ 29 ರವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಬ್ಯಾಂಕ್ ಮುಷ್ಕರ, ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ

ಸತತ ನಾಲ್ಕು ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇರುವುದರಿಂದ ಯಾವುದೇ ಬ್ಯಾಮಕ್ ವ್ಯವಹಾರಗಳಿದ್ದರೆ ಮೊದಲೇ ಮುಗಿಸಿಕೊಳ್ಳುವ ತಯಾರಿ ಮಾಡಿಕೊಳ್ಳಿ. ಇಲ್ಲದಿದ್ದರೆ ಕೊನೆ ಕ್ಷಣದಲ್ಲಿ ಹಣಕಾಸು ವ್ಯವಹಾರಗಳಿಗೆ ತೊಂದರೆಯಾಗಬಹುದು.
ಸರ್ಕಾರಿ ಸ್ವಾಮ್ಯದ ಹತ್ತು ಬ್ಯಾಂಕುಗಳನ್ನು ವೀಲಿನಗೊಳಿಸಿರುವುದನ್ನು ವಿರೋಧಿಸಿ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಪೆಢರೇಷನ್ (ಎಐಬಿಒಸಿ), ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ (ಐಎನ್‌ಬಿಒಸಿ), ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಆಫೀಸರ್ಸ್ (ನೋಬೊ) ಈ ನಾಲ್ಕು ಬ್ಯಾಂಕಿಂಗ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವೀಲಿನ ವಿರೋಧಿಸಿ ಸೆಪ್ಟಂಬರ್ ತಿಂಗಳ ಕೊನೆಯ ವಾರ 4 ದಿನ ಬ್ಯಾಂಕ್ ಬಂದ್ ಆಗಲಿವೆ. ದೇಶದಾದ್ಯಂತ ಬ್ಯಾಂಕ್ ಉದ್ಯೋಗಿಗಳ ಸಂಘಟನೆಯು ಸೆಪ್ಟೆಂಬರ್ 26 ಮತ್ತು 27 ರಂದು ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ಕರೆ ನೀಡಿದೆ.
ದೇಶದಾದ್ಯಂತ ಸೆಪ್ಟೆಂಬರ್ 26 ಗುರುವಾರ ಮತ್ತು ಸೆಪ್ಟೆಂಬರ್ 27 ಶುಕ್ರವಾರದಂದು ಮುಷ್ಕರ ಕೈಗೊಳ್ಳಲಿವೆ. ಅದೇ ರೀತಿ ಸೆಪ್ಟೆಂಬರ್ 28 ರಂದು 4ನೇ ಶನಿವಾರ ರಜೆ ಇರಲಿದೆ. ಸೆಪ್ಟೆಂಬರ್ 29 ಭಾನುವಾರ ಆಗಿರುವುದರಿಂದ ಬ್ಯಾಂಕ್ ತೆರೆಯುವುದಿಲ್ಲ. ಹೀಗಾಗಿ 4 ದಿನ ಸತತವಾಗಿ ಬ್ಯಾಂಕುಗಳಿಗೆ ರಜೆ ಇರುವುದರಿಂದ ಮೊದಲೇ ಬ್ಯಾಂಕ್ ವ್ಯವಹಾರ ಪೂರೈಸಿಕೊಳ್ಳಿ.

Read more about: banking money finance news
English summary

Banks to remain shutdown for 4 days due to strikes, holidays

Banking unions have threatened to go on a two-day strike between September 26 and September 27 to protest against the PSU Bank merger.
Story first published: Monday, September 16, 2019, 10:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X