For Quick Alerts
ALLOW NOTIFICATIONS  
For Daily Alerts

ಹಬ್ಬಕ್ಕೆ ಭರ್ಜರಿ ಆಫರ್! ಕಾರುಗಳ ಮೇಲೆ ಲಕ್ಷ ಲಕ್ಷ ಡಿಸ್ಕೌಂಟ್

ವಾಹನ ಉದ್ಯಮ ಭಾರೀ ಕುಸಿತಕ್ಕೆ ಒಳಗಾಗಿದ್ದು, ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

|

ವಾಹನ ಉದ್ಯಮ ಭಾರೀ ಕುಸಿತಕ್ಕೆ ಒಳಗಾಗಿದ್ದು, ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಇನ್ನೊಂದೆಡೆ ಹಬ್ಬದ ಋತುವಿನ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕಾರು ಉತ್ಪಾದಕ ಕಂಪನಿಗಳಾದ ಟಾಟಾ ಮೋಟಾರ್ಸ್, ಮಾರುತಿ ಸುಝುಕಿ, ಟೊಯೋಟಾ, ಹೊಂಡಾ, ಮಹೀಂದ್ರಾ ತಮ್ಮ ಕಾರುಗಳ ಬೆಲೆಯಲ್ಲಿ ಈಗಾಗಲೇ ಭಾರೀ ರಿಯಾಯಿತಿ ಘೋಷಿಸಿವೆ.

 

ಹೊಂಡಾ ಆಫರ್

ಹೊಂಡಾ ಆಫರ್

ಐಶಾರಾಮಿ ಕಾರು ಉತ್ಪಾದಕ ಸಂಸ್ಥೆಯಾದ ಹೋಂಡಾ ಭರ್ಜರಿ ದರ ಇಳಿಕೆ ಮಾಡಿದ್ದು ಹೋಂಡಾ ಸಿವಿಕ್ ಮತ್ತು ಹೋಂಡಾ ಸಿಆರ್-ವಿ ಕಾರು ಕೊಳ್ಳುವವರಿಗೆ ಭರ್ಜರಿ ಆಫರ್ ನೀಡಿದೆ.
ಹೋಂಡಾ ಸಿವಿಕ್ ರೂ. 2.5 ಲಕ್ಷ ರೂಪಾಯಿ ಭರ್ಜರಿ ರಿಯಾಯಿತಿ ಘೋಷಿಸಿದೆ. ಹೊಂಡಾ ಡೀಸೆಲ್ ಕಾರುಗಳ ಮೇಲೂ 2.5 ಲಕ್ಷದವರೆಗೆ ರಿಯಾಯಿತಿ ಇದೆ. ಪೆಟ್ರೋಲ್ ಕಾರು ವಿನಿಮಯ ಮಾಡಿಕೊಳ್ಳುವುದಿದ್ದರೆ ಹೆಚ್ಚುವರಿಯಾಗಿ 25 ಸಾವಿರ ಬೋನಸ್ ಇರುವುದಾಗಿ ಹೋಂಡಾ ಕಂಪನಿ ತಿಳಿಸಿದೆ. ಹೋಂಡಾ ಸಿವಿಕ್ ಡೀಸೆಲ್ ಕಾರುಗಳ ಬೆಲೆ 20.50 ಲಕ್ಷದಿಂದ 22.30 ಲಕ್ಷ ರೂಪಾಯಿ ಇದೆ.

ಹೋಂಡಾ ಸಿಆರ್ ರೂ. 4 ಲಕ್ಷ

ಹೋಂಡಾ ಸಿಆರ್ ರೂ. 4 ಲಕ್ಷ

ಹಬ್ಬದ ಸೀಸನ್ ನಲ್ಲಿ ಕಾರು ಕಂಪನಿಗಳ ಮಾರಾಟ ಜೋರಾಗಿರುತ್ತದೆ. ಹೀಗಾಗಿ ಹೋಂಡಾ ಸಿಆರ್ ವಿ ಡೀಸೆಲ್ ಕಾರಿನ ಬೆಲೆಯಲ್ಲಿ ರೂ. 4 ಲಕ್ಷ ರಿಯಾಯಿತಿ ಘೋಷಣೆ ಮಾಡಿದೆ. ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಬಿಎಸ್-4 ವಾಹನಗಳ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇರುವುದಾಗಿ ಕಂಪನಿ ಹೇಳಿದೆ.

ಷೇರು ಕುಸಿತ ವರ್ಧನೆ
 

ಷೇರು ಕುಸಿತ ವರ್ಧನೆ

ಷೇರು ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿ ಶೇರುಗಳು ಶೇ. 4.65ರಷ್ಟಿದ್ದು, ಒಂದು ವರ್ಷದ ಹಿಂದೆ ಶೇ. 0.84ರಷ್ಟು ಕುಸಿತ ಕಂಡಿದ್ದವು. ಹೊಂಡಾ ಘೋಷಿಸಿರುವ ಭಾರೀ ರಿಯಾಯಿತಿಯಿಂದಾಗಿ ಮಾರುಕಟ್ಟೆ ಶೇರುಗಳ ಮೌಲ್ಯ ಹೆಚ್ಚಳವಾಗಲು ಸಹಾಯಕವಾಗಲಿದೆ ಎಂದು ಹೋಂಡಾ ಲೆಕ್ಕಚಾರ ಹಾಕಿಕೊಂಡಿದೆ.

ಟಾಟಾ ಮೋಟಾರ್ಸ್ ಆಫರ್

ಟಾಟಾ ಮೋಟಾರ್ಸ್ ಆಫರ್

ಟಾಟಾ ಮೋಟಾರ್ಸ್ ಕಂಪನಿಯು ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಇದು ಹೆಕ್ಸಾ ಮೇಲೆ ರೂ. 1.50 ಲಕ್ಷದವರೆಗೆ, ನೆಕ್ಸಾನ್ ಗೆ ರೂ. 85,000 ವರೆಗೆ, ಟಿಯಾಗೊ ಮೇಲೆ ರೂ. 70,000, ಟಿಯಾಗೊ ಎನ್‌ಆರ್‌ಜಿ ಮೇಲೆ ರೂ. 1.15 ಲಕ್ಷದವರೆಗೆ, ಟೈಗೊರ್ ರೂ. 70,000ವರೆಗೆ ಪ್ರಯೋಜನಗಳನ್ನು ನೀಡುತ್ತಿದೆ.

Read more about: money finance news
English summary

Honda, Tata Motors Offers Discounts Up To ₹ 2.50 Lakh

The festive season is here and it's raining discounts in a bid to attract footfalls at dealerships which is much needed at this time and hour.
Story first published: Monday, September 16, 2019, 17:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X