For Quick Alerts
ALLOW NOTIFICATIONS  
For Daily Alerts

ಸೌದಿ ಅರೇಬಿಯಾದ ಮೇಲೆ ದಾಳಿ, ತೈಲ ಬೆಲೆ ಗಗನಕ್ಕೇರಿದೆ, ಪೆಟ್ರೋಲ್ ಡೀಸೆಲ್ ದುಬಾರಿ!

ಯಮನ್ ಮೂಲದ ಹೌತಿ ಬಂಡುಕೋರರು ಸೌದಿ ಅರೇಬಿಯದ ತೈಲ ಉತ್ಪಾದನಾ ಘಟಕದ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದ್ದು, ಅಪಾರ ನಷ್ಟ ಎದುರಿಸಿರುವ ಸೌದಿ ಅರೆಬಿಯಾವು ಈ ದಾಳಿಯಿಂದಾಗಿ ತೈಲ ಉತ್ಪಾದನೆ ಶೇಕಡ 50 ರಷ್ಟು ಕುಸಿತವಾಗಿದೆ.

|

ಯಮನ್ ಮೂಲದ ಹೌತಿ ಬಂಡುಕೋರರು ಸೌದಿ ಅರೇಬಿಯದ ತೈಲ ಉತ್ಪಾದನಾ ಘಟಕದ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದ್ದು, ಅಪಾರ ನಷ್ಟ ಎದುರಿಸಿರುವ ಸೌದಿ ಅರೆಬಿಯಾವು ಈ ದಾಳಿಯಿಂದಾಗಿ ತೈಲ ಉತ್ಪಾದನೆ ಶೇಕಡ 50 ರಷ್ಟು ಕುಸಿತವಾಗಿದೆ.
ಸೌದಿ ಅರೇಬಿಯದ ತೈಲ ಉತ್ಪಾದನಾ ಘಟಕದ ಮೇಲಿನ ದಾಳಿಯ ಪರಿಣಾಮ ತೈಲ ಬೆಲೆ ಗಗನಕ್ಕೇರಿದೆ.
ಕೇಂದ್ರದ ಬಿಜೆಪಿ ಸರ್ಕಾರ ತನ್ನ ಎರಡನೇ ಅವಧಿಯ ಮೊದಲ ಬಜೆಟ್ ಮಂಡನೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಿತ್ತು. ಸುಂಕ ಏರಿಕೆ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿತ್ತು.
ಕೇಂದ್ರ ಸರ್ಕಾರ ತೈಲ ದರ ಏರಿಕೆ ಮಾಡಿದ್ದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡರೆ ವಾಹನ ಸವಾರರ ಮೊಗದಲ್ಲಿ ಮಂದಹಾಸ ಮೂಡುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಡಾಲರ್ ಬೆಲೆ ಕುಸಿಯುತ್ತಿರುವ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗತ್ತಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ..

ಸೌದಿ ಅರೇಬಿಯಾದ ಮೇಲೆ ದಾಳಿ, ತೈಲ ಬೆಲೆ ಗಗನಕ್ಕೇರಿದೆ

ಸೌದಿ ಅರೇಬಿಯಾದ ಮೇಲೆ ದಾಳಿ, ತೈಲ ಬೆಲೆ ಗಗನಕ್ಕೇರಿದೆ

ಯಮನ್ ಮೂಲದ ಹೌತಿ ಬಂಡುಕೋರರು ಸೌದಿ ಅರೇಬಿಯದ ತೈಲ ಉತ್ಪಾದನಾ ಘಟಕದ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದ್ದು, ಅಪಾರ ನಷ್ಟ ಎದುರಿಸಿರುವ ಸೌದಿ ಅರೆಬಿಯಾವು ಈ ದಾಳಿಯಿಂದಾಗಿ ತೈಲ ಉತ್ಪಾದನೆ ಶೇಕಡ 50 ರಷ್ಟು ಕುಸಿತವಾಗಿದೆ.
ಸೌದಿ ಅರೇಬಿಯದ ತೈಲ ಉತ್ಪಾದನಾ ಘಟಕದ ಮೇಲಿನ ದಾಳಿಯ ಪರಿಣಾಮ ತೈಲ ಬೆಲೆ ಗಗನಕ್ಕೇರಿದೆ. ಇಂದು ಸೋಮವಾರದಂದು ಪ್ರತಿ ಬ್ಯಾರೆಲ್ ಗೆ 12 ಡಾಲರ್ ಏರಿಕೆ ಕಂಡಿದೆ. ಇದರಿಂದಾಗಿ 60 ಡಾಲರ್ ಇದ್ದ ಕಚ್ಚಾ ತೈಲ ದರ ಈಗ 72 ಡಾಲರ್ ತಲುಪಿದೆ.
ಭಾರತವು ಸೌದಿ ಅರೇಬಿಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರವಾಗಿದೆ. ಇದೀಗ ಕಚ್ಚಾತೈಲ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆಯಗಲಿದೆ. ಆರ್ಥಿಕ ಹಿಂಜರಿತದಲ್ಲಿ ಸಿಲುಕಿರುವ ಭಾರತಕ್ಕೆ ತೈಲ ಬೆಲೆ ಏರಿಕೆ ಮತ್ತಷ್ಟು ಕಗ್ಗಂಟಾಗಲಿದೆ.

ತೈಲ ಬೆಲೆ ಏರಿಳಿತಕ್ಕೆ ಕಾರಣ

ತೈಲ ಬೆಲೆ ಏರಿಳಿತಕ್ಕೆ ಕಾರಣ

ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್, ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:ಪೆಟ್ರೋಲ್: 74.49/ಲೀಟರ್
ಡೀಸೆಲ್: 67.66/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 74.48/ಲೀಟರ್
ಡೀಸೆಲ್: 67.66/ಲೀಟರ್

ಧಾರವಾಡ:
ಪೆಟ್ರೋಲ್: 74.48/ಲೀಟರ್
ಡೀಸೆಲ್: 67.66/ಲೀಟರ್

ಮೈಸೂರು:
ಪೆಟ್ರೋಲ್: 74.23/ಲೀಟರ್
ಡೀಸೆಲ್: 67.42/ಲೀಟರ್

ಮಂಗಳೂರು:
ಪೆಟ್ರೋಲ್: 73.77/ಲೀಟರ್
ಡೀಸೆಲ್: 66.97/ಲೀಟರ್

ಬೆಳಗಾವಿ:
ಪೆಟ್ರೋಲ್: 75.22/ಲೀಟರ್
ಡೀಸೆಲ್: 68.35/ಲೀಟರ್

 

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:
ಪೆಟ್ರೋಲ್: 74.42/ಲೀಟರ್
ಡೀಸೆಲ್: 67.86/ಲೀಟರ್

ರಾಮನಗರ:
ಪೆಟ್ರೋಲ್: 74.69/ಲೀಟರ್
ಡೀಸೆಲ್: 67.86/ಲೀಟರ್

ಚಿಕ್ಕಬಳ್ಳಾಪುರ:
ಪೆಟ್ರೋಲ್: 74.53/ಲೀಟರ್
ಡೀಸೆಲ್: 67.69/ಲೀಟರ್

ಮಂಡ್ಯ:
ಪೆಟ್ರೋಲ್: 74.41/ಲೀಟರ್
ಡೀಸೆಲ್: 67.57/ಲೀಟರ್

ತುಮಕೂರು:
ಪೆಟ್ರೋಲ್: 74.91/ಲೀಟರ್
ಡೀಸೆಲ್: 68.07/ಲೀಟರ್

ದಾವಣಗೆರೆ:
ಪೆಟ್ರೋಲ್: 75.88/ಲೀಟರ್
ಡೀಸೆಲ್: 68.80/ಲೀಟರ್

 

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:
ಪೆಟ್ರೋಲ್: 74.97/ಲೀಟರ್
ಡೀಸೆಲ್: 68.04/ಲೀಟರ್

ಚಿಕ್ಕಮಗಳೂರು:
ಪೆಟ್ರೋಲ್: 75.38/ಲೀಟರ್
ಡೀಸೆಲ್: 68.39/ಲೀಟರ್

ಉಡುಪಿ:
ಪೆಟ್ರೋಲ್: 74.07/ಲೀಟರ್
ಡೀಸೆಲ್: 67.19/ಲೀಟರ್

ಹಾಸನ:
ಪೆಟ್ರೋಲ್: 74.42/ಲೀಟರ್
ಡೀಸೆಲ್: 67.45/ಲೀಟರ್

ಕಾರವಾರ:
ಪೆಟ್ರೋಲ್: 75.51/ಲೀಟರ್
ಡೀಸೆಲ್: 68.44/ಲೀಟರ್

ಕೊಡಗು, ವಿರಾಜಪೇಟೆ:
ಪೆಟ್ರೋಲ್: 74.97/ಲೀಟರ್
ಡೀಸೆಲ್: 68.0468/ಲೀಟರ್

ಚಾಮರಾಜನಗರ:
ಪೆಟ್ರೋಲ್: 74.69/ಲೀಟರ್
ಡೀಸೆಲ್: 67.86/ಲೀಟರ್

 

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ:
ಪೆಟ್ರೋಲ್: 75.72/ಲೀಟರ್
ಡೀಸೆಲ್: 68.75/ಲೀಟರ್

ಹಾವೇರಿ:
ಪೆಟ್ರೋಲ್: 74.99/ಲೀಟರ್
ಡೀಸೆಲ್: 68.19/ಲೀಟರ್

ಬಿಜಾಪುರ:
ಪೆಟ್ರೋಲ್: 74.52/ಲೀಟರ್
ಡೀಸೆಲ್: 67.72/ಲೀಟರ್

ಬಾಗಲಕೋಟೆ:
ಪೆಟ್ರೋಲ್: 76.38/ಲೀಟರ್
ಡೀಸೆಲ್: 69.8/ಲೀಟರ್

ಬಾದಾಮಿ:
ಪೆಟ್ರೋಲ್: 76.38/ಲೀಟರ್
ಡೀಸೆಲ್: 69.8/ಲೀಟರ್

 

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಗದಗ:
ಪೆಟ್ರೋಲ್: 74.78/ಲೀಟರ್
ಡೀಸೆಲ್: 67.97/ಲೀಟರ್

ಬಳ್ಳಾರಿ:
ಪೆಟ್ರೋಲ್: 75.95/ಲೀಟರ್
ಡೀಸೆಲ್: 69.02/ಲೀಟರ್

ಕೊಪ್ಪಳ:
ಪೆಟ್ರೋಲ್: 75.21/ಲೀಟರ್
ಡೀಸೆಲ್: 68.40/ಲೀಟರ್

ರಾಯಚೂರು
ಪೆಟ್ರೋಲ್: 74.63/ಲೀಟರ್
ಡೀಸೆಲ್: 67.83/ಲೀಟರ್

ಬೀದರ
ಪೆಟ್ರೋಲ್: 75.19/ಲೀಟರ್
ಡೀಸೆಲ್: 68.4/ಲೀಟರ್

ಯಾದಗಿರಿ:
ಪೆಟ್ರೋಲ್: 74.86/ಲೀಟರ್
ಡೀಸೆಲ್: 68.05/ಲೀಟರ್

ಗುಲ್ಬರ್ಗ
ಪೆಟ್ರೋಲ್: 74.71/ಲೀಟರ್
ಡೀಸೆಲ್: 67.89/ಲೀಟರ್

 

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 77.71/ಲೀಟರ್
ಡೀಸೆಲ್: 68.62/ಲೀಟರ್

ದೆಹಲಿ:
ಪೆಟ್ರೋಲ್: 72.03/ಲೀಟರ್
ಡೀಸೆಲ್: 65.43/ಲೀಟರ್

ಚೆನ್ನೈ:
ಪೆಟ್ರೋಲ್: 74.85/ಲೀಟರ್
ಡೀಸೆಲ್: 69.15/ಲೀಟರ್

ಹೈದರಾಬಾದ್:
ಪೆಟ್ರೋಲ್: 76.57/ಲೀಟರ್
ಡೀಸೆಲ್: 71.33/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 74.76/ಲೀಟರ್
ಡೀಸೆಲ್: 67.85/ಲೀಟರ್

ಗುವಾಹಟಿ:
ಪೆಟ್ರೋಲ್: 74.24/ಲೀಟರ್
ಡೀಸೆಲ್: 68.64/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 69.69/ಲೀಟರ್
ಡೀಸೆಲ್: 68.69/ಲೀಟರ್

ಜೈಪುರ:
ಪೆಟ್ರೋಲ್: 76.37/ಲೀಟರ್
ಡೀಸೆಲ್: 70.93/ಲೀಟರ್

ಪಣಜಿ:
ಪೆಟ್ರೋಲ್: 68.2/ಲೀಟರ್
ಡೀಸೆಲ್: 66.23/ಲೀಟರ್

ಲಖನೌ:
ಪೆಟ್ರೋಲ್: 73.92/ಲೀಟರ್
ಡೀಸೆಲ್: 65.71/ಲೀಟರ್

 

ತೈಲ ಆಮದು ನಿಷೇಧ ಎಫೆಕ್ಟ್?

ತೈಲ ಆಮದು ನಿಷೇಧ ಎಫೆಕ್ಟ್?

ಈಗಾಗಲೇ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿರುವುದು ಆತಂಕ ಮೂಡಿಸಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್‌ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್‌ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್‌, ಯುಎಇಯಿಂದ 10 ಲಕ್ಷ ಟನ್‌ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಬಹುದು.

English summary

Oil prices jumps after attack cuts Saudi Arabian supplies, Petrol Diesel price hikes!

Global oil prices surged the most on record after a strike on a Saudi Arabian oil facility removed about 5% of global supplies.
Story first published: Monday, September 16, 2019, 9:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X