ಭೌಗೋಳೀಕ ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಭೀತಿಯಿಂದ ಭಾರತೀಯ ಷೇರುಪೇಟೆ ಮಾರಾಟದ ಒತ್ತಡದ ಮಧ್ಯೆ ತೀವ್ರ ನಷ್ಟವನ್ನು ಅನುಭವಿಸಿತು.
ಭೌಗೋಳೀಕ ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಭೀತಿಯಿಂದ ಭಾರತೀಯ ಷೇರುಪೇಟೆ ಮಾರಾಟದ ಒತ್ತಡದ ಮಧ್ಯೆ ತೀವ್ರ ನಷ್ಟವನ್ನು ಅನುಭವಿಸಿತು.
ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 642.22 ಪಾಯಿಂಟ್ ಗಳಷ್ಟು ಕುಸಿದು 36,481 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ ಸೂಚ್ಯಂಕವು 185.90 ಅಂಕ ಕುಸಿತದೊಂದಿಗೆ 10,817.60 ಮಟ್ಟಕ್ಕೆ ತಲುಪಿದೆ.
ನಿಫ್ಟಿ ಸೂಚ್ಯಂಕದಲ್ಲಿ ಹೀರೋ ಮೊಟೊಕಾರ್ಪ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಮಾರುತಿ ಸುಜುಕಿ ನಷ್ಟ ಕಂಡವು. ಗೇಲ್, ಎಚ್‌ಯುಎಲ್, ಟೈಟಾನ್ ಕಂಪನಿ, ಏಷ್ಯನ್ ಪೇಂಟ್ಸ್ ಮತ್ತು ಡಾ. ರೆಡ್ಡಿ ಲ್ಯಾಬ್ಸ್ ಲಾಭ ಗಳಿಸಿದವು.
ಷೇರು ಮಾರುಕಟ್ಟೆಯ ಪ್ರಮುಖ ಅಂಶಗಳು ಇಲ್ಲಿವೆ
- ಸೆನ್ಸೆಕ್ಸ್ ಷೇರುಗಳಲ್ಲಿ ಹೀರೋ ಮೊಟೊಕಾರ್ಪ್ 4.4%, ಆಕ್ಸಿಸ್ ಬ್ಯಾಂಕ್ 3.75% ಕುಸಿದಿದ್ದರೆ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಬಜಾಜ್ ಆಟೋ, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಮಾರುತಿ, ಎಚ್‌ಡಿಎಫ್‌ಸಿ ಮತ್ತು ಭಾರ್ತಿ ಏರ್‌ಟೆಲ್ ಶೇಕಡಾ 2 ರಿಂದ 3 ರಷ್ಟು ಕುಸಿದವು.
- ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಆರು ವರ್ಷಗಳಲ್ಲಿ ಕನಿಷ್ಠ ಶೇಕಡಾ 5ಕ್ಕೆ ಕುಸಿದ ನಂತರ, ತೈಲ ಬೆಲೆಗಳ ಏರಿಕೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
- ದಾಳಿಯ ನಂತರವೂ ತೈಲ ಬೆಲೆ ಏರಿಕೆ ಮುಂದುವರಿದರೆ ಭಾರತದ ಚಾಲ್ತಿ ಖಾತೆ ಮತ್ತು ಹಣಕಾಸಿನ ಕೊರತೆ ಎದುರಾಗಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.
- ಸೌದಿ ಅರೇಬಿಯಾದ ಕಚ್ಚಾ ತೈಲ ಉತ್ಪಾದಕ ಘಟಕಗಳ ಮೇಲಿನ ದಾಳಿಗೆ ಮಿಲಿಟರಿ ಪ್ರತಿಕ್ರಿಯೆಯ ಪರಿಣಾಮ ತೈಲ ಬೆಲೆಗಳು ಇಂದು 4 ತಿಂಗಳ ಗರಿಷ್ಠ ಮಟ್ಟದಲ್ಲಿ ಉಳಿದಿವೆ. ತೈಲ ಘಟಕಗಳ ಮೇಲಿನ ಡ್ರೋನ್ ದಾಳಿಯು ತೈಲ ಉತ್ಪಾದನೆಯನ್ನು ಅರ್ಧಕ್ಕೆ ಇಳಿಸಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
- ಜಿಎಸ್ಟಿ ಸಭೆ ಸೆಪ್ಟೆಂಬರ್ 20 ರಂದು ನಿಗದಿಯಾಗಿದೆದ್ದು, ಪ್ರಸ್ತುತ ಸನ್ನಿವೇಶದಲ್ಲಿ, ಮಾರುಕಟ್ಟೆಗಳು ಚಂಚಲವಾಗಿರಲಿವೆ ಎಂದು ನಾವು ನಿರೀಕ್ಷಿಸಲಾಗಿದೆ.
- ತೈಲ ಮಾರಾಟಗಾರರು ಬಿಪಿಸಿಎಲ್, ಇಂಡಿಯನ್ ಆಯಿಲ್ ಮತ್ತು ಎಚ್‌ಪಿಸಿಎಲ್ ನಷ್ಟವನ್ನು ಎರಡನೇ ದಿನಕ್ಕೂ ಮುಂದುವರೆದಿದ್ದು, ಶೇಕಡಾ 2 ರಿಂದ 3% ನಷ್ಟಿದೆ.
ರೂಪಾಯಿ ಮೌಲ್ಯ ಕುಸಿತ
ವಾರದ ಆರಂಭದಿಂದಲೂ ಭಾರತೀಯ ರೂಪಾಯಿ ತೀವ್ರವಾಗಿ ದುರ್ಬಲಗೊಂಡಿದೆ. 96 ಪೈಸೆ ಕುಸಿದಿದ್ದು, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 72ರಷ್ಟಿದೆ. ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ಪ್ರತಿಕೂಲ ಪರಿಣಾಮ ಬೀರಿದೆ.
ವಿದೇಶಿ ವ್ಯಾಪಾರಿಗಳು ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್ ದಾಳಿಯು ಯುಎಸ್ ಡಾಲರ್ ನಂತಹ ಸುರಕ್ಷಿತ ಕರೆನ್ಸಿಗಳಿಗೆ ಬೇಡಿಕೆಯನ್ನು ಉಂಟುಮಾಡಿದೆ ಎಂದಿದ್ದಾರೆ.
ಡ್ರೋನ್ ದಾಳಿ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ
ಸೆಪ್ಟೆಂಬರ್ 14 ರಂದು, ವಿಶ್ವದ ಅತಿದೊಡ್ಡ ಪೆಟ್ರೋಲಿಯಂ ಸಂಸ್ಕರಣಾ ಘಟಕ ಸೇರಿದಂತೆ ತೈಲ ಉದ್ಯಮದ ಹೃದಯಭಾಗದಲ್ಲಿರುವ ಎರಡು ಸೌದಿ ಅರಾಮ್ಕೊ ಘಟಕಗಳ ಮೇಲೆ ಡ್ರೋನ್‌ಗಳಿಂದ ದಾಳಿ ಮಾಡಲ್ಪಟ್ಟವು. ಅಬ್ಕೈಕ್ ತೈಲ ಸಂಸ್ಕರಣಾ ಘಟಕ ಮತ್ತು ಖುರೈಸ್ ತೈಲ ಕ್ಷೇತ್ರ ಎಂಬ ಎರಡು ಘಟಕಗಳ ಮೇಲಿನ ದಾಳಿಯು ದಿನಕ್ಕೆ 5.7 ಮಿಲಿಯನ್ ಬ್ಯಾರೆಲ್‌ಗಳ ತಾತ್ಕಾಲಿಕ ಕೊರತೆಗೆ ಕಾರಣವಾಯಿತ. ಇದು ಜಾಗತಿಕ ಕಚ್ಚಾ ತೈಲ ಪೂರೈಕೆಯ 5 ಪ್ರತಿಶತ ಅಥವಾ ಸೌದಿಯ ತೈಲ ಉತ್ಪಾದನೆಯ 50 ಪ್ರತಿಶತ ಕುಸಿಯಿತು.


Click it and Unblock the Notifications