ಶೀಘ್ರದಲ್ಲೇ ಭೂ ದಾಖಲೆಗೆ ಆಧಾರ್ ಲಿಂಕ್ ಕಡ್ಡಾಯ!

ಪಾರದರ್ಶಕತೆ ತರುವ ಮತ್ತು ಸಂಶಯಾಸ್ಪದ ಭೂ ಮಾಲೀಕತ್ವವನ್ನು ಕೊನೆಗೊಳಿಸುವ ಸಲುವಾಗಿ ಶೀಘ್ರದಲ್ಲೇ ಭೂಧಾಖಲೆಗಳೊಂದಿಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿದೆ.

ಪಾರದರ್ಶಕತೆ ತರುವ ಮತ್ತು ಸಂಶಯಾಸ್ಪದ ಭೂ ಮಾಲೀಕತ್ವವನ್ನು ಕೊನೆಗೊಳಿಸುವ ಸಲುವಾಗಿ ಶೀಘ್ರದಲ್ಲೇ ಭೂಧಾಖಲೆಗಳೊಂದಿಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿದೆ.
ಆಧಾರ್ ಸಂಖ್ಯೆಯನ್ನು ನಿಗದಿಪಡಿಸುವ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ಪ್ರಾರಂಭಿಸಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ದೇಶದ ಭೂ ಮಾಲೀಕತ್ವದ ಗೊಂದಲಗಳನ್ನು ಪರಿಹರಿಸುವ ಸಲುವಾಗಿ ಭೂ ದಾಖಲಾತಿಗಳೊಂದಿಗೆ ಆಧಾರ್ ನಂಬರ್ ಲಿಂಕ್ ಮಾಡುವ ಕೆಲಸಕ್ಕೆ ಮುಂದಾಗಿದೆ.

ಭೂ ಮಾಲೀಕತ್ವದಲ್ಲಿ ಪಾರದರ್ಶಕತೆ

ಭೂ ಮಾಲೀಕತ್ವದಲ್ಲಿ ಪಾರದರ್ಶಕತೆ

ಯಾರದ್ದೋ ಸೈಟ್, ಯಾರದ್ದೋ ಮನೆ, ಇನ್ಯಾರಿಗೋ ಮಾರಾಟದಂತಹ ಪ್ರಕರಣಗಳು ದಿನೇದಿನೇ ಕೇಳಿಬರುತ್ತಿರುವ ಬೆನ್ನಲ್ಲೇ ಭೂ ಮಾಲೀಕತ್ವದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಸೈಟ್ ಗೆ ಆಧಾರ್ ಜೋಡಣೆಯಿಂದಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲಕರವಾಗಲಿದೆ. ಅಲ್ಲದೇ ಆಸ್ತಿ ತೆರಿಗೆ ಸಮಸ್ಯೆ ಪರಿಹರಿಸಲು, ವಿಪತ್ತು ಸಂದರ್ಭದಲ್ಲಿ ಪರಿಹಾರ ನೀಡಲು ಇದು ಸಹಾಯವಾಗಲಿದೆ.

ವ್ಯಾಜ್ಯ ಪರಿಹಾರ

ವ್ಯಾಜ್ಯ ಪರಿಹಾರ

ಭೂ ಮಾಲೀಕತ್ವಕ್ಕೆ ಆಧಾರ್ ಜೋಡಣೆಯಾದರೆ ಕಂದಾಯ ಇಲಾಖೆಯ ಸಮಸ್ಯೆಗಳು ಹಾಗು ಭೂ ಸಂಬಂಧಿ ವ್ಯಾಜ್ಯಗಳು ಕೂಡ ಸುಲಭವಾಗಿ ಇತ್ಯರ್ಥಗೊಳ್ಳಲಿದೆ. ಈಗಾಗಲೇ ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಭೂ ಮಾರಾಟ, ಖರೀದಿ, ತೆರಿಗೆ ಸಂಗ್ರಹದಂತಹ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಲಿದೆ.

ದಾಖಲೆಗಳ ಗೊಂದಲ ಪರಿಹಾರ

ದಾಖಲೆಗಳ ಗೊಂದಲ ಪರಿಹಾರ

ನಮ್ಮ ದೇಶದ ನ್ಯಾಯಾಲಯಗಳಲ್ಲಿ ಇರುವ ಹೆಚ್ಚಿನ ವ್ಯಾಜ್ಯಗಳಲ್ಲಿ ಭೂ ಮಾಲೀಕತ್ವಕ್ಕೆ ಸಂಬಂಧಿಸಿದ್ದು ಹೆಚ್ಚಿವೆ. ಎಷ್ಟೇ ವರ್ಷ ಕಳೆದರೂ ವ್ಯಾಜ್ಯಗಳು ಮಾತ್ರ ಬಗೆಹರಿಯುವುದೇ ಇಲ್ಲ. ದಾಖಲೆಗಳಲ್ಲಿನ ಗೊಂದಲವೇ ಇದಕ್ಕೆ ಪ್ರಮುಖ ಕಾರಣ. ಹೀಗಾಗಿ ಆಧಾರ್ ಜೋಡಣೆ ಮಾಡಿದರೆ ಇದಕ್ಕೆ ಪರಿಹಾರ ಸಿಗಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+