For Quick Alerts
ALLOW NOTIFICATIONS  
For Daily Alerts

ಆಧಾರ್ ಹೊಸ ನಿಯಮ: ತಿದ್ದುಪಡಿಗೂ ಮುನ್ನ ನಿಮಗಿದು ಗೊತ್ತಿರಲಿ

ಆಧಾರ್ ಕಾರ್ಡ್ ಎಂದರೆ ಬ್ಯಾಂಕ್ ಖಾತೆಯಿಂದ ಹಿಡಿದು ಪಾಸ್‌ಪೋರ್ಟ್ ಮಾಡಲು ಬೇಕಾದ ದಾಖಲಲಾತಿ.ಆದರೆ, ಆಧಾರ್ ಕಾರ್ಡ್ ನಲ್ಲಿ ಹೆಸರು ಅಥವಾ ಹುಟ್ಟಿದ ದಿನಾಂಕ ತಪ್ಪಾಗಿದ್ದರೆ ಸಮಸ್ಯೆಯಾಗುತ್ತದೆ.

|

ಆಧಾರ್ ಕಾರ್ಡ್ ಎಂದರೆ ಬ್ಯಾಂಕ್ ಖಾತೆಯಿಂದ ಹಿಡಿದು ಪಾಸ್‌ಪೋರ್ಟ್ ಮಾಡಲು ಬೇಕಾದ ದಾಖಲಲಾತಿ.ಆದರೆ, ಆಧಾರ್ ಕಾರ್ಡ್ ನಲ್ಲಿ ಹೆಸರು ಅಥವಾ ಹುಟ್ಟಿದ ದಿನಾಂಕ ತಪ್ಪಾಗಿದ್ದರೆ ಸಮಸ್ಯೆಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಹುಟ್ಟಿದ ದಿನಾಂಕ, ಹೆಸರಿನಲ್ಲಿ ಬದಲಾವಣೆಗಾಗಿ ಕೆಲವು ಷರತ್ತುಗಳನ್ನು ನಿಗದಿಪಡಿಸಿದೆ. ಅದೇ ಸಮಯದಲ್ಲಿ, ಮೊಬೈಲ್ ಸಂಖ್ಯೆ ಮತ್ತು ಇತರ ಬದಲಾವಣೆಗಳಿಗೆ ದಾಖಲಾತಿಗಳ ಅಗತ್ಯ ಇರುವುದಿಲ್ಲ. ನೀವೂ ಸಹ ಆಧಾರ್ ನವೀಕರಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ನಿಯಮ ತಿಳಿದಿರಲಿ.

ಜನ್ಮ ದಿನಾಂಕ ತಪ್ಪಾಗಿದ್ದರೆ?

ಜನ್ಮ ದಿನಾಂಕ ತಪ್ಪಾಗಿದ್ದರೆ?

ಆಧಾರ್ ನಲ್ಲಿ ಜನ್ಮ ದಿನಾಂಕದಲ್ಲಿ ತಪ್ಪಾಗಿದ್ದಲ್ಲಿ ಸರಿಪಡಿಸಲು ಯುಐಡಿಎಐ ಷರತ್ತು ವಿಧಿಸಿದೆ. ಇದರ ಪ್ರಕಾರ, ನಿಮ್ಮ ಜನ್ಮ ದಿನಾಂಕ ಮೂರು ವರ್ಷದೊಳಗಿನ ವ್ಯತ್ಯಾಸ ಹೊಂದಿದ್ದರೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ದಾಖಲೆ ತೆಗೆದುಕೊಂಡು ಹೋಗಿ ಸರಿಪಡಿಸಿಕೊಳ್ಳಬಹುದು. ಮೂರು ವರ್ಷಗಳಿಗಿಂತ ಹೆಚ್ಚು ವ್ಯತ್ಯಾಸವಿದ್ದರೆ ಪ್ರಾದೇಶಿಕ ಮೂಲ ಕೇಂದ್ರಕ್ಕೆ ದಾಖಲಾತಿಗಳೊಂದಿಗೆ ಹೋಗಬೇಕಾಗುತ್ತದೆ. ಒಮ್ಮೆ ಮಾತ್ರ ಈ ಬದಲಾವಣೆ ಸಾಧ್ಯವೆಂದು ಯುಐಡಿಎಐ ಹೇಳಿದೆ.

ಈ ದಾಖಲೆಗಳು ಅಗತ್ಯ

ಈ ದಾಖಲೆಗಳು ಅಗತ್ಯ

ಹುಟ್ಟಿದ ದಿನಾಂಕ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಗ್ರೂಪ್-ಎ ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣೀಕೃತ ಜನ್ಮ ದಿನಾಂಕ, ಫೋಟೋ ಗುರುತಿನ ಚೀಟಿಯ ಪ್ರಮಾಣಪತ್ರ, ಕೇಂದ್ರ ಸರ್ಕಾರಿ ಆರೋಗ್ಯ ಸೇವಾ ಯೋಜನೆ ಫೋಟೋ ಕಾರ್ಡ್ ಅಥವಾ ಮಾಜಿ ಸೈನಿಕರ ಫೋಟೋ ಐಡಿ, 10 ನೇ ತರಗತಿ ಅಥವಾ 12 ನೇ ತರಗತಿ ಪ್ರಮಾಣಪತ್ರ ಈ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು.

ತಪ್ಪಾದ ಹೆಸರು ತಿದ್ದುಪಡಿ

ತಪ್ಪಾದ ಹೆಸರು ತಿದ್ದುಪಡಿ

ನಿಮ್ಮ ಹೆಸರನ್ನು ತಪ್ಪಾಗಿ ಮುದ್ರಿಸಿದ್ದರೆ ಮತ್ತು ನೀವು ಅದನ್ನು ನವೀಕರಿಸಲು ಬಯಸಿದರೆ ಇದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಸಹ ನೀಡಲಾಗಿದೆ. ಯುಐಡಿಎಐನ ಹೊಸ ನಿರ್ಧಾರದ ಪ್ರಕಾರ, ಹೆಸರು ನವೀಕರಣಕ್ಕೆ ಎರಡು ಅವಕಾಶ ನೀಡಲಾಗಿದೆ.
ಎರಡನೇ ಬಾರಿಯೂ ಹೆಸರು ತಪ್ಪಾದಲ್ಲಿ ಹೊಸದಾಗಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೆಸರು ನವೀಕರಣ ಹಾಗೂ ಜನ್ಮ ದಿನಾಂಕ ನವೀಕರಣಕ್ಕೆ ಅನೇಕ ದಾಖಲೆಗಳು ಬೇಕಾಗುತ್ತವೆ.
ಆದರೆ ಮೊಬೈಲ್ ನಂಬರ್ ಸೇರಿದಂತೆ ವಿಳಾಸ ಬದಲಾವಣೆ ಹಾಗೂ ಸಣ್ಣ ಪುಟ್ಟ ನವೀಕರಣಕ್ಕೆ ದಾಖಲೆಗಳೂ ಬೇಡವೆಂದು ಯುಐಡಿಎಐ ಹೇಳಿದೆ.

Read more about: aadhar pan card money
English summary

Aadhaar card: No documents required to update mobile number, photo and mail id

You can get your latest photograph updated in the Aadhaar card without submitting any documents.
Story first published: Thursday, September 19, 2019, 13:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X