10 ವರ್ಷಗಳಲ್ಲೇ ಒಂದೇ ದಿನದಲ್ಲಿ 2000 ಅಂಕ ಏರಿಕೆ, 1 ಗಂಟೆಯಲ್ಲಿ 5.82 ಲಕ್ಷ ಕೋಟಿ ಗಳಿಸಿದ ಹೂಡಿಕೆದಾರರು
ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 35 ರಿಂದ 25ಕ್ಕೆ ಇಳಿಸಿದ ನಂತರ ಕಳೆದ 10 ವರ್ಷಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರೀ ಲಾಭವನ್ನು ದಾಖಲಿಸಿದ್ದರಿಂದ ಇದು ದೇಶೀ ಮಾರುಕಟ್ಟೆಯಲ್ಲಿ ಬ್ಲಾಕ್ಬಸ್ಟರ್ ದಿನವಾಗಿತ್ತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 35 ರಿಂದ 25ಕ್ಕೆ ಇಳಿಸಿದ ನಂತರ ಕಳೆದ 10 ವರ್ಷಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರೀ ಲಾಭವನ್ನು ದಾಖಲಿಸಿದ್ದರಿಂದ ಇದು ದೇಶೀ ಮಾರುಕಟ್ಟೆಯಲ್ಲಿ ಬ್ಲಾಕ್ಬಸ್ಟರ್ ದಿನವಾಗಿತ್ತು.

ಕಾರ್ಪೋರೇಟ್ ಟ್ಯಾಕ್ಸ್ ಕಡಿತ ಘೋಷಣೆ ಮಾಡುತ್ತಿದ್ದಂತೆ ಮುಂಬೈ ಷೇರು ಪೇಟೆಯಲ್ಲಿ ಗೂಳಿ ಓಟ ಆರಂಭವಾಯಿತು.
ಸೆನ್ಸೆಕ್ಸ್ ಸೂಚ್ಯಂಕವು 1,921.15 ಪಾಯಿಂಟ್ (5.32%) 38,014.62 ಮಟ್ಟ ದಾಖಲಿಸಿದ್ದರೆ, ನಿಫ್ಟಿ ಸೂಚ್ಯಂಕ 569.40 ಪಾಯಿಂಟ್ ಏರಿಕೆಯೊಂದಿಗೆ 11,274.20 ಅಂಶಗಳಲ್ಲಿ ವಹಿವಾಟು ನಡೆಸಿತು.
ಐಷರ್ ಮೋಟಾರ್ಸ್, ಹೀರೋ ಮೊಟೊಕಾರ್ಪ್, ಇಂಡಸ್ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಮಾರುತಿ ಸುಜುಕಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದರೆ, ಪವರ್ ಗ್ರಿಡ್, ಜೀ ಎಂಟರ್‌ಟೈನ್‌ಮೆಂಟ್, ಇನ್ಫೋಸಿಸ್, ಟಿಸಿಎಸ್ ಮತ್ತು ಎನ್‌ಟಿಪಿಸಿ ನಷ್ಟ ಕಂಡವು.
ದೇಶೀಯ ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡುಗೆಗಳನ್ನು ಘೋಷಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಆರಂಭವಾಯಿತು.
ಕಾರ್ಪೋರೇಟ್ ತೆರಿಗೆ ಕಡಿತದಿಂದ ಖುಷಿಗೊಂಡ ಹೂಡಿಕೆದಾರರು ಒಂದು ಗಂಟೆಯಲ್ಲಿ 5.82 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ.
ಬಿಎಸ್ ಇ ಸೆನ್ಸೆಕ್ಸ್ ಹೊಸ ದಾಖಲೆ ನಿರ್ಮಿಸಿದ್ದು, ಸೆನ್ಸೆಕ್ಸ್ ಸುಮಾರು 10 ವರ್ಷಗಳ ನಂತರ ಒಂದೇ ದಿನದಲ್ಲಿ 2000 ಪಾಯಿಂಟ್‌ಗಳ ಏರಿಕೆ ಕಂಡಿದೆ.


Click it and Unblock the Notifications