ಆಧಾರ್ ಕಾರ್ಡ್ ನವೀಕರಣ ಇನ್ನುಮುಂದೆ ಸುಲಭ ಅಗಲಿದೆ. ಯಾವುದೇ ದಾಖಲೆಗಳನ್ನು ಸಲ್ಲಿಸದೆ ನಿಮ್ಮ ಇತ್ತೀಚಿನ ಛಾಯಾಚಿತ್ರವನ್ನು ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬಹುದು.
ಆಧಾರ್ ಕಾರ್ಡ್ ನವೀಕರಣ ಇನ್ನುಮುಂದೆ ಸುಲಭ ಅಗಲಿದೆ. ಯಾವುದೇ ದಾಖಲೆಗಳನ್ನು ಸಲ್ಲಿಸದೆ ನಿಮ್ಮ ಇತ್ತೀಚಿನ ಛಾಯಾಚಿತ್ರವನ್ನು ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬಹುದು. ಇದು ಮಾತ್ರವಲ್ಲದೆ, ಬಯೋಮೆಟ್ರಿಕ್ಸ್, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಂತಹ ವಿವರಗಳನ್ನು ಸಹ ಯಾವುದೇ ತೊಂದರೆಯಿಲ್ಲದೆ ನವೀಕರಿಸಬಹುದು.

ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ನೀವು ಆಧಾರ್ ಕೇಂದ್ರಕ್ಕೆ ಕಾಲಿಡಬೇಕು. ಆಧಾರ್ ಕಾರ್ಡುದಾರರ ವೈಯಕ್ತಿಕ ಮಾಹಿತಿಯನ್ನು ನವೀಕರಿಸಲು ಯಾವುದೇ ದಾಖಲೆಗಳ ಅಗತ್ಯವಿಲ್ಲ ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ನೋಟಿಸ್ ನೀಡಿದೆ. ಛಾಯಾಚಿತ್ರ, ಬಯೋಮೆಟ್ರಿಕ್ಸ್, ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಂತಹ ವಿವರಗಳನ್ನು ನವೀಕರಿಸಲು ಬಯಸುವ ಆಧಾರ್ ಕಾರ್ಡ್ ಬಳಕೆದಾರರು ಈಗ ಯಾವುದೇ ಅಧಿಕೃತ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅವರ ವಿವರಗಳನ್ನು ನವೀಕರಿಸಬೇಕಾಗುತ್ತದೆ. ನಿಮ್ಮ ಆಧಾರ್‌ನಲ್ಲಿ ಛಾಯಾಚಿತ್ರ, ಬಯೋಮೆಟ್ರಿಕ್ಸ್, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನವೀಕರಿಸಲು ಯಾವುದೇ ದಾಖಲೆಗಳ ಅಗತ್ಯವಿಲ್ಲ. ನಿಮ್ಮ ಆಧಾರ್ ಅನ್ನು ತೆಗೆದುಕೊಂಡು ಹತ್ತಿರದ ಯಾವುದೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಎಂದು ಯುಐಡಿಎಐ ಟ್ವೀಟ್ ಮಾಡಿದೆ.
ನಿಮ್ಮ ದಾಖಲೆಗಳನ್ನು ಆಧಾರ್ ಕೇಂದ್ರದಲ್ಲಿ ಸ್ಕ್ಯಾನ್ ಮಾಡಿ ಪುನಃ ವಾಪಸ್ ಕೊಡುತ್ತಾರೆ. ಯಾವುದೇ ನಕಲು ಪ್ರತಿಯನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಅಪ್ಡೇಟ್ ಗೆ ಬೇಕಾಗುವಂತಹ ವಿಳಾಸ, ಹೆಸರು, ಜನ್ಮ ದಿನಾಂಕದಂತಹ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡು ಹೋದರೆ ಸಾಕು. ಅವುಗಳನ್ನು ಅಲ್ಲಿಯೇ ಸ್ಕ್ಯಾನ್ ಮಾಡಿ ವಾಪಸ್ ಕೊಡಲಾಗುವುದು ಎಂದು ಹೇಳಿದೆ.


Click it and Unblock the Notifications