ಜಿಎಸ್ಟಿ ಕೌನ್ಸಿಲ್ ಸಭೆ: ಯಾವುದು ಅಗ್ಗ, ಯಾವುದು ದುಬಾರಿ ಹಾಗು ಯಾವುದಕ್ಕಿದೆ ವಿನಾಯಿತಿ?
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಗೋವಾದಲ್ಲಿ ಶುಕ್ರವಾರ 37ನೇ ಸಭೆ ನಡೆಸಿದ್ದು, ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಗೋವಾದಲ್ಲಿ ಶುಕ್ರವಾರ 37ನೇ ಸಭೆ ನಡೆಸಿದ್ದು, ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಹಲವಾರು ವಸ್ತುಗಳ ದರ ಕಡಿತವನ್ನು ಘೋಷಿಸಿಲಾಗಿದ್ದು, ಪರಿಷ್ಕೃತ ಜಿಎಸ್ಟಿ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಾಹನ ಉದ್ಯಮ ಹಾಗೂ ಬಿಸ್ಕಿಟ್ ಉದ್ಯಮಗಳ ಜಿಎಸ್ಟಿ ಇಳಿಕೆ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಜಿಎಸ್ಟಿ ಸಭೆಯಲ್ಲಿ ಈ ಎರಡು ವಲಯಗಳ ಜಿಎಸ್ಟಿ ದರ ಇಳಿಕೆ ಮಾಡಿ
ಜಿಎಸ್ಟಿ ಮಂಡಳಿ ಸಭೆಯ ನಂತರ ದುಬಾರಿ, ಅಗ್ಗ, ವಿನಾಯಿತಿ ನೀಡಲಾಗಿರುವ ಸರಕುಗಳ ಪಟ್ಟಿ ಇಲ್ಲಿ ನೀಡಲಾಗಿದೆ.
ಹೋಟೆಲ್ ಕೊಠಡಿ ಸುಂಕಗಳು
ಆತಿಥ್ಯ ಉದ್ಯಮ ಮತ್ತು ಪ್ರವಾಸೋದ್ಯಮವನ್ನು ಉ್ತತೇಜಿಸುವ ಸಲುವಾಗಿ ಹೋಟೆಲ್ ಕೊಠಡಿ ಮೇಲಿನ ಸುಂಕ ತೆರಿಗೆ ಇಳಿಸಲಾಗಿದೆ. ಪ್ರತಿ ರಾತ್ರಿಗೆ ರೂ. 1,000 ವರೆಗೆ ಸುಂಕವನ್ನು ಹೊಂದಿರುವ ಹೋಟೆಲ್ ಕೊಠಡಿಗಳ ಮೇಲೆ ಜಿಎಸ್ಟಿ ಇಲ್ಲ. ಇದಲ್ಲದೆ, ಹೋಟೆಲ್ ಕೊಠಡಿ ದರವನ್ನು ಪ್ರತಿ ರಾತ್ರಿಗೆ ರೂ. 1,001 ರಿಂದ 7,500 ರೂ.ಗಳವರೆಗೆ ಈಗಿರುವ ಶೇಕಡಾ 18 ಜಿಎಸ್ಟಿ ದರದಿಂದ ಶೇಕಡಾ 12ಕ್ಕೆ ಕಡಿತಗೊಳಿಸಲಾಗಿದೆ. ಅಲ್ಲದೆ, ರೂ. 7,500 ಗಿಂತ ಹೆಚ್ಚಿನ ಮೊತ್ತದ ಕೋಣೆಯ ಮೇಲಿನ ತೆರಿಗೆಯನ್ನು ಈಗಿರುವ ಶೇಕಡಾ 28 ರಿಂದ ಶೇಕಡಾ 18ಕ್ಕೆ ಇಳಿಸಲಾಗಿದೆ.
ಅಗ್ಗದ ಸರಕುಗಳು
ಭಾರತದಲ್ಲಿ ಉತ್ಪಾದಿಸದ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ರಕ್ಷಣಾ ಉತ್ಪನ್ನಗಳ ಜಿಎಸ್ಟಿ ಬೆಲೆಯನ್ನು ಇಳಿಕೆ ಮಾಡಲಾಗಿದೆ. ವಜ್ರ ಉದ್ಯಮದ ಕೆಲಸದ ಮೇಲಿನ ತೆರಿಗೆ ದರವನ್ನು ಶೇ. 5 ರಿಂದ ಶೇ. 1.5 ಗೆ ಇಳಿಕೆ ಮಾಡಲಾಗಿದೆ. ಒಣಗಿದ ಹುಣಸೆ ಹಣ್ಣಿನ ಮೇಲಿನ ಜಿಎಸ್ಟಿ ಶೇ. 5 ರಿಂದ ಶೂನ್ಯಗೊಳಿಸಲಾಗಿದೆ. ಹೂ, ಪರಿಸರ ಸ್ನೇಹಿ ವಸ್ತು ಹಾಗೂ ಎಲೆಗಳಿಂದ ಮಾಡಿದ ಕಪ್, ಪ್ಲೇಟ್ ಮೇಲಿನ ಜಿಎಸ್ಟಿ ದರವನ್ನು ಶೇ. 5 ರಿಂದ ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ.
ಪಾಲಿಪ್ರೊಪಿಲೀನ್ / ಪಾಲಿಥಿಲೀನ್ ನಿಂದ ನೇಯ್ದ ಮತ್ತು ಸರಕುಗಳ ಪ್ಯಾಕಿಂಗ್ಗೆ ಬಳಸುವ ನೇಯದ ಚೀಲಗಳು ಮತ್ತು ಚೀಲಗಳ ಮೇಲೆ ಏಕರೂಪದ ಜಿಎಸ್ಟಿ ದರವನ್ನು ಪ್ರಸ್ತುತ ದರಗಳ ಪ್ರಕಾರ ಕ್ರಮವಾಗಿ 5 ಪ್ರತಿಶತ / 12 ಶೇಕಡಾ / 18 ರಂತೆ ವಿಧಿಸಲಾಗುತ್ತದೆ.
ಪ್ರಯಾಣಿಕರ ವಾಹನಗಳು
13 ಸೀಟುಗಳ 1200 ಸಿಸಿ ಪೆಟ್ರೋಲ್ ವಾಹನ ಹಾಗೂ 1500 ಸಿಸಿ ಇಂಜಿನ್ ಹೊಂದಿರುವ ಡಿಸೇಲ್ ವಾಹನದ ಸೆಸ್ ದರವನ್ನು ಕಡಿತಗೊಳಿಸಿ ಶೇ. 12ಕ್ಕೆ ಇಳಿಕೆ ಮಾಡಲಾಗಿದೆ.
ದುಬಾರಿ ಸರಕುಗಳು
ಮಾಲ್ ನಲ್ಲಿ ಪ್ಯಾಕಿಂಗ್ ಗೆ ಬಳಸುವ ಪಾಲಿಪ್ರೊಪಿಲೀನ್ ಚೀಲಗಳಿಗೆ ಶೇ. 12ರಷ್ಟು ಜಿಎಸ್ಟಿ ವಿಧಿಸಲಾಗುವುದು. ಕೆಫಿನ್ ಹೊಂದಿರುವ ಪಾನೀಯಗಳ ಮೇಲೆ ಶೇ. 18ರಷ್ಟು ಜಿಎಸ್ಟಿ ಜೊತೆ ಶೇ. 12ರಷ್ಟು ಸೆಸ್ ವಿಧಿಸಲಾಗುವುದು. ರೈಲ್ವೆ ವ್ಯಾಗನ್, ಬೋಗಿಗಳ ಮೇಲಿನ ಜಿಎಸ್ಟಿ ದರವನ್ನು ಶೇ. 5 ರಿಂದ ಶೇ. 12 ಕ್ಕೆ ಹೆಚ್ಚಿಸಲಾಗಿದೆ.
ವಿನಾಯಿತಿಗಳು
ನಿರ್ಮಾಲಾ ಸೀತಾರಾಮನ್ ಅವರು ನಿಗದಿತ ಅಮದು ಮಾಡಲಾಗುವ ದೇಶೀಯಾಗಿ ಉತ್ಪಾದಿಸಲಾಗದ ರಕ್ಷಣಾ ಸರಕುಗಳನ್ನು ಮೇಲೆ ವಿನಾಯಿತಿ ನೀಡಿದ್ದಾರೆ. ಭಾರತದಲ್ಲಿ 17 ವರ್ಷದೊಳಗಿನ ಮಹಿಳಾ ಫುಟ್ಬಾಲ್ ವಿಶ್ವಕಪ್ ಆಯೋಜಿಸಲು ಫಿಫಾಗೆ ಸರಕು ಮತ್ತು ಸೇವೆಗಳ ಪೂರೈಕೆ, ಮತ್ತು ನಿರ್ದಿಷ್ಟಪಡಿಸಿದ ಆಹಾರದ ಮೇಲೆ ಜಿಎಸ್ಟಿ ವಿನಾಯಿತಿ ನೀಡಲಾಗಿದೆ. ಕೃಷಿ ಸಂಸ್ಥೆ (ಎಫ್ಎಒ) ಗೆ ಸರಬರಾಜು ಮಾಡಲಾಗುವ ಸರಕುಗಳ ಮೇಲೆ ಜಿಎಸ್ಟಿ ವಿನಾಯಿತಿ ಇದೆ. ಮೀನುಗಾರಿಕೆ ಮತ್ತು ಕೃಷಿ ಯಂತ್ರೋಪಕರಣಗಳ ಇತರ ಭಾಗಗಳ ಮೇಲೆ ನಿರ್ದಿಷ್ಟ ಅವಧಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಿದೆ. ಪರವಾನಗಿ ನೀತಿಯಡಿಯಲ್ಲಿ ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಉತ್ಪಾದನೆಗೆ ಬಳಸುವ ನಿರ್ದಿಷ್ಟ ಸರಕುಗಳ ಮೇಲೆ 5 ಪ್ರತಿಶತ ಜಿಎಸ್ಟಿ ಅನ್ವಯವಾಗುತ್ತದೆ.