For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಗುಡ್ ನ್ಯೂಸ್, ಈ ಕೆಲಸಕ್ಕಾಗಿ ಬ್ಯಾಂಕಿಗೆ ಹೋಗಬೇಕಾಗಿಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದು, ಹಲವಾರು ಸೇವೆಗಳನ್ನು ಆನ್ಲೈನ್ ಮೂಲಕ ನೀಡುವ ಪ್ರಯತ್ನ ನಡೆಸುತ್ತಿದೆ.

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದು, ಹಲವಾರು ಸೇವೆಗಳನ್ನು ಆನ್ಲೈನ್ ಮೂಲಕ ನೀಡುವ ಪ್ರಯತ್ನ ನಡೆಸುತ್ತಿದೆ.

 

ಎಸ್ಬಿಐ ಗುಡ್ ನ್ಯೂಸ್, ಈ ಕೆಲಸಕ್ಕಾಗಿ ಬ್ಯಾಂಕಿಗೆ ಹೋಗಬೇಕಾಗಿಲ್ಲ

ಮನೆಯಲ್ಲೇ ಎಲ್ಲಾ ಸೇವೆಗಳನ್ನು ಒದಗಿಸುವುದು ಎಸ್ಬಿಐ ಉದ್ದೇಶವಾಗಿದೆ. ಇದೀಗ ಆನ್ಲೈನ್ ಮೂಲಕ ಉಳಿತಾಯ ಖಾತೆಯನ್ನು ಬೇರೆ ಶಾಖೆಗೆ ವರ್ಗಾವಣೆ ಮಾಡುವ ಸೌಲಭ್ಯ ಕಲ್ಪಿಸುತ್ತಿದೆ.
ಶಾಖೆ ಬದಲಾವಣೆಗಾಗಿ ಬ್ಯಾಂಕ್ ಗೆ ಹೋಗಿ ಸರದಿ ಸಾಲಿನಲ್ಲಿ ದಿನಗಟ್ಟಲೇ ಕಾಯಬೇಕಾಗಿಲ್ಲ. ಮನೆಯಲ್ಲಿಯೇ ಆನ್ಲೈನ್ ಮೂಲಕ ಉಳಿತಾಯ ಖಾತೆಯನ್ನು ಬೇರೆ ಶಾಖೆಗೆ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಗ್ರಾಹಕರು ಎಸ್ಬಿಐ ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದರೆ ಈ ಕಾರ್ಯ ಸುಲಭ.
ಗ್ರಾಹಕರು ಎಸ್ಬಿಐ ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಆಗಬೇಕು. ಅಲ್ಲಿರುವ ಇ-ಸರ್ವೀಸ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಪುಟದ ಎಡಭಾಗದಲ್ಲಿ 'Transfer of Savings Account' ಆಯ್ಕೆ ಸಿಗಲಿದೆ. ಇದರ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಬ್ಯಾಂಕ್ ಮಾಹಿತಿ ಸಿಗಲಿದೆ. ಅಲ್ಲಿ ಬೇರೆ ಬೇರೆ ಶಾಖೆಗಳ ವಿವರ ಇರುತ್ತದೆ. ನಿಮಗೆ ಬೇಕಾದ ಶಾಖೆ ಆಯ್ಕೆ ಮಾಡಿ, ಟರ್ಮ್ ಆ್ಯಂಡ್ ಕಂಡೀಷನ್ ಓಕೆ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ 'Confirm' ಬಟನ್ ಒತ್ತಬೇಕು. ತಕ್ಷಣ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸೆಕ್ಯೂರಿಟಿ ಕೋಡ್ ಬರುತ್ತದೆ. ಈ ಕೋಡನ್ನು ನಮೂದಿಸಿದ ಮೇಲೆ ನಿಮ್ಮ ಖಾತೆ ಬೇರೆ ಶಾಖೆಗೆ ವರ್ಗಾವಣೆಯಾಗುತ್ತದೆ.

Read more about: sbi banking money
English summary

state bank of india online process of sbi ank branch transfer by sitting at home

state bank of india online process of sbi ank branch transfer by sitting at home.
Story first published: Saturday, September 21, 2019, 14:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X