For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾ ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ 3 ಸಂಸ್ಥೆಗಳ ಮಾರಾಟಕ್ಕೆ ಕೇಂದ್ರ ತಯಾರಿ

ಕೇಂದ್ರ ಸರ್ಕಾರವು ಮಾರ್ಚ್ 2020ರ ವೇಳೆಗೆ ಏರ್ ಇಂಡಿಯಾ ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳನ್ನು ಸ್ಥಳೀಯ ಅಥವಾ ವಿದೇಶಿ ಕಂಪನಿಗಳಿಗೆ 600 ಬಿಲಿಯನ್ ಗೆ ಮಾರಾಟ ಮಾಡಲು ಮುಂದಾಗಿದೆ.

|

ಕೇಂದ್ರ ಸರ್ಕಾರವು ಮಾರ್ಚ್ 2020ರ ವೇಳೆಗೆ ಏರ್ ಇಂಡಿಯಾ ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳನ್ನು ಸ್ಥಳೀಯ ಅಥವಾ ವಿದೇಶಿ ಕಂಪನಿಗಳಿಗೆ 600 ಬಿಲಿಯನ್ ಗೆ ಮಾರಾಟ ಮಾಡಲು ಮುಂದಾಗಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಇಂಡಿಯಾ ಒಳಗೊಂಡಂತೆ 3 ಸಂಸ್ಥೆಗಳ ಮಾರಾಟಕ್ಕೆ ಕೇಂದ್ರ ತಯಾರಿ

2019/20 ಹಣಕಾಸು ವರ್ಷದ ಅಂತ್ಯದ ಒಳಗಾಗಿ ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್, ಲಾಜಿಸ್ಟಿಕ್ಸ್ ಫರ್ಮ್ ಕಂಟೈನರ್ ಕಾರ್ಪ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಏರ್ ಇಂಡಿಯಾವನ್ನು ಮಾರಾಟ ಮಾಡಲು ಸರ್ಕಾರ ಯೋಜಿಸಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಮೂರು ಕಂಪನಿಗಳನ್ನು ಸ್ಥಳೀಯ ಇಲ್ಲವೆ ವಿದೇಶದ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ 600 ಬಿಲಿಯನ್ (8.5 ಬಿಲಿಯನ್ ಡಾಲರ್) ಗಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ. ಇದರ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ.

Read more about: air india business money
English summary

Govt plans to sell Air India, other state-owned firms by March 2020

India aims to sell two or three state-owned firms to local or foreign firms to raise up to Rs 600 billion ($8.5 billion) by March 2020, a senior Finance Ministry official said on Monday.
Story first published: Tuesday, September 24, 2019, 11:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X