ಸೆಪ್ಟಂಬರ್ 30 ರೊಳಗೆ ಪ್ಯಾನ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

ಪ್ಯಾನ್ ಕಾರ್ಡ್ ನ್ನು ಆಧಾರ್ ನೊಂದಿಗೆ ಸೆಪ್ಟೆಂಬರ್ 30 ರೊಳಗೆ ಲಿಂಕ್ ಮಾಡದಿದ್ದರೆ ಅಕ್ಟೋಬರ್ 1 ರಿಂದ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ.

ಪ್ಯಾನ್ ಕಾರ್ಡ್ ನ್ನು ಆಧಾರ್ ನೊಂದಿಗೆ ಸೆಪ್ಟೆಂಬರ್ 30 ರೊಳಗೆ ಲಿಂಕ್ ಮಾಡದಿದ್ದರೆ ಅಕ್ಟೋಬರ್ 1 ರಿಂದ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಹಿಂದಿನ ನಿಯಮದಂತೆ ಪ್ಯಾನ್ ನ್ನು ಆಧಾರ್‌ನೊಂದಿಗೆ ನಿಗದಿತ ದಿನಾಂಕದಂದು ಲಿಂಕ್ ಮಾಡಿರದಿದ್ದರೆ ಪ್ಯಾನ್ ಅಮಾನ್ಯವಾಗುತ್ತಿತ್ತು.

ಅಮಾನ್ಯ ಪ್ಯಾನ್ ಎಂದರೆ ನೀವು ಎಂದಿಗೂ ಪ್ಯಾನ್ ಹೊಂದಿಲ್ಲವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ನಿಷ್ಕ್ರಿಯ ಎಂದರೆ ಆಧಾರ್‌ಗೆ ಲಿಂಕ್ ಮಾಡುವವರೆಗೆ ನಿಮ್ಮ ಪ್ಯಾನ್ ಮೂಲಕ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.

ಪ್ಯಾನ್-ಆಧಾರ್ ಲಿಂಕ್ ನಿಯಮ

ಪ್ಯಾನ್-ಆಧಾರ್ ಲಿಂಕ್ ನಿಯಮ

ಜುಲೈನಲ್ಲಿ ಮಂಡಿಸಲಾದ ಬಜೆಟ್ ನಲ್ಲಿ ಪ್ಯಾನ್-ಆಧಾರ್ ಲಿಂಕ್ ನಿಯಮಗಳನ್ನು ಬದಲಾಯಿಸಿತು. ಆರಂಭದಲ್ಲಿ 2017 ರಲ್ಲಿ ಕಾನೂನು ಜಾರಿಗೆ ಬಂದಾಗ, ಅಧಿಸೂಚನೆಯ ದಿನಾಂಕದಂದು ಪ್ಯಾನ್ ಆಧಾರ್‌ನೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ ಪ್ಯಾನ್ ಅಮಾನ್ಯವಾಗುತ್ತಿತ್ತು. ಸೆಪ್ಟೆಂಬರ್ 30 ರೊಳಗೆ ಪ್ಯಾನ್ ಕಾರ್ಡ್ ನ್ನು ಆಧಾರ್‌ನೊಂದಿಗೆ ಜೋಡಿಸುವ ಗಡುವನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2019 ರ ಮಾರ್ಚ್ 31 ರಂದು ತಿಳಿಸಿದೆ.

2019ರ ಬಜೆಟ್‌ನಲ್ಲಿ ತಿದ್ದುಪಡಿ

2019ರ ಬಜೆಟ್‌ನಲ್ಲಿ ತಿದ್ದುಪಡಿ

ಆದಾಗ್ಯೂ, ಬಳಕೆದಾರರು ಮಾಡಿದ ಹಿಂದಿನ ವಹಿವಾಟುಗಳ ರಕ್ಷಣೆಗಾಗಿ ಈ ನಿಯಮಗಳನ್ನು ಜುಲೈ 2019 ರ ಬಜೆಟ್‌ನಲ್ಲಿ ತಿದ್ದುಪಡಿ ಮಾಡಲಾಗಿದೆ. ಆಧಾರ್ ಸಂಖ್ಯೆಯನ್ನು ತಿಳಿಸಲು ಒಬ್ಬ ವ್ಯಕ್ತಿಯು ವಿಫಲವಾದರೆ, ಅಂತಹ ವ್ಯಕ್ತಿಗೆ ನಿಗದಿಪಡಿಸಿದ ಪ್ಯಾನ್ ಅನ್ನು ಒದಗಿಸಲು ಈ ನಿಬಂಧನೆಯನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದ್ದು, ನಿಗದಿತ ರೀತಿಯಲ್ಲಿ ನಿಷ್ಕ್ರಿಯಗೊಳಿಸಲಾಗುವುದು. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಿಸುವ ಬಗ್ಗೆ ಹೊಸ ನಿಯಮ ಸೆಪ್ಟೆಂಬರ್‌ನಿಂದ ಜಾರಿಗೆ ಬಂದಿತು.

ಸೆಪ್ಟೆಂಬರ್ 30 ರೊಳಗೆ ಪ್ಯಾನ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

ಸೆಪ್ಟೆಂಬರ್ 30 ರೊಳಗೆ ಪ್ಯಾನ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

ತಜ್ಞರ ಪ್ರಕಾರ, ಸೆಪ್ಟೆಂಬರ್ 30 ರ ಅಧಿಸೂಚಿತ ದಿನಾಂಕದ ಒಳಗಾಗಿ ಪ್ಯಾನ್ ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಏನಾಗಬಹುದು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ನಿಷ್ಕ್ರಿಯವಾದ ಪ್ಯಾನ್ ಅನ್ನು ಗಡುವಿನ ನಂತರ ಮತ್ತೆ ಸಕ್ರಿಯಗೊಳಿಸಬಹುದೇ ಎಂದು ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ.

ಪ್ಯಾನ್ ನಿಷ್ಕ್ರಿಯವಾಗಿದ್ದರೆ ಏನಾಗಬಹುದು ಎಂಬುದರ ಕುರಿತು ಸರ್ಕಾರದಿಂದ ಯಾವುದೇ ಸ್ಪಷ್ಟೀಕರಣವಿಲ್ಲ. ಇದರ ಪರಿಣಾಮಗಳು ಪ್ಯಾನ್ ಅನ್ನು ಹೊಂದಿರದಂತೆಯೇ ಇರುತ್ತದೆ ಮತ್ತು ಆ ಸಂದರ್ಭದಲ್ಲಿ ನಿಮಗೆ ಯಾವುದೇ ನಿರ್ದಿಷ್ಟ ಹಣಕಾಸಿನ ವಹಿವಾಟುಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿ ಪ್ಯಾನ್ ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿರುತ್ತದೆ ಎಂದು ಬೊಹ್ರಾ ಹೇಳುತ್ತಾರೆ.
ಸಿಎ ಆಗಿರುವ ನವೀನ್ ವಾಧ್ವಾ (ಡಿಜಿಎಂ, ಟ್ಯಾಕ್ಸ್‌ಮನ್ ಡಾಟ್ ಕಾಮ್) ಹೇಳುವ ಪ್ರಕಾರ, "ತೆರಿಗೆದಾರನು ತನ್ನ ಪ್ಯಾನ್ ಅನ್ನು ಆಧಾರ್ ನೊಂದಿಗೆ ಸೆಪ್ಟೆಂಬರ್ 30, 2019 ರೊಳಗೆ ಲಿಂಕ್ ಮಾಡದಿದ್ದರೆ, ತೆರಿಗೆದಾರರ ಪ್ಯಾನ್ ನಿಷ್ಕ್ರಿಯವಾಗಿದೆ ಎಂದು ಪರಿಗಣಿಸಲಾಗುತ್ತದೆ. ಒಮ್ಮೆ ಪ್ಯಾನ್ ನಿಷ್ಕ್ರಿಯಗೊಂಡರೆ, ತೆರಿಗೆ ಪಾವತಿದಾರನು ಪ್ಯಾನ್ ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿರುವ ವಹಿವಾಟುಗಳನ್ನು ಕೈಗೊಳ್ಳಲು ಸಧ್ಯವಾಗುವುದಿಲ್ಲ. ನಿಷ್ಕ್ರಿಯ ಪ್ಯಾನ್ ಅನ್ನು ಕಾರ್ಯರೂಪಕ್ಕೆ ತರುವ ವಿಧಾನವನ್ನು ಸಿಬಿಡಿಟಿಯಿಂದ ಇನ್ನೂ ತಿಳಿಸಲಾಗಿಲ್ಲ.

 

ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಿಸಲಾಗುತ್ತದೆಯೇ?

ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಿಸಲಾಗುತ್ತದೆಯೇ?

ವಾಧ್ವಾ ಹೇಳುವಂತೆ, ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು 2019 ರ ಸೆಪ್ಟೆಂಬರ್ 30 ರ ಗಡುವನ್ನು ಸಿಬಿಡಿಟಿ ಮತ್ತಷ್ಟು ವಿಸ್ತರಿಸುವುದು ಅಸಂಭವವಾಗಿದೆ. ಆದಾಯ ತೆರಿಗೆ ಕಾಯ್ದೆ, 1961 ರಲ್ಲಿ 139 ಎಎ, ಅದರಲ್ಲಿ ಲಿಂಕ್ ಕಡ್ಡಾಯಗೊಳಿಸಲಾಗಿದೆ.
ಆದಾಗ್ಯೂ, ಸಿಬಿಡಿಟಿ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡುವ ಗಡುವನ್ನು ಹಲವು ಬಾರಿ ವಿಸ್ತರಿಸಿದೆ. ಹಾಗಾಗಿ ವಿಸ್ತರಣೆಯ ಸಾಧ್ಯತೆಗಳು ಕಡಿಮೆ ಇರುವುದರಿಂದ, ತೆರಿಗೆದಾರರು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ನಿಗದಿತ ದಿನಾಂಕದಂದು ಅಥವಾ ಮೊದಲು ಲಿಂಕ್ ಮಾಡಬೇಕೆಂದು ಸೂಚಿಸಲಾಗಿದೆ. ಲಿಂಕ್ ಮಾಡುವುದನ್ನು ಮೂರು ವಿಧಾನಗಳ ಮೂಲಕ ಅಂದರೆ, ಎಸ್‌ಎಂಎಸ್ ಕಳುಹಿಸುವ ಮೂಲಕ, ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಗೊತ್ತುಪಡಿಸಿದ ಪ್ಯಾನ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಲಿಂಕ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+