ಕಹಿಸುದ್ದಿ! ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಏರಿಕೆ

ಪೆಟ್ರೋಲ್, ಡೀಸೆಲ್ ದರಗಳ ಕಳೆದ ಎಂಟು ದಿನಗಳಿಂದ ಸತತವಾಗಿ ಏರುತ್ತಲೇ ಸಾಗಿದ್ದು, ವಾಹನ ಸವಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ!

ಪೆಟ್ರೋಲ್, ಡೀಸೆಲ್ ದರಗಳ ಕಳೆದ ಎಂಟು ದಿನಗಳಿಂದ ಸತತವಾಗಿ ಏರುತ್ತಲೇ ಸಾಗಿದ್ದು, ವಾಹನ ಸವಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ! ಸೌದಿ ಅರೇಬಿಯದ ತೈಲ ಉತ್ಪಾದನಾ ಘಟಕದ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದ ನಂತರ ಸೌದಿ ಅರೆಬಿಯಾವು ತೈಲ ಉತ್ಪಾದನೆಯಲ್ಲಿ ಶೇಕಡ 50 ರಷ್ಟು ಕುಸಿತ ಕಂಡಿದೆ.
ಸೌದಿ ಅರೇಬಿಯದ ತೈಲ ಉತ್ಪಾದನಾ ಘಟಕದ ಮೇಲಿನ ದಾಳಿಯ ಪರಿಣಾಮ ತೈಲ ಬೆಲೆ ಗಗನಕ್ಕೇರಿದೆ. ಭಾರತವು ಸೌದಿ ಅರೇಬಿಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರವಾಗಿದೆ. ಇದೀಗ ಕಚ್ಚಾತೈಲ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ.
ಕೇಂದ್ರದ ಬಿಜೆಪಿ ಸರ್ಕಾರ ತನ್ನ ಎರಡನೇ ಅವಧಿಯ ಮೊದಲ ಬಜೆಟ್ ಮಂಡನೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಿತ್ತು. ಸುಂಕ ಏರಿಕೆ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿತ್ತು.
ಕೇಂದ್ರ ಸರ್ಕಾರ ತೈಲ ದರ ಏರಿಕೆ ಮಾಡಿದ್ದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡರೆ ವಾಹನ ಸವಾರರ ಮೊಗದಲ್ಲಿ ಮಂದಹಾಸ ಮೂಡುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಡಾಲರ್ ಬೆಲೆ ಕುಸಿಯುತ್ತಿರುವ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗತ್ತಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ..

ತೈಲ ಬೆಲೆ ಏರಿಳಿತಕ್ಕೆ ಕಾರಣ

ತೈಲ ಬೆಲೆ ಏರಿಳಿತಕ್ಕೆ ಕಾರಣ

ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್, ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:ಪೆಟ್ರೋಲ್: 76.44/ಲೀಟರ್
ಡೀಸೆಲ್: 69.36/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 76.66/ಲೀಟರ್
ಡೀಸೆಲ್: 69.36/ಲೀಟರ್

ಧಾರವಾಡ:
ಪೆಟ್ರೋಲ್: 76.66/ಲೀಟರ್
ಡೀಸೆಲ್: 69.36/ಲೀಟರ್

ಮೈಸೂರು:
ಪೆಟ್ರೋಲ್: 76.56/ಲೀಟರ್
ಡೀಸೆಲ್: 69.25/ಲೀಟರ್

ಮಂಗಳೂರು:
ಪೆಟ್ರೋಲ್: 75.72/ಲೀಟರ್
ಡೀಸೆಲ್: 68.57/ಲೀಟರ್

ಬೆಳಗಾವಿ:
ಪೆಟ್ರೋಲ್: 76.98/ಲೀಟರ್
ಡೀಸೆಲ್: 69.66/ಲೀಟರ್

 

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:
ಪೆಟ್ರೋಲ್: 76.65/ಲೀಟರ್
ಡೀಸೆಲ್: 69.34/ಲೀಟರ್

ರಾಮನಗರ:
ಪೆಟ್ರೋಲ್: 76.99/ಲೀಟರ್
ಡೀಸೆಲ್: 69.65/ಲೀಟರ್

ಚಿಕ್ಕಬಳ್ಳಾಪುರ:
ಪೆಟ್ರೋಲ್: 76.78/ಲೀಟರ್
ಡೀಸೆಲ್: 69.45/ಲೀಟರ್

ಮಂಡ್ಯ:
ಪೆಟ್ರೋಲ್: 76.55/ಲೀಟರ್
ಡೀಸೆಲ್: 69.25/ಲೀಟರ್

ತುಮಕೂರು:
ಪೆಟ್ರೋಲ್: 77.69/ಲೀಟರ್
ಡೀಸೆಲ್: 70.29/ಲೀಟರ್

ದಾವಣಗೆರೆ:
ಪೆಟ್ರೋಲ್: 77.68/ಲೀಟರ್
ಡೀಸೆಲ್: 70.16/ಲೀಟರ್

 

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:
ಪೆಟ್ರೋಲ್: 77.55/ಲೀಟರ್
ಡೀಸೆಲ್: 70.13/ಲೀಟರ್

ಚಿಕ್ಕಮಗಳೂರು:
ಪೆಟ್ರೋಲ್: 77.58/ಲೀಟರ್
ಡೀಸೆಲ್: 70.11/ಲೀಟರ್

ಉಡುಪಿ:
ಪೆಟ್ರೋಲ್: 76.46/ಲೀಟರ್
ಡೀಸೆಲ್: 69.13/ಲೀಟರ್

ಹಾಸನ:
ಪೆಟ್ರೋಲ್: 76.73/ಲೀಟರ್
ಡೀಸೆಲ್: 69.30/ಲೀಟರ್

ಕಾರವಾರ:
ಪೆಟ್ರೋಲ್: 71.99/ಲೀಟರ್
ಡೀಸೆಲ್: 59.58/ಲೀಟರ್

ಕೊಡಗು, ವಿರಾಜಪೇಟೆ:
ಪೆಟ್ರೋಲ್: 77.17/ಲೀಟರ್
ಡೀಸೆಲ್: 69.75/ಲೀಟರ್

ಚಾಮರಾಜನಗರ:
ಪೆಟ್ರೋಲ್: 76.44/ಲೀಟರ್
ಡೀಸೆಲ್: 69.21/ಲೀಟರ್

 

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ:
ಪೆಟ್ರೋಲ್: 77.87/ಲೀಟರ್
ಡೀಸೆಲ್: 70.33/ಲೀಟರ್

ಹಾವೇರಿ:
ಪೆಟ್ರೋಲ್: 77.24/ಲೀಟರ್
ಡೀಸೆಲ್: 69.91/ಲೀಟರ್

ಬಿಜಾಪುರ:
ಪೆಟ್ರೋಲ್: 76.77/ಲೀಟರ್
ಡೀಸೆಲ್: 69.48/ಲೀಟರ್

ಬಾಗಲಕೋಟೆ:
ಪೆಟ್ರೋಲ್: 77.32/ಲೀಟರ್
ಡೀಸೆಲ್: 69.97/ಲೀಟರ್

ಬಾದಾಮಿ:
ಪೆಟ್ರೋಲ್: 77.32/ಲೀಟರ್
ಡೀಸೆಲ್: 69.97/ಲೀಟರ್

 

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಗದಗ:
ಪೆಟ್ರೋಲ್: 77.02/ಲೀಟರ್
ಡೀಸೆಲ್: 69.7/ಲೀಟರ್

ಬಳ್ಳಾರಿ:
ಪೆಟ್ರೋಲ್: 77.94/ಲೀಟರ್
ಡೀಸೆಲ್: 70.54/ಲೀಟರ್

ಕೊಪ್ಪಳ:
ಪೆಟ್ರೋಲ್: 77.50/ಲೀಟರ್
ಡೀಸೆಲ್: 70.14/ಲೀಟರ್

ರಾಯಚೂರು
ಪೆಟ್ರೋಲ್: 76.96/ಲೀಟರ್
ಡೀಸೆಲ್: 69.66/ಲೀಟರ್

ಬೀದರ
ಪೆಟ್ರೋಲ್: 77.26/ಲೀಟರ್
ಡೀಸೆಲ್: 69.92/ಲೀಟರ್

ಯಾದಗಿರಿ:
ಪೆಟ್ರೋಲ್: 77.19/ಲೀಟರ್
ಡೀಸೆಲ್: 69.86/ಲೀಟರ್

ಗುಲ್ಬರ್ಗ
ಪೆಟ್ರೋಲ್: 76.69/ಲೀಟರ್
ಡೀಸೆಲ್: 69.40/ಲೀಟರ್

 

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 79.79/ಲೀಟರ್
ಡೀಸೆಲ್: 70.37/ಲೀಟರ್

ದೆಹಲಿ:
ಪೆಟ್ರೋಲ್: 74.13/ಲೀಟರ್
ಡೀಸೆಲ್: 67.07/ಲೀಟರ್

ಚೆನ್ನೈ:
ಪೆಟ್ರೋಲ್: 77.06/ಲೀಟರ್
ಡೀಸೆಲ್: 70.91/ಲೀಟರ್

ಹೈದರಾಬಾದ್:
ಪೆಟ್ರೋಲ್: 78.80/ಲೀಟರ್
ಡೀಸೆಲ್: 73.11/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 76.82/ಲೀಟರ್
ಡೀಸೆಲ್: 69.49/ಲೀಟರ್

ಗುವಾಹಟಿ:
ಪೆಟ್ರೋಲ್: 76.34/ಲೀಟರ್
ಡೀಸೆಲ್: 70.16/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 71.69/ಲೀಟರ್
ಡೀಸೆಲ್: 70.39/ಲೀಟರ್

ಜೈಪುರ:
ಪೆಟ್ರೋಲ್: 77.18/ಲೀಟರ್
ಡೀಸೆಲ್: 71.34/ಲೀಟರ್

ಪಣಜಿ:
ಪೆಟ್ರೋಲ್: 70.17/ಲೀಟರ್
ಡೀಸೆಲ್: 67.87/ಲೀಟರ್

ಲಖನೌ:
ಪೆಟ್ರೋಲ್: 75.48/ಲೀಟರ್
ಡೀಸೆಲ್: 67.27/ಲೀಟರ್

 

ತೈಲ ಆಮದು ನಿಷೇಧ ಎಫೆಕ್ಟ್?

ತೈಲ ಆಮದು ನಿಷೇಧ ಎಫೆಕ್ಟ್?

ಈಗಾಗಲೇ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿರುವುದು ಆತಂಕ ಮೂಡಿಸಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್‌ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್‌ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್‌, ಯುಎಇಯಿಂದ 10 ಲಕ್ಷ ಟನ್‌ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಬಹುದು.

ಡ್ರೋನ್ ದಾಳಿ ಎಫೆಕ್ಟ್ 19.5 ಡಾಲರ್ ಏರಿಕೆ

ಡ್ರೋನ್ ದಾಳಿ ಎಫೆಕ್ಟ್ 19.5 ಡಾಲರ್ ಏರಿಕೆ

ತೈಲ ಸಂಸ್ಕರಣಾ ಘಟಕಗಳ ಮೇಲಿನ ಡ್ರೋನ್ ದಾಳಿಯ ಮೊದಲು ಪ್ರತಿ ಬ್ಯಾರೆಲ್ ಕಚ್ಚಾತೈಲದ ಜಾಗತಿಕ ಬೆಲೆ 59 ಡಾಲರ್ ನಷ್ಟಿತ್ತು. ಆದರೆ ದಾಳಿ ನಂತರ ಸೋಮವಾರದಿಂದ ಪ್ರತಿ ಬ್ಯಾರೆಲ್ ಬೆಲೆ 71.95 ಡಾಲರ್ ಆಗಿದೆ. ಅಂದರೆ ಒಟ್ಟಾರೆ 19.5 ಡಾಲರ್ ಹೆಚ್ಚಳ ಕಂಡಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿರುವುದರ ಪರಿಣಾಮ ಭಾರತದ ಮೇಲೂ ಬೀರಿದ್ದು, ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ರೂ. 5 ರಿಂದ 6 ಏರಿಕೆಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.

ತೈಲ ಉತ್ಪಾದನೆಯ ಸ್ಥಿತಿ

ತೈಲ ಉತ್ಪಾದನೆಯ ಸ್ಥಿತಿ

ಸೌದಿ ಅರೆಬಿಯಾದ ತೈಲ ಉತ್ಪಾದನಾ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದು ಹಾನಿಯಾದ ನಂತರ ಪ್ರತಿದಿನ 57 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯ ಮಟ್ಟದಲ್ಲಿ ಕುಸಿತ ಕಂಡಿದೆ. ಡ್ರೋನ್ ದಾಳಿಯ ನಂತರ ಶೇಕಡಾ 40ರಷ್ಟು ಮಾತ್ರ ತೈಲ ಉತ್ಪಾದನೆ ಸಾಧ್ಯವಾಗುತ್ತಿದೆ.
ಬಂಡುಕೋರರ ಡ್ರೋನ್ ದಾಳಿಗೆ ಒಳಗಾಗಿರುವ ಎರಡು ಘಟಕಗಳ ಮತ್ತೆ ಪ್ರಾರಂಭವಾಗಲು ಎರಡು ವಾರಗಳು ಬೇಕಾಗಬಹುದು.

ಟೆಕ್ಸಾಸ್, ಬ್ರೆಂಟ್​ ಕಚ್ಚಾ ತೈಲ ದರ

ಟೆಕ್ಸಾಸ್, ಬ್ರೆಂಟ್​ ಕಚ್ಚಾ ತೈಲ ದರ

ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ (ಡಬ್ಲ್ಯೂಟಿಐ)ನ ಕಚ್ಛಾ ತೈಲ ದರವು ಶೇ. 15.5ರಷ್ಟು ಹೆಚ್ಚಳಗೊಂಡು, ಪ್ರತಿ ಬ್ಯಾರೆಲ್​ಗೆ 63.34 ಡಾಲರ್ ಹೆಚ್ಚಾಗಿದೆ.
ಜಗತ್ತಿನ ಹೆಚ್ಚಿನ ಕಚ್ಛಾ ತೈಲದ ಬೆಲೆ ನಿರ್ಧಾರ ಮಾಡುವ ಬ್ರೆಂಟ್​ ಕಚ್ಚಾ ತೈಲ ದರ ಶೇ. 19.5ರಷ್ಟು ಹೆಚ್ಚಳವಾಗಿದೆ. ಬ್ರೆಂಟ್​ನ ಕಚ್ಛಾ ತೈಲ ಬೆಲೆ ಪ್ರತೀ ಬ್ಯಾರೆಲ್​ಗೆ 71.95 ಡಾಲರ್ ತಲುಪಿದೆ.

ಭಾರತದ ಮೇಲೆ ಪರಿಣಾಮ

ಭಾರತದ ಮೇಲೆ ಪರಿಣಾಮ

ಭಾರತವು ಶೇಕಡಾ 83ರಷ್ಟು ಕಚ್ಚಾತೈಲವನ್ನು ಅಮದು ಮಾಡಿಕೊಳ್ಳುತ್ತದೆ. ಇರಾಕ್ ನಿಂದ ಹೆಚ್ಚಿನ ತೈಲವನ್ನು ಭಾರತವು ಅಮದು ಮಾಡಿಕೊಳ್ಳುತ್ತದೆ. ಇದರಿಂದಾಗಿ ಕಚ್ಚಾತೈಲ ಅಮದಿಗೆ ಭಾರತ ಮಾಡುವ ವೆಚ್ಚದ ಪ್ರಮಾಣ ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+