ಬೈಕ್ ಕಂಪನಿಗಳಿಂದ ಬಂಪರ್ ಆಫರ್! ಡಿಸ್ಕೌಂಟ್ ದರದಲ್ಲಿ ನೆಚ್ಚಿನ ಬೈಕ್ ಖರೀದಿಸಿ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ವಾಹನ ಉದ್ಯಮವು ದಸರಾ, ದೀಪಾವಳಿ ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ವಿಶೇಷ ರಿಯಾಯಿತಿ ದರದಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಕಂಪನಿಗಳು ಮುಂದಾಗಿವೆ.

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ವಾಹನ ಉದ್ಯಮವು ದಸರಾ, ದೀಪಾವಳಿ ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ವಿಶೇಷ ರಿಯಾಯಿತಿ ದರದಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಕಂಪನಿಗಳು ಮುಂದಾಗಿವೆ.
ಮಾರಾಟದಲ್ಲಿ ಭಾರೀ ಕುಸಿತವನ್ನು ಎದುರಿಸುತ್ತಿರುವ ದ್ವಿಚಕ್ರ ವಾಹನ ತಯಾರಕರು ಹಬ್ಬದ ಋತು ಸಮೀಪಿಸುತ್ತಿದ್ದಂತೆ ಮಾರಾಟವನ್ನು ಹೆಚ್ಚಿಸಲು ನೋಡುತ್ತಿದ್ದಾರೆ. ಅನೇಕ ದ್ವಿಚಕ್ರ ವಾಹನ ಉಪಕರಣ ತಯಾರಕರು (ಒಇಎಂಗಳು) ಹಬ್ಬದ ಋತುವಿನಲ್ಲಿ ಖರೀದಿದಾರರನ್ನು ಆಕರ್ಷಿಸಲು ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ.

ಬಜಾಜ್ ಆಟೋ

ಬಜಾಜ್ ಆಟೋ

ಮೋಟಾರು ಸೈಕಲ್‌ಗಳ ಅತಿದೊಡ್ಡ ರಫ್ತುದಾರ ಮತ್ತು 150 ಸಿಸಿ ಮೋಟಾರ್‌ಸೈಕಲ್ ಮಾರಾಟ ಮಾಡುವ ಪ್ರಮುಖ ಕಂಪನಿ ಬಜಾಜ್ ಆಟೋ ಲಿಮಿಟೆಡ್ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ ಅದರ ಮೋಟಾರ್‌ಸೈಕಲ್‌ಗಳಲ್ಲಿ ಉಚಿತ ಸೇವೆಗಳು ಮತ್ತು ಖಾತರಿ ನೀಡುತ್ತದೆ.
ಬಜಾಜ್ ಮೋಟರ್ ಸೈಕಲ್‌ಗಳಲ್ಲಿ, ಕಂಪನಿಯು ರೂ. 6,000 ವರೆಗಿನ ನಗದು ರಿಯಾಯಿತಿಯನ್ನು ನೀಡುತ್ತದೆ. ಜೊತೆಗೆ 5 ಉಚಿತ ಸೇವೆಗಳು ಮತ್ತು 5 ವರ್ಷಗಳವರೆಗೆ ಉಚಿತ ವಾರಂಟಿ ನೀಡುತ್ತದೆ. ಎಂಟ್ರಿ ಲೆವೆಲ್ ಬಜಾಜ್ ಸಿಟಿ 100, ಬಜಾಜ್ ಪ್ಲಾಟಿನಾ ಮತ್ತು ಬಜಾಜ್ ಪಲ್ಸರ್ ಶ್ರೇಣಿಯ ಜೊತೆಗೆ ಬಜಾಜ್ ಡೊಮಿನಾರ್ 400 ಬಜಾಜ್ ಮೋಟಾರ್‌ಸೈಕಲ್ ಮಡೆಲ್ ಗಳಲ್ಲಿ ಆಫರ್‌ಗಳು ಲಭ್ಯವಿವೆ. ಬಜಾಜ್ ಅವೆಂಜರ್ ಶ್ರೇಣಿ, ಬಜಾಜ್ ವಿ ಮತ್ತು ಬಜಾಜ್ ಡಿಸ್ಕವರ್ ಸರಣಿ ಆಫರ್ ಲಭ್ಯವಿವೆ. ಈ ಎಲ್ಲಾ ಕೊಡುಗೆಗಳು 2019 ರ ಅಕ್ಟೋಬರ್ 31 ರವರೆಗೆ ಮಾನ್ಯವಾಗಿರುತ್ತವೆ.

ಯಮಾಹಾ ಇಂಡಿಯಾ

ಯಮಾಹಾ ಇಂಡಿಯಾ

ಹಬ್ಬದ ಋತು ಸಮೀಪಿಸುತ್ತಿದ್ದಂತೆ ಇಂಡಿಯಾ ಯಮಹಾ ದೇಶಾದ್ಯಂತ ಹಲವಾರು ಯೋಜನೆಗಳನ್ನು ಘೋಷಿಸಿದೆ. ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳೊಂದಿಗೆ ಯಮಹಾ ತನ್ನ ಸ್ಕೂಟರ್‌ಗಳಲ್ಲಿ ಹಲವಾರು ವಿಭಿನ್ನ ಯೋಜನೆಗಳನ್ನು ನೀಡುತ್ತಿದೆ. ದಕ್ಷಿಣ ಪ್ರದೇಶದ ಯಾವುದೇ ಯಮಹಾ ಸ್ಕೂಟರ್ ಖರೀದಿಸುವ ಗ್ರಾಹಕರು ಹಣಕಾಸಿನ ಮೇಲೆ ಶೇ. 0 ರಷ್ಟು ಬಡ್ಡಿಯನ್ನು ಪಡೆಯಬಹುದು. ಕಡಿಮೆ ಮೊತ್ತದ ಡೌನ್ ಪೇಮೆಂಟ್ ರೂ. 3,999 ಯೋಜನೆಯೊಂದಿಗೆ ಆಕರ್ಷಕ ಬಡ್ಡಿದರ ಶೇ 6.9 ರಷ್ಟು ಪಡೆಯಬಹುದು. ಆಫರ್ ಸಮಯದಲ್ಲಿ ಖರೀದಿಸಿದ ಯಾವುದೇ ಸ್ಕೂಟರ್‌ನಲ್ಲಿ ರೂ. 8,000 ವರೆಗೆ ಉಳಿತಾಯವಾಗಲಿದೆ ಎಂದು ಯಮಹಾ ಕಂಪನಿ ಹೇಳಿದ್ದು, ಇದು ಅಕ್ಟೋಬರ್ 31, 2019 ರವರೆಗೆ ಮಾನ್ಯವಾಗಿರುತ್ತದೆ.

ಸುಜುಕಿ

ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಐಪಿಎಲ್) ಕೂಡ ಹಬ್ಬದ ಋತುವಿನ ಕೊಡುಗೆಗಳನ್ನು ನೀಡುತ್ತಿದೆ. ಪೇಟಿಎಂ ಮೂಲಕ ಖರೀದಿಸಿದ ಯಾವುದೇ ಸುಜುಕಿ ದ್ವಿಚಕ್ರ ವಾಹನವನ್ನು, ರೂ. 8,500 ವರೆಗಿನ ಕ್ಯಾಶ್‌ಬ್ಯಾಕ್‌ನೊಂದಿಗೆ ನೀಡಲಾಗುತ್ತಿದೆ. ಸ್ಥಳದಲ್ಲೇ ಸಾಲ ಅನುಮೋದನೆ ಮತ್ತು 48 ತಿಂಗಳವರೆಗೆ ಮಾಸಿಕ ಪಾವತಿ ಯೋಜನೆಗಳೊಂದಿಗೆ ಕೇವಲ ರೂ. 777 ಕಡಿಮೆ ಡೌನ್ ಪೇಮೆಂಟ್ ಯೋಜನೆಯಿದೆ.

ಸುಜುಕಿ ಲಕ್ಕಿ ಡ್ರಾ

ಸುಜುಕಿ ಲಕ್ಕಿ ಡ್ರಾ

ಲಕ್ಕಿ ಡ್ರಾದ ಭಾಗವಾಗಿ ಯಾವುದೇ ಸುಜುಕಿ ದ್ವಿಚಕ್ರ ಮತ್ತು 5 ಗ್ರಾಂ ವರೆಗೆ 22 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು ಖರೀದಿಸುವಾಗ ಲಕ್ಕಿ ಡ್ರಾ ಆಗಿ ಮಾರುತಿ ಸುಜುಕಿ ಸ್ವಿಫ್ಟ್ ಗೆಲ್ಲುವ ಅವಕಾಶವನ್ನು ಸುಜುಕಿ ಸಂಸ್ಥೆ ನೀಡುತ್ತಿದೆ. ಸುಜುಕಿಯ ಕೊಡುಗೆಗಳು ಸೆಪ್ಟೆಂಬರ್ 30, 2019 ರವರೆಗೆ ಮಾನ್ಯವಾಗಿರುತ್ತವೆ. ಆದರೆ 2019 ರ ಅಕ್ಟೋಬರ್‌ನಲ್ಲಿಯೂ ಈ ಆಫರ್ ಗಳು ಮುಂದುವರೆಯುವ ನಿರೀಕ್ಷೆಯಿದೆ.

 

 

ಟಿವಿಎಸ್ ಮೋಟಾರ್, ಹೀರೋ, ಹೊಂಡಾ ಆಫರ್

ಟಿವಿಎಸ್ ಮೋಟಾರ್, ಹೀರೋ, ಹೊಂಡಾ ಆಫರ್

ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಹೀರೋ ಮೊಟೊಕಾರ್ಪ್, ಹಾಗೆಯೇ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಸಹ ಗ್ರಾಹಕರನ್ನು ಆಮಿಷವೊಡ್ಡಲು ಹಬ್ಬದ ಋತುವಿನ ಕೊಡುಗೆಗಳನ್ನು ಹೊರತರುವ ನಿರೀಕ್ಷೆಯಿದೆ. ಸಾಂಪ್ರದಾಯಿಕವಾಗಿ ಭಾರತೀಯರು ಹಬ್ಬದ ಸಂದರ್ಭದಲ್ಲಿ ಹೊಸ ದ್ವಿಚಕ್ರ ಮತ್ತು ಕಾರುಗಳನ್ನು ಖರೀದಿಸಲು ಮುಂದಾಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+