For Quick Alerts
ALLOW NOTIFICATIONS  
For Daily Alerts

ಮುಷ್ಕರ ಮುಂದೂಡಿಕೆ: ಬ್ಯಾಂಕುಗಳಿಗೆ ಎರಡು ದಿನ ರಜೆ, ನಿಮ್ಮ ಕಾರ್ಯ ಇಂದೇ ಮುಗಿಸಿಕೊಳ್ಳಿ

ಬ್ಯಾಂಕ್ ಸಂಘಟನೆಗಳು ಸೆಪ್ಟೆಂಬರ್ 26, 27 ರಂದು ಕೇಂದ್ರದ ಬ್ಯಾಂಕ್ ವಿಲೀನ ನೀತಿ ವಿರೋಧಿಸಿ ಮುಷ್ಕರ ಮಾಡುವುದಾಗಿ ಘೋಷಿಸಿದ್ದವು. ಇದರಿಂದಾಗಿ ಸೆಪ್ಟಂಬರ್ 26, 27, 28, 29 ಸತತ 4 ದಿನ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

|

ಬ್ಯಾಂಕ್ ಸಂಘಟನೆಗಳು ಸೆಪ್ಟೆಂಬರ್ 26, 27 ರಂದು ಕೇಂದ್ರದ ಬ್ಯಾಂಕ್ ವಿಲೀನ ನೀತಿ ವಿರೋಧಿಸಿ ಮುಷ್ಕರ ಮಾಡುವುದಾಗಿ ಘೋಷಿಸಿದ್ದವು. ಇದರಿಂದಾಗಿ ಸೆಪ್ಟಂಬರ್ 26, 27, 28, 29 ಸತತ 4 ದಿನ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ವರದಿಯಾಗಿತ್ತು.

ಮುಷ್ಕರ ಮುಂದೂಡಿಕೆ, ಬ್ಯಾಂಕುಗಳಿಗೆ ಎರಡು ದಿನ ರಜೆ

ಆದರೆ ಸೆಪ್ಟೆಂಬರ್ 26 ಗುರುವಾರ ಮತ್ತು ಸೆಪ್ಟೆಂಬರ್ 27 ಶುಕ್ರವಾರದಂದು ಕೈಗೊಂಡಿದ್ದ ಮುಷ್ಕರವನ್ನು ಬ್ಯಾಂಕ್ ಸಿಬ್ಬಂದಿಗಳ ಕಾರ್ಮಿಕ ಸಂಘಟನೆಗಳು ರದ್ದುಗೊಳಿಸಿವೆ.
ಸೆಪ್ಟೆಂಬರ್ 28 ರಂದು 4ನೇ ಶನಿವಾರ ಆಗಿರುವುದರಿಂದ ರಜೆ ಇರಲಿದೆ. ಸೆಪ್ಟೆಂಬರ್ 29 ಭಾನುವಾರ ಇರುವುದರಿಂದ ಬ್ಯಾಂಕ್ ತೆರೆಯುವುದಿಲ್ಲ. ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಅರ್ಧ ವಾರ್ಷಿಕ ಲೆಕ್ಕಪತ್ರ ದಿನವಾಗಿದೆ. ಸೆಪ್ಟಂಬರ್ 30 ರಂದು ಬ್ಯಾಂಕ್ ಬಾಗಿಲು ತೆರೆದಿದ್ದರೂ, ಗ್ರಾಹಕರಿಗೆ ಸೇವೆ ಸಿಗುವುದಿಲ್ಲ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಪ್ರಯುಕ್ತ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಸತತವಾಗಿ ಬ್ಯಾಂಕುಗಳಿಗೆ ರಜೆ ಇರುವುದರಿಂದ ಬ್ಯಾಂಕ್ ಸೇವೆಗಳಾದ ಹಣ ಪಾವತಿ, ವಿತ್ ಡ್ರಾ, ಡಿಡಿ, ಚೆಕ್ ಮೊದಲಾದ ಕೆಲಸಗಳನ್ನು ಮೊದಲೇ ಮುಗಿಸಿಕೊಳ್ಳಿ.

- ಗುರುವಾರ, ಶುಕ್ರವಾರ ಬ್ಯಾಂಕ್ ಮುಷ್ಕರ ಆದರೆ ಬ್ಯಾಂಕಿಂಗ್ ಕಾರ್ಯಾಚರಣೆಯಲ್ಲಿ ನಾಲ್ಕು ದಿನಗಳ ಸ್ಥಗಿತಕ್ಕೆ ಕಾರಣವಾಗಬಹುದು. ಶನಿವಾರ ಮತ್ತು ಭಾನುವಾರ ಸಾಪ್ತಾಹಿಕ ರಜೆಗಳಿವೆ. ಮುಷ್ಕರವು ಬ್ಯಾಂಕುಗಳ ಫಂಡ್ ವರ್ಗಾವಣೆ ಮತ್ತು ಶಾಖೆಗಳು ಮತ್ತು ಎಟಿಎಂಗಳಲ್ಲಿ ಹಣವನ್ನು ಹಿಂಪಡೆಯಲು ಅಡ್ಡಿಯಾಗಬಹುದು.
- ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಅಸೋಸಿಯೇಶನ್ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ (ಐಎನ್‌ಬಿಒಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ನೊಬೊ)ಮುಷ್ಕರಕ್ಕೆ ಕರೆ ನೀಡಿದ್ದವು.

Read more about: bank money finance news
English summary

Government Banks To Remain Shut For Two Days This Week As Strike Deferred

Trade unions of state-run bank staff on Monday called off a two-day strike scheduled for this week.
Story first published: Wednesday, September 25, 2019, 12:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X