ಸೆನ್ಸೆಕ್ಸ್ 504 ಪಾಯಿಂಟ್ ಕುಸಿತ, ಯುಎಸ್ ರಾಜಕೀಯ ಎಫೆಕ್ಟ್! 1.94 ಲಕ್ಷ ಕೋಟಿ ನಷ್ಟ
ಯುಎಸ್ ರಾಜಕೀಯ ಅನಿಶ್ಚಿತತೆ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ ನಿಧಾನಗತಿಯ ಮಾರಾಟವು ದೇಶೀ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತು.
ಯುಎಸ್ ರಾಜಕೀಯ ಅನಿಶ್ಚಿತತೆ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ ನಿಧಾನಗತಿಯ ಮಾರಾಟವು ದೇಶೀ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತು. ಬುಧವಾರ ವಹಿವಾಟಿನ ಪ್ರಾರಂಭದಲ್ಲಿ ಗೂಳಿ ಓಟ ನಡೆಸುತ್ತಿದ್ದ ಷೇರು ಮಾರುಕಟ್ಟೆ ದಿನದ ಅಂತ್ಯದ ವೇಳೆಗೆ ಇಳಿಕೆ ಕಂಡಿದೆ.

ವಹಿವಾಟಿನ ಕೊನೆಯಲ್ಲಿ ಸೆನ್ಸೆಕ್ಸ್ 503.62 ಅಂಕ ಇಳಿಕೆ ಕಂಡು 38,593.52 ನಲ್ಲಿ ಮುಕ್ತಾಯ ಕಂಡಿದೆ. ನಿಫ್ಟಿ 148 ಅಂಕಗಳ ಇಳಿಕೆಯೊಂದಿಗೆ 11,440.40 ಮಟ್ಟದಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಇಳಿಕೆಯಿಂದಾಗಿ ಹೂಡಿಕೆದಾರರಿಗೆ ನಷ್ಟವಾಗಿದೆ.
ಬಿಎಸ್ಇ ಸೆನ್ಸೆಕ್ಸ್ ಮೂರು ದಿನಗಳ ಗೆಲುವಿನ ಹಾದಿಯಿಂದ ಕೆಳಕ್ಕೆ ಬಿದ್ದಿದೆ. ಬಿಎಸ್ಇ ಸೆನ್ಸೆಕ್ಸ್ 503.62 ಪಾಯಿಂಟ್ ಕುಸಿದು 38593.52 ಕ್ಕೆ ತಲುಪಿದ್ದರೆ, ನಿಫ್ಟಿ ಸೂಚ್ಯಂಕವು 148.00 ಪಾಯಿಂಟ್ ಇಳಿಕೆ ಕಂಡು 11,440.20 ಮಟ್ಟ ತಲುಪಿದೆ.
ಹೂಡಿಕೆದಾರರಿಗೆ ರೂ. 1.94 ಲಕ್ಷ ಕೋಟಿಗಿಂತ ಹೆಚ್ಚಿನ ನಷ್ಟವಾಗಿದೆ. ಮಾರುಕಟ್ಟೆ ಕ್ಯಾಪ್ ಮಂಗಳವಾರ 1,48,73,247.18 ಕೋಟಿ ರೂಪಾಯಿಗಳಾಗಿತ್ತು. ಎಸ್‌ಬಿಐ, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಎಂ ಅಂಡ್ ಎಂ ಮತ್ತು ಐಷರ್ ಮೋಟಾರ್ಸ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಕಂಡಿದ್ದು, ಪವರ್ ಗ್ರಿಡ್, ಟಿಸಿಎಸ್, ಎನ್‌ಟಿಪಿಸಿ, ಐಒಸಿ ಮತ್ತು ಬಿಪಿಸಿಎಲ್ ಲಾಭ ಗಳಿಸಿವೆ.


Click it and Unblock the Notifications