ಅಕ್ಟೋಬರ್ 1ರಿಂದ ಯಾವುದು ದುಬಾರಿ? ಯಾವುದು ಅಗ್ಗ?

ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ಅನೇಕ ಹೊಸ ನಿಯಮಗಳು ಜಾರಿ ಆಗುತ್ತವೆ ಇಲ್ಲವೇ ಹಳೆಯ ನಿಯಮಗಳು ಬದಲಾಗುತ್ತವೆ. ಇದು ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುತ್ತದೆ.

ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ಅನೇಕ ಹೊಸ ನಿಯಮಗಳು ಜಾರಿ ಆಗುತ್ತವೆ ಇಲ್ಲವೇ ಹಳೆಯ ನಿಯಮಗಳು ಬದಲಾಗುತ್ತವೆ. ಇದು ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಇದೀಗ ಅಕ್ಟೋಬರ್ 1ರಿಂದ ಕೆಲ ಬದಲಾವಣೆಗಳಾಗಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಅಕ್ಟೋಬರ್ 1ರಿಂದ ಯಾವುದು ದುಬಾರಿ? ಯಾವುದು ಅಗ್ಗ?

ಹೊಸ ಜಿಎಸ್ಟಿ ದರ ಅಕ್ಟೋಬರ್ 1ರಿಂದ ಜಾರಿಯಾಗಲಿದ್ದು, ಅನೇಕ ವಸ್ತುಗಳ ಬೆಲೆ ದುಬಾರಿಯಾದರೆ, ಕೆಲವು ಅಗ್ಗವಾಗಲಿವೆ. ಹೊಟೇಲ್ ರೂಮ್ ಹಾಗೂ ಕಾರು ಸೇರಿದಂತೆ ಅನೇಕ ಸೇವೆಗಳ ಬೆಲೆ ಇಳಿಕೆಯಾಗಲಿದೆ.
1. ರೂ. 1000 ವರೆಗೆ ಬಾಡಿಗೆಗೆ ಯಾವುದೇ ತೆರಿಗೆ ಇರುವುದಿಲ್ಲ. 7500 ರೂಪಾಯಿ ಬಾಡಿಗೆ ರೂಮಿಗೆ ಶೇಕಡಾ 12ರಷ್ಟು ಜಿಎಸ್ಟಿ ಇರಲಿದೆ. ರೂ. 7500ಕ್ಕಿಂತ ಹೆಚ್ಚಿನ ಬಾಡಿಗೆ ಇರುವ ರೂಮಿಗೆ ಶೇ. 18ರಷ್ಟು ಜಿಎಸ್ಟಿ ವಿಧಿಸಬೇಕು.
2. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 10 ರಿಂದ 13 ಸೀಟಿನ ಪೆಟ್ರೋಲ್, ಡಿಸೇಲ್ ವಾಹನ ಸೆಸ್ ಇಳಿಸಲಾಗಿದೆ. 1200 ಸಿಸಿ ಪೆಟ್ರೋಲ್ ವಾಹನದ ಮೇಲೆ ಶೇ. 1ರಷ್ಟು ಹಾಗೂ 1500 ಸಿಸಿ ಡಿಸೇಲ್ ವಾಹನದ ಮೇಲೆ ಶೇ. 3 ರಷ್ಟು ಸೆಸ್ ವಿಧಿಸಲಾಗಿದೆ.
3. ಕಾರ್ಪೋರೇಟ್ ತೆರಿಗೆ ಇಳಿಕೆ ಮಾಡಲಾಗಿದೆ.
ಮಾರುತಿ ಸುಜುಕಿ ಕಂಪನಿಯು ಆಯ್ದ ವಾಹನಗಳ ಬೆಲೆಯನ್ನು ಇಳಿಕೆ ಮಾಡಿದೆ.
4. ಒಣ ಹುಣಸೆ ಹಣ್ಣಿನ ಬೆಲೆ, ಸಮುದ್ರ ವಾಹನಗಳ ಇಂಧನ, ವಜ್ರ, ಮಾಣಿಕ್ಯ, ಪಚ್ಚೆ, ರತ್ನಗಳ ತೆರಿಗೆ ದರವನ್ನು ಇಳಿಸಲಾಗಿದೆ.
5. ರೈಲು ಬೋಗಿಗಳು ಹಾಗೂ ವ್ಯಾಗನ್ ಗಳ ಮೇಲಿನ ಜಿಎಸ್ಟಿ ದರವನ್ನು ಶೇ. 5‌ ರಿಂದ 12ಕ್ಕೆ ಹೆಚ್ಚಿಸಲಾಗಿದೆ
6. ಕೆಫಿನ್ ಉತ್ಪನ್ನಗಳ, ಪಾನೀಯಗಳ ದರ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+