For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಗ್ರಾಹಕರಿಗೆ ಕಹಿಸುದ್ದಿ! ಅಕ್ಟೋಬರ್ 1ರಿಂದ ಈ ನಿಯಮಗಳು ಜಾರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಕ್ಟೋಬರ್ 1 ರಿಂದ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಸಲಹೆಯಂತೆ ಇಂಧನದ ಕ್ರೆಡಿಟ್ ಕಾರ್ಡ್ ಖರೀದಿ ಮೇಲಿನ ಕ್ಯಾಶ್‌ಬ್ಯಾಕ್ ಅನ್ನು ನಿಲ್ಲಿಸಲಿದೆ.

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಕ್ಟೋಬರ್ 1 ರಿಂದ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಸಲಹೆಯಂತೆ ಇಂಧನದ ಕ್ರೆಡಿಟ್ ಕಾರ್ಡ್ ಖರೀದಿ ಮೇಲಿನ ಕ್ಯಾಶ್‌ಬ್ಯಾಕ್ ಅನ್ನು ನಿಲ್ಲಿಸಲಿದೆ.
ಪ್ರಿಯ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಹೋಲ್ಡರ್, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಸಲಹೆಯಂತೆ, ಇಂಧನ ವಹಿವಾಟಿನ 0.75% ಕ್ಯಾಶ್‌ಬ್ಯಾಕ್ ಅನ್ನು ಅಕ್ಟೋಬರ್ 1, 2019 ರಿಂದ ಸ್ಥಗಿತಗೊಳಿಸಲಾಗುತ್ತದೆ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಟೆಕ್ಸ್ಟ್ ಮೆಸೆಜ್ ಗಳನ್ನು ಕಳುಹಿಸುತ್ತಿದೆ.

ಎಸ್ಬಿಐ ಗ್ರಾಹಕರಿಗೆ ಕಹಿಸುದ್ದಿ! ಅಕ್ಟೋಬರ್ 1ರಿಂದ ಈ ನಿಯಮಗಳು ಜಾರಿ

- ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ - ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು ಇ-ವ್ಯಾಲೆಟ್‌ಗಳನ್ನು ಬಳಸಿಕೊಂಡು ಖರೀದಿಸಿದ ಇಂಧನದ ಮೌಲ್ಯದ ಶೇಕಡಾ 0.75 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದ್ದವು. ಇಂಧನ ಖರೀದಿಸಿದ 3 ದಿನಗಳಲ್ಲಿ ಈ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

- ಎಸ್ಬಿಐನಲ್ಲಿ ಹಣ ಡ್ರಾ ಮಾಡುವಾಗ ಸಾಕಷ್ಟು ಬ್ಯಾಲೆನ್ಸ್ ಇರಬೇಕಾಗುತ್ತದೆ. ಏಕೆಂದರೆ ಸಾಕಷ್ಟು ಹಣ ಖಾತೆಯಲ್ಲಿರದಿದ್ದರೂ ಹಣ ಡ್ರಾ ಮಾಡಲು ಯತ್ನಿಸಿ ಟ್ರಾನ್ಸ್ಯಾಕ್ಷನ್ ಸ್ಥಗಿತಗೊಂಡರೆ ಅದಕ್ಕೂ ಶುಲ್ಕ ಭರಿಸಬೇಕಾಗುತ್ತದೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ನಿಗದಿತ ವಹಿವಾಟಿಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶುಲ್ಕ ತಗಲುತ್ತದೆ.

ಎಸ್‌ಬಿಐನ ವಿವಿಧ ಕಾರ್ಡ್‌ಗಳ ದೈನಂದಿನ ವಿತ್ ಡ್ರಾವಲ್ ಮಿತಿ
- ಎಸ್‌ಬಿಐ ಕ್ಲಾಸಿಕ್ ಮತ್ತು ಮೇಸ್ಟ್ರೋ ಡೆಬಿಟ್ ಕಾರ್ಡ್‌ನ ವಿತ್ ಡ್ರಾವಲ್ ಲಿಮಿಟ್ ಕನಿಷ್ಠ ರೂ. 100, ಗರಿಷ್ಠ ರೂ. 20 ಸಾವಿರ.
- ಎಸ್‌ಬಿಐ ಗ್ಲೋಬಲ್ ಇಂಟರ್‌ನ್ಯಾಷನಲ್ ಡೆಬಿಟ್ ಕಾರ್ಡ್ ಕನಿಷ್ಠ ರೂ. 100, ಗರಿಷ್ಠ ರೂ. 40,000 ಮಿತಿ.
- ಎಸ್ಬಿಐ ಗೋಲ್ಡ್ ಇಂಟರ್‌ನ್ಯಾಷನಲ್ ಡೆಬಿಟ್ ಕಾರ್ಡ್ ಕನಿಷ್ಠ ರೂ. 100, ಗರಿಷ್ಠ ರೂ. 50,000 ಮಿತಿ.
- ಎಸ್‌ಬಿಐ ಪ್ಲ್ಯಾಟಿನಮ್ ಇಂಟರ್‌ ನ್ಯಾಷನಲ್ ಡೆಬಿಟ್ ಕಾರ್ಡ್ ಕನಿಷ್ಠ ರೂ. 100, ಗರಿಷ್ಠ ರೂ. 1,00,000 ಮಿತಿ ಇದೆ.

English summary

SBI rules: Credit Card Users Will Not Get Cashback and atm withdrawal limit From October

Starting 1 October, the State Bank of India will discontinue cashback on credit card purchases of fuel as per an advisory from state-owned oil marketing companies.
Story first published: Thursday, September 26, 2019, 11:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X