ಹೊಸ ಮೌಲ್ಯಮಾಪನ ಅಡಿಯಲ್ಲಿ 4 ಲಕ್ಷ ತೆರಿಗೆದಾರರಿಗೆ ನೋಟಿಸ್: ಐಟಿ ಇಲಾಖೆ

ಹೊಸ ಇ-ಅಸೆಸ್ಮೆಂಟ್ ಸ್ಕೀಮ್ 2019 ರ ಅಡಿಯಲ್ಲಿ ಸುಮಾರು 4 ಲಕ್ಷ ತೆರಿಗೆದಾರರನ್ನು ಆದಾಯ ತೆರಿಗೆ (ಐ-ಟಿ) ಇಲಾಖೆಯು ತನಿಖೆ ನಡೆಸುವುದಾಗಿ ಹೇಳಿದೆ.

ಹೊಸ ಇ-ಅಸೆಸ್ಮೆಂಟ್ ಸ್ಕೀಮ್ 2019 ರ ಅಡಿಯಲ್ಲಿ ಸುಮಾರು 4 ಲಕ್ಷ ತೆರಿಗೆದಾರರನ್ನು ಆದಾಯ ತೆರಿಗೆ (ಐ-ಟಿ) ಇಲಾಖೆಯು ತನಿಖೆ ನಡೆಸುವುದಾಗಿ ಹೇಳಿದೆ.

ಹೊಸ ಮೌಲ್ಯಮಾಪನ ಅಡಿಯಲ್ಲಿ 4 ಲಕ್ಷ ತೆರಿಗೆದಾರರಿಗೆ ನೋಟಿಸ್: ಐಟಿ

ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಬಗ್ಗೆ ಮುಖರಹಿತ ಪರಿಶೀಲನೆ ನಡೆಸಲು ಹೊಸ ಯೋಜನೆಯನ್ನು ಹಣಕಾಸು ಸಚಿವಾಲಯ ಇತ್ತೀಚೆಗೆ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯು ಒಂದು ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ ನೊಟೀಸ್ ನೀಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಬಗ್ಗೆ 15 ದಿನಗಳ ಒಳಗಾಗಿ ಸ್ಪಷ್ಟೀಕರಣ ನೀಡುವಂತೆ ತೆರಿಗೆದಾರರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರೂ ತಿಳಿಸಿದ್ದಾರೆ.
ತೆರಿಗೆ ಇಲಾಖೆ ಕಳುಹಿಸಿದ ಸುಮಾರು 10,000 ಪತ್ರಗಳು ವಿಲೇವಾರಿಯಾಗದೆ ಹಿಂತಿರುಗಿದ್ದು, ಈ ನೋಟಿಸುಗಳನ್ನು ಕಳುಹಿಸುವ ಗಡುವು ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳುತ್ತದೆ. ಪ್ರಸಕ್ತ ವರ್ಷ ತೆರಿಗೆ ಇಲಾಖೆಯು ಕಂಪ್ಯೂಟರ್ ಆಧಾರಿತ ತನಿಖಾ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಹೊಸ ವ್ಯವಸ್ಥೆಯಡಿ ಆದಾಯ ಪರಿಶೀಲಿಸಲು ಸುಮಾರು 100 ಮಾನದಂಡಗಳನ್ನು ತಯಾರಿಸಿದೆ.
ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಸ್ಥಿರ ಆಸ್ತಿಗಳನ್ನು ಒಳಗೊಂಡಿರುವ ಹಲವಾರು ನಿಯತಾಂಕಗಳ ಆಧಾರದ ಮೇಲೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಟಿಡಿಎಸ್ ಹೇಳಿದೆ. ಇದರಲ್ಲಿ ಹಿಂದಿನ ವರ್ಷಗಳಲ್ಲಿ ತೆರಿಗೆ ವಂಚಿಸಿರುವುದು, ದೀರ್ಘಾವಧಿಯ ಬಂಡವಾಳ ಲಾಭಗಳನ್ನು ತಪ್ಪಾಗಿ ವರದಿ ಮಾಡುವುದು, ದೋಷಯುಕ್ತ ಆದಾಯವನ್ನು ಸಲ್ಲಿಸುವುದು, ಹೆಚ್ಚಿನ- ಮೌಲ್ಯ ವಹಿವಾಟು, ಸಂಗಾತಿ ಅಥವಾ ಸಂಬಂಧಿಕರ ಹೆಸರಿನಲ್ಲಿ ಮಾಡಿದ ಹೂಡಿಕೆಗಳನ್ನು ಬಹಿರಂಗಪಡಿಸದಿರುವುದು ಸೇರಿದೆ.
ಇ-ಮೌಲ್ಯಮಾಪನವು ಆರಂಭಿಕ ಹಂತದಲ್ಲಿ ಸಂಪೂರ್ಣವಾಗಿ ಹಸ್ತಕ್ಷೇಪದಿಂದ ಮುಕ್ತವಾಗುವುದಿಲ್ಲ ಎನ್ನಲಾಗಿದೆ. ಏಕೆಂದರೆ ಮೌಲ್ಯಮಾಪನ ಮಾಡುವ ಅಧಿಕಾರಿಯು ಮೌಲ್ಯಮಾಪಕನ ಪ್ರೊಫೈಲ್‌ನ ವಿವರಗಳನ್ನು ತಿಳಿದಿರುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+