For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್ ಹೊಂದಿದ್ದಿರಾ? ಸೆಪ್ಟಂಬರ್ 30 ಡೆಡ್ ಲೈನ್, ಇಲ್ಲಿ ನೋಡಿ..

ಪ್ಯಾನ್ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದ್ದು, ಇದೇ ತಿಂಗಳ ಸೆಪ್ಟಂಬರ್ 30 ಕೊನೆಯ ದಿನವಾಗಿದೆ. ನೀವು ಪ್ಯಾನ್ ಕಾರ್ಡ್ ನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ವಿಫಲವಾದರೆ ಅಕ್ಟೋಬರ್ ಒಂದರಿಂದ ನಿಷ್ಕ್ರಿಯಗೊಳಿಸಬಹುದು.

|

ಪ್ಯಾನ್ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದ್ದು, ಇದೇ ತಿಂಗಳ ಸೆಪ್ಟಂಬರ್ 30 ಕೊನೆಯ ದಿನವಾಗಿದೆ. ನೀವು ಪ್ಯಾನ್ ಕಾರ್ಡ್ ನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ವಿಫಲವಾದರೆ ಅಕ್ಟೋಬರ್ ಒಂದರಿಂದ ನಿಷ್ಕ್ರಿಯಗೊಳಿಸಬಹುದು. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡ ನಂತರ ಏನಾಗುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೂ, ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಪ್ಯಾನ್ ಕಾರ್ಡ್ ಬಳಸಿಕೊಂಡು ಕೈಗೊಳ್ಳುವ ವ್ಯವಹಾರಗಳನ್ನು ನಡೆಸಲು ಸಾದ್ಯವಿಲ್ಲ.

ಪ್ಯಾನ್ ಕಾರ್ಡ್ ಹೊಂದಿದ್ದಿರಾ? ಇಲ್ಲಿ ನೋಡಿ..

ಮುಖ್ಯವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ತೆರಿಗೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಬೇಕಾಗುತ್ತದೆ.
ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ವಿಫಲವಾದರೆ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಸಿಬಿಡಿಟಿ ಸೂಚಿಸಿದೆ. ಆದರೆ ಹಿಂದಿನ ಅಧಿಸೂಚನೆಯಂತೆ ಪ್ಯಾನ್ ಅಮಾನ್ಯವಾಗಲಿದೆ ಎಂದು ಹೇಳಿದೆ. ಆದರೆ ನಿಷ್ಕ್ರಿಯ ಎಂದರೆ ಏನೆಂದು ಸರ್ಕಾರ ಇನ್ನೂ ವ್ಯಾಖ್ಯಾನಿಸಿಲ್ಲ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಈ ಹಿಂದೆ ಹಲವಾರು ಬಾರಿ ವಿಸ್ತರಿಸಲಾಗಿತ್ತು. ಆದರೆ ಈ ಬಾರಿ ವಿಸ್ತರಿಸುವ ಸಾಧ್ಯತೆ ಇಲ್ಲ.

ಪ್ಯಾನ್ - ಆಧಾರ್ ಲಿಂಕ್‌ ಮಾಡಲು ಈ ಹಂತಗಳನ್ನು ಅನುಸರಿಸಿ:
ಹಂತ 1: ಮೊದಲು 'ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು' ಎಂಬ ಉತ್ತರವನ್ನು ಪಡೆಯಲು ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಬೇಕು. ಅಲ್ಲಿ ನೀವು ಪ್ಯಾನ್ ಆಧಾರ್ ಲಿಂಕ್ ಆಯ್ಕೆಯನ್ನು ಪಡೆಯುತ್ತೀರಿ. ಆಧಾರ್ ಲಿಂಕ್ ಅನ್ನು ಆನ್‌ಲೈನ್‌ನಲ್ಲಿ ಪ್ಯಾನ್ ಮಾಡಲು ಐಟಿ ವೆಬ್ಸೈಟ್‌ನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 2: ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಬೇಕು.
ಹಂತ 3: ಅಗತ್ಯವಿರುವ ಖಾಲಿ ಸ್ಥಳಗಳಲ್ಲಿ ನಿಖರವಾದ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 4: 'ಆಧಾರ್' ನಲ್ಲಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಿ.
ಹಂತ 5: ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹುಟ್ಟಿದ ದಿನಾಂಕದಂತೆ ಜನ್ಮ ದಿನಾಂಕವನ್ನು ಗುರುತಿಸಬೇಕು.
ಹಂತ 6: ಆಧಾರ್ ವಿವರಗಳನ್ನು ಯುಐಡಿಎಐನೊಂದಿಗೆ ಮೌಲ್ಯೀಕರಿಸಲು ಸಿದ್ಧರಿದ್ದರೆ, 'ನನ್ನ ಆಧಾರ್ ವಿವರಗಳನ್ನು ಯುಐಡಿಎಐನೊಂದಿಗೆ ಮೌಲ್ಯೀಕರಿಸಲು ನಾನು ಒಪ್ಪುತ್ತೇನೆ' ಎಂಬ ವರ್ಗವನ್ನು ನೀವು ಗುರುತಿಸಬೇಕು.
ಹಂತ 7: ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು, ನಿಮ್ಮ ಸ್ಕ್ರೀನ್ ಮೇಲೆ ಕಾಣುವ ಇಮೇಜ್ ಕೋಡ್ ಅನ್ನು ನಮೂದಿಸಬೇಕು. ಇಲ್ಲದಿದ್ದರೆ ಒಟಿಪಿ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಹಂತ 8: ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡಲು 'ಲಿಂಕ್ ಆಧಾರ್' ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಪ್ಯಾನ್ - ಆಧಾರ್ ಕಾರ್ಡ್ ಲಿಂಕಿಂಗ್ ಡೆಡ್ ಲೈನ್: ಲಿಂಕ್ ಅಥವಾ ಸ್ಟೇಟಸ್ ಚೆಕ್ ಮಾಡೋದು ಹೇಗೆ?ಪ್ಯಾನ್ - ಆಧಾರ್ ಕಾರ್ಡ್ ಲಿಂಕಿಂಗ್ ಡೆಡ್ ಲೈನ್: ಲಿಂಕ್ ಅಥವಾ ಸ್ಟೇಟಸ್ ಚೆಕ್ ಮಾಡೋದು ಹೇಗೆ?

Read more about: pan card aadhar money
English summary

PAN-Aadhar linking deadline on Sept 30

The last date to link PAN and Aadhaar is September 30. Failing to link your PAN card with the Aadhaar card might render it 'inoperative' from October 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X