ನೀವು ಮನೆ ಖರೀದಿಸಲು ಯೋಜಿಸುತ್ತಿದ್ದಿರಾ? ಹಾಗಿದ್ದರೆ ನಿಮಗೊಂದು ಖುಷಿಯ ಸುದ್ದಿ ಇದೆ. ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಅಕ್ಟೋಬರ್ 1ರಿಂದ ಕಡಿತಗೊಳಿಸಲಿದೆ.
ನೀವು ಮನೆ ಖರೀದಿಸಲು ಯೋಜಿಸುತ್ತಿದ್ದಿರಾ? ಹಾಗಿದ್ದರೆ ನಿಮಗೊಂದು ಖುಷಿಯ ಸುದ್ದಿ ಇದೆ. ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಅಕ್ಟೋಬರ್ 1ರಿಂದ ಕಡಿತಗೊಳಿಸಲಿದೆ.
ಎಸ್ಬಿಐ ಬ್ಯಾಂಕ್ 2019 ಅಕ್ಟೋಬರ್ ಒಂದರಿಂದ ಬಾಹ್ಯ ಬೆಂಚ್‌ಮಾರ್ಕ್ ಸಾಲ ದರ ವ್ಯವಸ್ಥೆಯಡಿಯಲ್ಲಿ ಶೇ. 8.15 ರಷ್ಟು ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡಲಿದೆ. ಎಂಎಸ್‌ಎಂಇ, ವಸತಿ ಮತ್ತು ಚಿಲ್ಲರೆ ಸಾಲ ಸೇರಿದಂತೆ ಎಲ್ಲ ಬದಲಾಗುವ ದರ ಸಾಲವನ್ನು ಬಾಹ್ಯ ಬೆಂಚ್‌ಮಾರ್ಕ್ ರೆಪೊ ದರದೊಂದಿಗೆ ಜೋಡಿಸಲು ನಿರ್ಧರಿಸಿದೆ ಎಂದು ಹೇಳಿದೆ.
ಹಬ್ಬದಲ್ಲಿ ವಿಶೇಷ ಕೊಡುಗೆ
ಹಬ್ಬದ ಋತುವಿನ ಸಂದರ್ಭದಲ್ಲಿ ಎಸ್ಬಿಐ ತನ್ನ ಗ್ರಾಹಕರಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ. ಗೃಹ ಸಾಲಗಳ ಹೊರತಾಗಿ ಕಾರು ಸಾಲ ಮತ್ತು ವೈಯಕ್ತಿಕ ಸಾಲಗಳ ಆಫರ್ ಕೂಡ ನೀಡುತ್ತಿದೆ. ಒಂದೇಡೆ ಗ್ರಾಹಕರಿಗೆ ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಮೊಬೈಲ್ ಆಪ್ ಯೊನೊ ಮೂಲಕ ಕಡಿಮೆ ಬಡ್ಡಿ ದರ, ಶೂನ್ಯ ಸಂಸ್ಕರಣಾ ಶುಲ್ಕ ಸೇರಿದಂತೆ ಅನೇಕ ರಿಯಾಯಿತಿಗಳನ್ನು ನೀಡಲಿದೆ.
ಇದಲ್ಲದೆ, ವೈಯಕ್ತಿಕ ಸಾಲಗಳಿಗೆ ಕಡಿಮೆ ಬಡ್ಡಿದರ ಮತ್ತು ಸಂಸ್ಕರಣಾ ಶುಲ್ಕದ ಮೇಲೆ ಶೇ. 50ರಷ್ಟು ರಿಯಾಯಿತಿ ಕೂಡ ಇರಲಿದೆ.
ಅಕ್ಟೋಬರ್ 1ರಿಂದ ಜಾರಿ
ಎಸ್‌ಬಿಐನ ಹೊಸ ಸೇವಾ ಶುಲ್ಕಗಳು 1 ಅಕ್ಟೋಬರ್ 2019 ರಿಂದ ಅನ್ವಯವಾಗಲಿದೆ. ಪ್ರಸ್ತುತ, ಮೆಟ್ರೋ ನಗರಗಳು, ನಗರ ಪ್ರದೇಶಗಳಲ್ಲಿನ ಎಸ್‌ಬಿಐ ಶಾಖೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಜನರು ಕನಿಷ್ಠ ಮಾಸಿಕ ಸರಾಸರಿ ಬಾಕಿ ರೂ. 5000 ಮತ್ತು ರೂ. 3000ವರೆಗೆ ಇಟ್ಟುಕೊಳ್ಳಬೇಕು. ಅಕ್ಟೋಬರ್ 1 ರಿಂದ ಈ ಬಾಕಿ ಎರಡೂ ಪ್ರದೇಶಗಳಿಗೆ ರೂ. 3000ಕ್ಕೆ ಇಳಿಸಬಹುದು. ಒಬ್ಬರ ಖಾತೆಯಲ್ಲಿ ಕನಿಷ್ಠ ಬಾಕಿ ರೂ. 3000 ದಿಂದ ಶೇಕಡಾ 75ಕ್ಕಿಂತ ಕಡಿಮೆಯಾದರೆ, ದಂಡವು 15 + ಜಿಎಸ್ಟಿ ವಿಧಿಸಬಹುದು. ಅದು ಪ್ರಸ್ತುತ ರೂ. 80 + ಜಿಎಸ್ಟಿ.
ಆರ್ಟಿಜಿಎಸ್, ನೆಫ್ಟ್
ಎಸ್‌ಬಿಐ ಡಿಜಿಟಲ್ ಮೋಡ್‌ನಲ್ಲಿ ಆರ್‌ಟಿಜಿಎಸ್ ಮತ್ತು ನೆಫ್ಟ್ ವಹಿವಾಟುಗಳನ್ನು ಉಚಿತವಾಗಿ ಮಾಡಿದೆ. ಇದು ಜುಲೈ 1 ರಿಂದ ಜಾರಿಗೆ ಬಂದಿದೆ. ಅದೇ ಸಮಯದಲ್ಲಿ, ಎಸ್‌ಬಿಐ ಶಾಖೆಯಲ್ಲಿ ನೆಫ್ಟ್/ಆರ್‌ಟಿಜಿಎಸ್ ಮೂಲಕ ವಹಿವಾಟಿನ ವೆಚ್ಚವೂ ಕಡಿಮೆಯಾಗಿದೆ. ಅಕ್ಟೋಬರ್ 1 ರಿಂದ, ಎಸ್ಬಿಐ NEFT / RTGS ವಹಿವಾಟಿನ ಶುಲ್ಕಗಳು ಹೀಗಿರುತ್ತವೆ.
- ರೂ. 10 ಸಾವಿರ ರೂಪಾಯಿಗಳ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
- ಅಕ್ಟೋಬರ್ 1 ರಿಂದ ಎಸ್‌ಬಿಐ ಎಟಿಎಂ ಶುಲ್ಕವನ್ನು ಸಹ ಬದಲಾಯಿಸಬಹುದು. ಮೆಟ್ರೊ ನಗರಗಳಲ್ಲಿನ ಎಸ್‌ಬಿಐ ಎಟಿಎಂಗಳಲ್ಲಿ ಗ್ರಾಹಕರಿಗೆ ಗರಿಷ್ಠ 10 ಉಚಿತ ಡೆಬಿಟ್ ವಹಿವಾಟು ನಡೆಸಲು ಅವಕಾಶವಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications