For Quick Alerts
ALLOW NOTIFICATIONS  
For Daily Alerts

ದಸರಾ - ದೀಪಾವಳಿ ಬಿಗ್ ಆಫರ್! ಕಾರುಗಳ ಮೇಲೆ 4 ಲಕ್ಷದವರೆಗೆ ಡಿಸ್ಕೌಂಟ್!! ಬೈಕ್ ಮೇಲೂ ಬಂಪರ್ ಆಫರ್..

|

ದಸರಾ ಮತ್ತು ದೀಪಾವಳಿ ಮತ್ತೆ ಬಂದಿದೆ, ಉಡುಗೊರೆಗಳನ್ನು ಹೊತ್ತು ತಂದಿದೆ! ನೀವು ಹೊಸ ಕಾರನ್ನು ಮನೆಗೆ ತರಲು ಬಯಸಿದರೆ, ಕಂಪನಿಗಳು ಹಬ್ಬದ ಸಂಭ್ರಮಾಚರಣೆಗೆ ಹೆಚ್ಚಿನ ಕಾರಣಗಳನ್ನು ನೀಡಬಹುದು. ದಶಕಗಳಲ್ಲಿನ ಅತ್ಯಂತ ಕೆಟ್ಟ ಮಾರಾಟದ ಕುಸಿತದ ನಂತರ, ಭಾರತೀಯ ವಾಹನ ಉದ್ಯಮವು ಈಗ ಕಾರುಗಳ ಮಾರಾಟದಲ್ಲಿ ಪುನರುಜ್ಜೀವನಕ್ಕಾಗಿ ಹಬ್ಬದ ಋತುವನ್ನು ನೋಡುತ್ತಿದೆ. ಈಗ ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ ಮತ್ತು ಇತರ ಉತ್ಪಾದಕರಿಂದ ಖುಷಿಯ ಸುದ್ದಿ ಬಂದಿದೆ.

ಮಾರುತಿ ತನ್ನ ಸಬ್ ಕಾಂಪ್ಯಾಕ್ಟ್ ಸೆಡಾನ್ ಡಿಜೈರ್‌ಗೆ ಹೆಚ್ಚಿನ ರಿಯಾಯಿತಿ ನೀಡುತ್ತಿದೆ. ಟೊಯೋಟಾವು ಭಾರಿ ರಿಯಾಯಿತಿಯನ್ನು ಹೊಂದಿದೆ. ಒಂದೊಂದು ಕಂಪನಿಯು ಒಂದೊಂದು ತೆರದ ಆಫರ್ ನೀಡುತ್ತಿದೆ. ಯಾವ ಕಂಪನಿ ಯಾವ ಆಫರ್ ನೀಡುತ್ತಿದೆ ಬನ್ನಿ ನೋಡೋಣ..

ಮಾರುತಿ ಸುಜುಕಿ ಹಬ್ಬದ ರಿಯಾಯಿತಿ
 

ಮಾರುತಿ ಸುಜುಕಿ ಹಬ್ಬದ ರಿಯಾಯಿತಿ

ಮಾರುತಿ ಸುಜುಕಿ ಮಾರಾಟಗಾರರು ಎಂಟ್ರಿ ಲೆವೆಲ್ ಆಲ್ಟೊ 800 ರಿಂದ ವಿಟಾರಾ ಬ್ರೆಜ್ಜಾವರೆಗಿನ ಕಾರುಗಳಿಗೆ ರಿಯಾಯಿತಿ ನೀಡುತ್ತಿದೆ. ಮಾರುತಿ ಆಲ್ಟೊ 800 ಒಟ್ಟು ರೂ. 65,000 (35,000 ರೂ. ನಗದು ರಿಯಾಯಿತಿ, 25,000 ರೂ. ವಿನಿಮಯ ಬೋನಸ್, 5,000 ರೂ. ಕಾರ್ಪೊರೇಟ್ ರಿಯಾಯಿತಿ) ಹೊಂದಿದೆ. ಆಲ್ಟೊ ಕೆ 10 ಗೆ ಆಲ್ಟೊ 800 ರಂತೆಯೇ ಆಫರ್ ಸಿಗುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ (ಪೆಟ್ರೋಲ್ / ಡೀಸೆಲ್) ರೂ. 1,05,000 (60,000 ರೂ. ನಗದು, 40,000 ರೂ. ವಿನಿಮಯ, 5,000 ಕಾರ್ಪೊರೇಟ್) ರಿಯಾಯಿತಿಯನ್ನು ಹೊಂದಿದೆ.

ಮಾರುತಿ ಸುಜುಕಿ ಸೆಲೆರಿಯೊ ಒಟ್ಟು ರೂ. 65,000 (30,000 ರೂ. ನಗದು, 30,000 ರೂ. ವಿನಿಮಯ, 5,000 ರೂ) ರಿಯಾಯಿತಿ ಹೊಂದಿದೆ. ಮಾರುತಿ ಸುಜುಕಿ ವಿಟಾರಾ ಬ್ರೆಜ್ಜಾ (ಪೆಟ್ರೋಲ್ / ಡೀಸೆಲ್) ಗೆ 82,000 ರೂ. (50,000 ರೂ. ನಗದು, 25,000 ರೂ. ವಿನಿಮಯ, 5,000 ಕಾರ್ಪೊರೇಟ್) ಸಿಗುತ್ತದೆ. ಮಾರುತಿ ಸುಜುಕಿ ವ್ಯಾಗನ್ಆರ್ ರು. 50,000 (25 ಸಾವಿರ ನಗದು, 20,000 ರೂ ವಿನಿಮಯ, 5,000 ರೂ. ಕಾರ್ಪೊರೇಟ್) ರಿಯಾಯಿತಿ ಹೊಂದಿದೆ.

ಹುಂಡೈ ಕಾರ್ ದೀಪಾವಳಿ ರಿಯಾಯಿತಿ

ಹುಂಡೈ ಕಾರ್ ದೀಪಾವಳಿ ರಿಯಾಯಿತಿ

ಹೊಸದಾಗಿ ಪ್ರಾರಂಭಿಸಲಾದ ಕೋನಾ ಇವಿ ಮತ್ತು ಗ್ರ್ಯಾಂಡ್ ಐ 10 ನಿಯೋಸ್ ಹೊರತುಪಡಿಸಿ ಹ್ಯುಂಡೈ ಮಾರಾಟಗಾರರು ಹ್ಯುಂಡೈನ ಎಲ್ಲಾ ಶ್ರೇಣಿಯ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಹ್ಯುಂಡೈ ಸ್ಯಾಂಟ್ರೊಗೆ ಒಟ್ಟು 70,000 ರೂ (35,000 ರೂ. ನಗದು, 30,000 ರೂ. ವಿನಿಮಯ, 5,000 ರೂ. ಕಾರ್ಪೊರೇಟ್) ರಿಯಾಯಿತಿ ಸಿಗುತ್ತದೆ.

ಹ್ಯುಂಡೈ ಗ್ರ್ಯಾಂಡ್ ಐ 10 (ಪೆಟ್ರೋಲ್ / ಡೀಸೆಲ್) ಗೆ 1,05,000 ರೂ. (65,000 ರೂ. ನಗದು, 35,000 ರೂ. ವಿನಿಮಯ, 5,000 ಕಾರ್ಪೊರೇಟ್) ಸಿಗುತ್ತದೆ.

ಹ್ಯುಂಡೈ ಎಲಿಟ್ ಐ 20 (ಪೆಟ್ರೋಲ್ / ಡೀಸೆಲ್) ಒಟ್ಟು 75,000 ರೂ (45,000 ರೂ. ನಗದು, 25,000 ರೂ. ವಿನಿಮಯ, 5,000 ಕಾರ್ಪೊರೇಟ್) ರಿಯಾಯಿತಿ ಹೊಂದಿದೆ.

ಹ್ಯುಂಡೈ ವರ್ನಾ (ಪೆಟ್ರೋಲ್ / ಡೀಸೆಲ್) ಒಟ್ಟು ರೂ. 55,000 (25,000 ರೂ. ನಗದು, 30,000 ರೂ. ವಿನಿಮಯ) ರಿಯಾಯಿತಿ ಇದೆ. ಪ್ರಿ-ಫೇಸ್‌ಲಿಫ್ಟ್ ಹ್ಯುಂಡೈ ಎಲಾಂಟ್ರಾ ಮತ್ತು ಟಸ್ಕನ್ (ಪೆಟ್ರೋಲ್ / ಡೀಸೆಲ್) ಎರಡೂ ರೂ. 2.25 ಲಕ್ಷ (1.5 ಲಕ್ಷ ರೂ. ನಗದು ಮತ್ತು 75,000 ರೂ. ವಿನಿಮಯ) ರಿಯಾಯಿತಿ ಇದೆ. ಹ್ಯುಂಡೈ ಕ್ಸೆಂಟ್ (ಪೆಟ್ರೋಲ್ / ಡೀಸೆಲ್) ಒಂದು ಲಕ್ಷ ರೂ. (65,000 ರೂ. ನಗದು, 30,000 ರೂ. ವಿನಿಮಯ, 5,000 ರೂ. ಕಾರ್ಪೊರೇಟ್) ಡಿಸ್ಕೌಂಟ್ ಒಳಗೊಂಡಿದೆ. ಹ್ಯುಂಡೈ ಕ್ರೆಟಾ (ಪೆಟ್ರೋಲ್ / ಡೀಸೆಲ್) ಒಟ್ಟು 85,000 ರೂ (ರಿಯಾಯಿತಿ 50,000 ನಗದು ಮತ್ತು 35,000 ರೂ. ವಿನಿಮಯ) ರಿಯಾಯಿತಿ ಹೊಂದಿದೆ.

ಹೋಂಡಾ ಕಾರ್ ಅಕ್ಟೋಬರ್ ರಿಯಾಯಿತಿಗಳು
 

ಹೋಂಡಾ ಕಾರ್ ಅಕ್ಟೋಬರ್ ರಿಯಾಯಿತಿಗಳು

ಹೋಂಡಾ ಕಾರ್ ಮಾರಾಟಗಾರರು ಗರಿಷ್ಠ ರೂ. 4 ಲಕ್ಷಗಳ ರಿಯಾಯಿತಿ ನೀಡುತ್ತಿದೆ. ಹೋಂಡಾ ಡಬ್ಲ್ಯುಆರ್-ವಿ ಒಟ್ಟು ರೂ. 45,000 ರೂ. (25 ಸಾವಿರ ರೂ. ನಗದು ಮತ್ತು 20,000 ರೂ. ವಿನಿಮಯ) ರಿಯಾಯಿತಿ, ಹೋಂಡಾ ಸಿಟಿಗೆ 65,000 ರೂ. (35,000 ರೂ. ನಗದು ಮತ್ತು 30,000 ರೂ. ವಿನಿಮಯ) ರಿಯಾಯಿತಿ ಸಿಗುತ್ತದೆ. ಹೋಂಡಾ ಜಾಜ್ ರೂ. 50,000 25,000 ರೂ. ನಗದು ಮತ್ತು 25,000 ರೂ. ವಿನಿಮಯ) ರಿಯಾಯಿತಿ ಇದೆ. ಹೋಂಡಾ ಬಿಆರ್-ವಿ ಮತ್ತು ಅಮೇಜ್ ಕ್ರಮವಾಗಿ ರೂ. 85,000 (35,000 ರೂ. ನಗದು ಮತ್ತು 50,000 ರೂ. ವಿನಿಮಯ) ಮತ್ತು ರೂ. 30,000 ರಿಯಾಯಿತಿ ಘೋಷಿಸಿದೆ. ಹೋಂಡಾ ಸಿವಿಕ್ ಪೆಟ್ರೋಲ್ ರೂ. 2 ಲಕ್ಷ, ಸಿವಿಕ್ ಡೀಸೆಲ್ 2.5 ಲಕ್ಷ ರೂ. ಗರಿಷ್ಠ ರಿಯಾಯಿತಿ ಹೊಂದಿದೆ.

ಟೊಯೋಟಾ ಕಾರುಗಳ ರಿಯಾಯಿತಿ

ಟೊಯೋಟಾ ಕಾರುಗಳ ರಿಯಾಯಿತಿ

ಟೊಯೋಟಾ ಎಟಿಯೋಸ್ ರೂ. 10,000 ನಗದು ರಿಯಾಯಿತಿಯನ್ನು ಒದಗಿಸುತ್ತದೆ. ಟೊಯೋಟಾ ಇನ್ನೋವಾ ಕ್ರಿಸ್ಟಾ ಒಟ್ಟು ರೂ. 55,000 (25 ಸಾವಿರ ರೂ. ನಗದು ಮತ್ತು 30,000 ರೂ. ವಿನಿಮಯ) ರಿಯಾಯಿತಿಯನ್ನು ಹೊಂದಿದೆ. ಟೊಯೋಟಾ ಯಾರಿಸ್ ನಗದು ರಿಯಾಯಿತಿ ರೂ. 1.15 ಲಕ್ಷ, ಟೊಯೋಟಾ ಗ್ಲ್ಯಾನ್ಜಾ ರೂ. 30,000 (10,000 ರೂ. ನಗದು, 15,000 ರೂ. ವಿನಿಮಯ, 5,000 ರೂ. ಕಾರ್ಪೊರೇಟ್) ರಿಯಾಯಿತಿ ಹೊಂದಿದೆ. ಟೊಯೋಟಾ ಫಾರ್ಚೂನರ್ ಒಂದು ಲಕ್ಷ ರೂ.ಗಳ ವಿನಿಮಯ ಬೋನಸ್ ಮತ್ತು 20,000 ರೂ. ಕಾರ್ಪೊರೇಟ್ ಲಾಭ ಸೇರಿದಂತೆ 1.2 ಲಕ್ಷ ರೂ. ರಿಯಾಯಿತಿ ಒಳಗೊಂಡಿದೆ.

ಟಾಟಾ ಮೋಟಾರ್ಸ್ ಹಬ್ಬದ ರಿಯಾಯಿತಿಗಳು

ಟಾಟಾ ಮೋಟಾರ್ಸ್ ಹಬ್ಬದ ರಿಯಾಯಿತಿಗಳು

ಟಾಟಾ ಮೋಟಾರ್ಸ್ ಮಾರಾಟಗಾರರು ಪ್ರಸ್ತುತ ಟಿಯಾಗೊ, ಟೈಗರ್, ನೆಕ್ಸನ್ ಮತ್ತು ಹೆಕ್ಸಾಗಳಿಗೆ ರಿಯಾಯಿತಿಯನ್ನು ನೀಡುತ್ತಿದೆ. ಟಿಯಾಗೊ ಒಟ್ಟು ರೂ. 35,000 (ರಿಯಾಯಿತಿ 20,000 ನಗದು, 10,000 ರೂ. ವಿನಿಮಯ, 5,000 ರೂ. ಕಾರ್ಪೊರೇಟ್) ರಿಯಾಯಿತಿಯನ್ನು ಹೊಂದಿದೆ. ಟೈಗರ್ ರೂ. 65,000 (20,000 ರೂ. ನಗದು, 25,000 ರೂ. ವಿನಿಮಯ, 20,000 ಕಾರ್ಪೊರೇಟ್) ರಿಯಾಯಿತಿ ಒದಗಿಸುತ್ತದೆ. ಟಾಟಾ ನೆಕ್ಸನ್ ರೂ. 72,000(40,000 ರೂ. ನಗದು, 25,000 ರೂ. ವಿನಿಮಯ, 7,000 ರೂ. ಕಾರ್ಪೊರೇಟ್) ಡಿಸ್ಕೌಂಟ್ ಸಿಗುತ್ತದೆ.

ರೆನಾಲ್ಟ್ ಕಾರ್ ಹಬ್ಬದ ಕೊಡುಗೆಗಳು

ರೆನಾಲ್ಟ್ ಕಾರ್ ಹಬ್ಬದ ಕೊಡುಗೆಗಳು

ಕ್ವಿಡ್ ಮತ್ತು ಡಸ್ಟರ್‌ನ ಹಳೆಯ ಆವೃತ್ತಿಯ ಮೇಲೆ ರೆನಾಲ್ಟ್ ಮಾರಾಟಗಾರರು ರಿಯಾಯಿತಿಯನ್ನು ನೀಡುತ್ತಿದ್ದಾರೆ. ಹಿಂದಿನ ಜನ್ ಡಸ್ಟರ್ ಮತ್ತು ಕ್ಯಾಪ್ಟೂರ್ ಎರಡೂ ತಲಾ 1 ಲಕ್ಷ ರೂ.ಗಳ ರಿಯಾಯಿತಿಯನ್ನು ಹೊಂದಿವೆ. ಕ್ವಿಡ್ 50,000 ರೂ. (25 ಸಾವಿರ ರೂ. ನಗದು ಮತ್ತು 25,000 ರೂ ವಿನಿಮಯ) ರಿಯಾಯಿತಿ ನೀಡುತ್ತಿದೆ.

ಬಜಾಜ್ ಆಟೋ

ಬಜಾಜ್ ಆಟೋ

ಮಾರಾಟದಲ್ಲಿ ಭಾರೀ ಕುಸಿತವನ್ನು ಎದುರಿಸುತ್ತಿರುವ ದ್ವಿಚಕ್ರ ವಾಹನ ತಯಾರಕರು ಹಬ್ಬದ ಋತು ಸಮೀಪಿಸುತ್ತಿದ್ದಂತೆ ಮಾರಾಟವನ್ನು ಹೆಚ್ಚಿಸಲು ನೋಡುತ್ತಿದ್ದಾರೆ. ಅನೇಕ ದ್ವಿಚಕ್ರ ವಾಹನ ಉಪಕರಣ ತಯಾರಕರು (ಒಇಎಂಗಳು) ಹಬ್ಬದ ಋತುವಿನಲ್ಲಿ ಖರೀದಿದಾರರನ್ನು ಆಕರ್ಷಿಸಲು ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ.

ಬಜಾಜ್ ಆಟೋ

ಮೋಟಾರು ಸೈಕಲ್‌ಗಳ ಅತಿದೊಡ್ಡ ರಫ್ತುದಾರ ಮತ್ತು 150 ಸಿಸಿ ಮೋಟಾರ್‌ಸೈಕಲ್ ಮಾರಾಟ ಮಾಡುವ ಪ್ರಮುಖ ಕಂಪನಿ ಬಜಾಜ್ ಆಟೋ ಲಿಮಿಟೆಡ್ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ ಅದರ ಮೋಟಾರ್‌ಸೈಕಲ್‌ಗಳಲ್ಲಿ ಉಚಿತ ಸೇವೆಗಳು ಮತ್ತು ಖಾತರಿ ನೀಡುತ್ತದೆ.

ಬಜಾಜ್ ಮೋಟರ್ ಸೈಕಲ್‌ಗಳಲ್ಲಿ, ಕಂಪನಿಯು ರೂ. 6,000 ವರೆಗಿನ ನಗದು ರಿಯಾಯಿತಿಯನ್ನು ನೀಡುತ್ತದೆ. ಜೊತೆಗೆ 5 ಉಚಿತ ಸೇವೆಗಳು ಮತ್ತು 5 ವರ್ಷಗಳವರೆಗೆ ಉಚಿತ ವಾರಂಟಿ ನೀಡುತ್ತದೆ. ಎಂಟ್ರಿ ಲೆವೆಲ್ ಬಜಾಜ್ ಸಿಟಿ 100, ಬಜಾಜ್ ಪ್ಲಾಟಿನಾ ಮತ್ತು ಬಜಾಜ್ ಪಲ್ಸರ್ ಶ್ರೇಣಿಯ ಜೊತೆಗೆ ಬಜಾಜ್ ಡೊಮಿನಾರ್ 400 ಬಜಾಜ್ ಮೋಟಾರ್‌ಸೈಕಲ್ ಮಡೆಲ್ ಗಳಲ್ಲಿ ಆಫರ್‌ಗಳು ಲಭ್ಯವಿವೆ. ಬಜಾಜ್ ಅವೆಂಜರ್ ಶ್ರೇಣಿ, ಬಜಾಜ್ ವಿ ಮತ್ತು ಬಜಾಜ್ ಡಿಸ್ಕವರ್ ಸರಣಿ ಆಫರ್ ಲಭ್ಯವಿವೆ. ಈ ಎಲ್ಲಾ ಕೊಡುಗೆಗಳು 2019 ರ ಅಕ್ಟೋಬರ್ 31 ರವರೆಗೆ ಮಾನ್ಯವಾಗಿರುತ್ತವೆ.

ಯಮಾಹಾ ಇಂಡಿಯಾ

ಯಮಾಹಾ ಇಂಡಿಯಾ

ಹಬ್ಬದ ಋತು ಸಮೀಪಿಸುತ್ತಿದ್ದಂತೆ ಇಂಡಿಯಾ ಯಮಹಾ ದೇಶಾದ್ಯಂತ ಹಲವಾರು ಯೋಜನೆಗಳನ್ನು ಘೋಷಿಸಿದೆ. ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳೊಂದಿಗೆ ಯಮಹಾ ತನ್ನ ಸ್ಕೂಟರ್‌ಗಳಲ್ಲಿ ಹಲವಾರು ವಿಭಿನ್ನ ಯೋಜನೆಗಳನ್ನು ನೀಡುತ್ತಿದೆ. ದಕ್ಷಿಣ ಪ್ರದೇಶದ ಯಾವುದೇ ಯಮಹಾ ಸ್ಕೂಟರ್ ಖರೀದಿಸುವ ಗ್ರಾಹಕರು ಹಣಕಾಸಿನ ಮೇಲೆ ಶೇ. 0 ರಷ್ಟು ಬಡ್ಡಿಯನ್ನು ಪಡೆಯಬಹುದು. ಕಡಿಮೆ ಮೊತ್ತದ ಡೌನ್ ಪೇಮೆಂಟ್ ರೂ. 3,999 ಯೋಜನೆಯೊಂದಿಗೆ ಆಕರ್ಷಕ ಬಡ್ಡಿದರ ಶೇ 6.9 ರಷ್ಟು ಪಡೆಯಬಹುದು. ಆಫರ್ ಸಮಯದಲ್ಲಿ ಖರೀದಿಸಿದ ಯಾವುದೇ ಸ್ಕೂಟರ್‌ನಲ್ಲಿ ರೂ. 8,000 ವರೆಗೆ ಉಳಿತಾಯವಾಗಲಿದೆ ಎಂದು ಯಮಹಾ ಕಂಪನಿ ಹೇಳಿದ್ದು, ಇದು ಅಕ್ಟೋಬರ್ 31, 2019 ರವರೆಗೆ ಮಾನ್ಯವಾಗಿರುತ್ತದೆ.

ಸುಜುಕಿ

ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಐಪಿಎಲ್) ಕೂಡ ಹಬ್ಬದ ಋತುವಿನ ಕೊಡುಗೆಗಳನ್ನು ನೀಡುತ್ತಿದೆ. ಪೇಟಿಎಂ ಮೂಲಕ ಖರೀದಿಸಿದ ಯಾವುದೇ ಸುಜುಕಿ ದ್ವಿಚಕ್ರ ವಾಹನವನ್ನು, ರೂ. 8,500 ವರೆಗಿನ ಕ್ಯಾಶ್‌ಬ್ಯಾಕ್‌ನೊಂದಿಗೆ ನೀಡಲಾಗುತ್ತಿದೆ. ಸ್ಥಳದಲ್ಲೇ ಸಾಲ ಅನುಮೋದನೆ ಮತ್ತು 48 ತಿಂಗಳವರೆಗೆ ಮಾಸಿಕ ಪಾವತಿ ಯೋಜನೆಗಳೊಂದಿಗೆ ಕೇವಲ ರೂ. 777 ಕಡಿಮೆ ಡೌನ್ ಪೇಮೆಂಟ್ ಯೋಜನೆಯಿದೆ.

ಸುಜುಕಿ ಲಕ್ಕಿ ಡ್ರಾ

ಸುಜುಕಿ ಲಕ್ಕಿ ಡ್ರಾ

ಲಕ್ಕಿ ಡ್ರಾದ ಭಾಗವಾಗಿ ಯಾವುದೇ ಸುಜುಕಿ ದ್ವಿಚಕ್ರ ಮತ್ತು 5 ಗ್ರಾಂ ವರೆಗೆ 22 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು ಖರೀದಿಸುವಾಗ ಲಕ್ಕಿ ಡ್ರಾ ಆಗಿ ಮಾರುತಿ ಸುಜುಕಿ ಸ್ವಿಫ್ಟ್ ಗೆಲ್ಲುವ ಅವಕಾಶವನ್ನು ಸುಜುಕಿ ಸಂಸ್ಥೆ ನೀಡುತ್ತಿದೆ. ಸುಜುಕಿಯ ಕೊಡುಗೆಗಳು ಸೆಪ್ಟೆಂಬರ್ 30, 2019 ರವರೆಗೆ ಮಾನ್ಯವಾಗಿರುತ್ತವೆ. ಆದರೆ 2019 ರ ಅಕ್ಟೋಬರ್‌ನಲ್ಲಿಯೂ ಈ ಆಫರ್ ಗಳು ಮುಂದುವರೆಯುವ ನಿರೀಕ್ಷೆಯಿದೆ.

ಟಿವಿಎಸ್ ಮೋಟಾರ್, ಹೀರೋ, ಹೊಂಡಾ ಆಫರ್

ಟಿವಿಎಸ್ ಮೋಟಾರ್, ಹೀರೋ, ಹೊಂಡಾ ಆಫರ್

ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಹೀರೋ ಮೊಟೊಕಾರ್ಪ್, ಹಾಗೆಯೇ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಸಹ ಗ್ರಾಹಕರನ್ನು ಆಮಿಷವೊಡ್ಡಲು ಹಬ್ಬದ ಋತುವಿನ ಕೊಡುಗೆಗಳನ್ನು ಹೊರತರುವ ನಿರೀಕ್ಷೆಯಿದೆ. ಸಾಂಪ್ರದಾಯಿಕವಾಗಿ ಭಾರತೀಯರು ಹಬ್ಬದ ಸಂದರ್ಭದಲ್ಲಿ ಹೊಸ ದ್ವಿಚಕ್ರ ಮತ್ತು ಕಾರುಗಳನ್ನು ಖರೀದಿಸಲು ಮುಂದಾಗುತ್ತಾರೆ.

Read more about: money finance news
English summary

Dasara - Diwali Big Offer! Upto 4 lakhs discount on cars !

Dusshera and Diwali are upon us and if you're looking to bring home a new car, manufacturers may give you more reasons to celebrate.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more