For Quick Alerts
ALLOW NOTIFICATIONS  
For Daily Alerts

ಜಿಯೋ ಪೋನ್ ದೀಪಾವಳಿ ಆಫರ್! ಕೇವಲ ರೂ. 699ಕ್ಕೆ 4G ಪೋನ್ ಪಡೆಯಿರಿ

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಹಬ್ಬದ ಸೀಸನ್ ಗಳಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಸದಾ ಮುಂದಿರುತ್ತದೆ. ಇದೀಗ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಪೋನ್ ಆಫರ್ ಘೋಷಿಸಿದೆ.

|

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಹಬ್ಬದ ಸೀಸನ್ ಗಳಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಸದಾ ಮುಂದಿರುತ್ತದೆ. ಇದೀಗ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಪೋನ್ ಆಫರ್ ಘೋಷಿಸಿದೆ. ಇಲ್ಲಿಯವರೆಗೆ ಜಿಯೋ ಫೋನ್'​ 2G ಸೇವೆಯನ್ನು ಒದಗಿಸುತ್ತಿತ್ತು. ಆದರೆ ಈ ಪೋನ್ ನಲ್ಲಿ​ 4G ನೆಟ್​ವರ್ಕ್​ ಸೇವೆಯನ್ನು ಅಪ್​ಗ್ರೇಡ್​ ಮಾಡಲಾಗಿದೆ.

 

ಜಿಯೋ ಪೋನ್ ದೀಪಾವಳಿ 2019 ಆಫರ್

ಜಿಯೋ ಪೋನ್ ದೀಪಾವಳಿ 2019 ಆಫರ್

ರಿಲಯನ್ಸ್ ಜಿಯೋ ಇದೇ ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಪೋನ್ ದೀಪಾವಳಿ 2019 ಆಫರ್ ಅನ್ನು ಪ್ರಕಟಿಸಿದೆ. ಈ ಮಾರಾಟದಲ್ಲಿ ಜಿಯೋ ಪೋನ್ ನ್ನು ಕೇವಲ ರೂ. 699ಕ್ಕೆ ಖರೀದಿಸಬಹುದಾಗಿದೆ. ಈ ದೀಪಾವಳಿ ಆಫರ್ ಅಡಿಯಲ್ಲಿ ಜಿಯೋ ಫೋನ್ ಖರೀದಿ ಮಾಡಿದರೆ ನೀವು ರೂ. 800 ಉಳಿತಾಯ ಮಾಡಬಹುದು.

ಮೂಲ ಮುಖಬೆಲೆ ರೂ. 1500

ಮೂಲ ಮುಖಬೆಲೆ ರೂ. 1500

ಜಿಯೋ ಪೋನ್ ನಿಮಗೆಲ್ಲಾ ಗೊತ್ತಿರುವಂತೆ ಫೀಚರ್ ಫೋನ್ ಆಗಿದೆ. ಇದರ ಮುಖಬೆಲೆ ರೂ. 1500 ಆಗಿದ್ದು, ದೀಪಾವಳಿ 2019 ಆಫರ್ ಅಡಿಯಲ್ಲಿ ಜಿಯೋ ಫೋನ್ ಕೇವಲ ರೂ. 699ಕ್ಕೆ ಖರೀದಿಸುವ ಅವಕಾಶ ಕಲ್ಪಿಸಿದೆ. ಈ ಮೂಲಕ ಗ್ರಾಹಕರಿಗೆ 800 ರೂಪಾಯಿಗಳ ಡೇಟಾವನ್ನು ಉಚಿತವಾಗಿ ನೀಡಲಿದೆ.

ಹೆಚ್ಚುವರಿ ಡೇಟಾ ಲಭ್ಯ
 

ಹೆಚ್ಚುವರಿ ಡೇಟಾ ಲಭ್ಯ

ಜಿಯೋ ಪೋನ್ ಖರೀದಿಸಿದರೆ ಜಿಯೋ ಪೋನ್ ಜೊತೆಗೆ ಏಳು ತಿಂಗಳು ಕಾಲ ಪ್ರತಿ ತಿಂಗಳಿಗೆ 99 ರೂಪಾಯಿಯ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ. ರೂ. 700 ಹೆಚ್ಚುವರಿ ಡೇಟಾವನ್ನು ಪಡೆಯುವಿರಿ. ಆದರೆ ಇದು ಒಂದೇ ಬಾರಿ ಪಡೆಯಲಾಗುವುದಿಲ್ಲ. ನಿಮ್ಮ ಫೋನ್ ರೀಚಾರ್ಜ್ ಮಾಡುತ್ತಿದ್ದರೆ ಮಾತ್ರ ರೂ. 99 ಡೇಟಾ ನಿಮ್ಮ ಖಾತೆ ಸೇರುತ್ತದೆ.

ಜಿಯೋಫೋನ್ ವೈಶಿಷ್ಟತೆ

ಜಿಯೋಫೋನ್ ವೈಶಿಷ್ಟತೆ

4.4 ಇಂಚಿನ QVGA ಡಿಸ್ಪ್ಲೆ
ಎಸ್‌ಡಿ ಕಾರ್ಡ್ ಸ್ಲಾಟ್
ಬ್ಯಾಟರಿ: 2000 mAh
ಆಲ್ಫಾನ್ಯೂಮರಿಕ್ ಕೀಪ್ಯಾಡ್
4-ವೇ ನ್ಯಾವಿಗೇಷನ್
ಹೆಡ್‌ಫೋನ್ ಜ್ಯಾಕ್
ಟಾರ್ಚ್ ಲೈಟ್
ಎಫ್ಎಂ ರೇಡಿಯೋ
ಕ್ಯಾಮೆರಾ: ಹಿಂಬಾಗ ಕ್ಯಾಮೆರಾ: 2 ಎಂಪಿ; ಮುಂಭಾಗದ ಕ್ಯಾಮೆರಾ: 0.3 ಎಂಪಿ
ಮೈಕ್ರೊಫೋನ್ ಮತ್ತು ಸ್ಪೀಕರ್
ಎಸ್‌ಡಿ ಕಾರ್ಡ್ 128 ಜಿಬಿ

ಡಿಜಿಟಲ್ ಯುಗ

ಡಿಜಿಟಲ್ ಯುಗ

ಇಷ್ಟು ಕಡಿಮೆ ಬೆಲೆಗೆ ಜಿಯೋ ಪೋನ್ ಲಭ್ಯವಾಗುತ್ತಿರುವುದು ಮಾರುಕಟ್ಟೆಯಲ್ಲಿ ತೀರಾ ಕಡಿಮೆಯಾಗಿದೆ. ಕೇವಲ ರೂ. 1,500ಕ್ಕೆ ಜಿಯೋಫೋನ್ ನ್ನು 4G ಜೊತೆಗೆ ಉಚಿತ ಹೆಚ್ಚುವರಿ ಡೇಟಾವನ್ನು ಪಡೆಯಲಿದ್ದಾರೆ. ಡಿಜಿಟಿಲ್ ಇಂಡಿಯಾದತ್ತ ದಾಪುಗಾಲು ಇಡುತ್ತಿರುವ ಸಂದರ್ಭದಲ್ಲಿ ಇದೊಂದು ದೀಪಾವಳಿಯ ಭರ್ಜರಿ ಉಡುಗೊರೆಯಾಗಿದೆ.

 

 

ಜಿಯೋ ಫೈಬರ್ ಪ್ಲಾನ್

ಜಿಯೋ ಫೈಬರ್ ಪ್ಲಾನ್

ಈಗಾಗಲೇ ಕಂಪನಿಯು ಇನ್ನೂ ಅಧಿಕೃತ ಯೋಜನೆ ವಿವರಗಳನ್ನು ಬಹಿರಂಗಪಡಿಸದಿದ್ದರೂ, ರಿಲಯನ್ಸ್ ಜಿಯೋ ಯೋಜನೆಗಳು ತಿಂಗಳಿಗೆ ರೂ. 700 ಮತ್ತು ರೂ. 10,000 ವರೆಗೆ ಇರಲಿದೆ ಎಂದು ಸ್ಪಷ್ಟಪಡಿಸಿದೆ. ಗ್ರಾಹಕರು ಆಯ್ಕೆ ಮಾಡುವ ಯೋಜನೆಗೆ ಅನುಗುಣವಾಗಿ ವೇಗವು 100 Mbps ನಿಂದ 1Gbps ವರೆಗೆ ಬದಲಾಗುತ್ತದೆ.

ಜಿಯೋ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

ಜಿಯೋ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

1. ಜಿಯೋ ಫೈಬರ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

2. ಜಿಯೋ ಫೈಬರ್ ಸಂಪರ್ಕಕ್ಕಾಗಿ ನಿಮ್ಮ ವಿಳಾಸವನ್ನು ನಮೂದಿಸಿ

3. ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನಮೂದಿಸಿ

4. 'ಒಟಿಪಿ ಜನರೇಟ್' ಮೇಲೆ ಕ್ಲಿಕ್ ಮಾಡಿ

5. ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ

6. ಎಲ್ಲಾ ಮಾಹಿತಿಯನ್ನು ಪರಿಶೀಲಿಸಲು ಮತ್ತು ಇತರ ವಿವರಗಳನ್ನು ಹಂಚಿಕೊಳ್ಳಲು ರಿಲಯನ್ಸ್ ಜಿಯೋ ಕಾರ್ಯನಿರ್ವಾಹಕ ನಿಮ್ಮ ಸ್ಥಳಕ್ಕೆ ಭೇಟಿ ನೀಡುತ್ತಾರೆ. ನಿಮ್ಮ ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್, ಜಿಯೋ ಕೇರ್ ಸಂಪರ್ಕಿಸಬಹುದು. ಇಲ್ಲವೆ ಜಿಯೋ ವೆಬ್ಸೈಟ್ ಮೂಲಕ ಗ್ರಾಹಕರು ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.

Read more about: jio reliance telecom money
English summary

JioPhone Diwali offer! Jio phone at Rs. 699

Reliance Jio today announced a special one-time offer called the JioPhone Diwali 2019 Offer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X