ದೂರಸಂಪರ್ಕ ವಲಯದಲ್ಲಿ ಇದೀಗ ಟೆಲಿಕಾಂ ಕಂಪನಿಗಳದ್ದೆ ದರ್ಬಾರ್! ಪೈಪೋಟಿಗೆ ಬಿದ್ದವರಂತೆ ಒಂದರ ಮೇಲೊಂದರಂತೆ ಆಫರ್ ಗಳನ್ನು ಘೋಷಿಸುತ್ತಾ ಗ್ರಾಹಕರನ್ನು ಎಳೆಯುತ್ತಿದ್ದು, ಹಬ್ಬದ ಸೀಸನ್ ಗಳಲ್ಲಿ ಕೇಳಬೇಕೆ?
ದೂರಸಂಪರ್ಕ ವಲಯದಲ್ಲಿ ಇದೀಗ ಟೆಲಿಕಾಂ ಕಂಪನಿಗಳದ್ದೆ ದರ್ಬಾರ್! ಪೈಪೋಟಿಗೆ ಬಿದ್ದವರಂತೆ ಒಂದರ ಮೇಲೊಂದರಂತೆ ಆಫರ್ ಗಳನ್ನು ಘೋಷಿಸುತ್ತಾ ಗ್ರಾಹಕರನ್ನು ಎಳೆಯುತ್ತಿದ್ದು, ಹಬ್ಬದ ಸೀಸನ್ ಗಳಲ್ಲಿ ಕೇಳಬೇಕೆ?
ಏರ್ಟೆಲ್ ಕಂಪನಿ ತನ್ನ ಹಳೆಯ ಯೋಜನೆಗಳನ್ನು ಪರಿಷ್ಕರಿಸಿ ಹೆಚ್ಚು ಟಾಕ್ ಟೈಮ್ ಹಾಗು ಹೆಚ್ಚುವರಿ ಡೇಟಾ ನೀಡುತ್ತಾ ಬಂದಿರುವುದು ಗೊತ್ತಿದೆ. ಇದೀಗ ಇನ್ನೊಂದು ಪ್ಲಾನ್ ಅನ್ನು ಪರಿಷ್ಕರಿಸಿ ಹೆಚ್ಚಿನ ಪ್ರಯೋಜನಗಳನ್ನು ಘೋಷಿಸಿದೆ ಬನ್ನಿ ನೋಡೋಣ..
ರೂ. 65 ಸ್ಮಾರ್ಟ್ ರೀಚಾರ್ಜ್ ಪ್ಲಾನ್
ಏರ್ಟೆಲ್ ತನ್ನ ರೂ. 65 ಸ್ಮಾರ್ಟ್ ರೀಚಾರ್ಜ್ ಪ್ಲಾನ್ ನ್ನು ಪರಿಷ್ಕರಿಸಿದ್ದು, ರೂ. 65 ಕೊಂಬೊ ಪ್ರಿಪೇಡ್ ರೀಚಾರ್ಜ್ ಪ್ಯಾಕ್ ಮೂಲಕ ಹೆಚ್ಚಿನ ಟಾಕ್ ಟೈಮ್ ನೀಡುತ್ತಿದೆ. ಪರಿಷ್ಕೃತ ಯೋಜನೆ ನಿಗದಿತ ನಗರಗಳಲ್ಲಿ ರೂ. 130 ಮೊತ್ತದ ಟಾಕ್ ಟೈಮ್ ಅನ್ನು ರೂ. 65ಕ್ಕೆ ನೀಡುತ್ತಿದೆ. ಮುಂಬೈನಂತಹ ಕೆಲವು ವಲಯಗಳಲ್ಲಿ, ಕಾಂಬೊ ಯೋಜನೆ ಈಗ ಕೇವಲ ರೂ. 55 ಟಾಕ್ ಟೈಮ್ ನೀಡುತ್ತಿದೆ. ಪರಿಷ್ಕೃತ ಯೋಜನೆಯೊಂದಿಗೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಹರಿಯಾಣ ಮುಂತಾದ ವಲಯಗಳಲ್ಲಿ ರೂ. 130 ಮೊತ್ತದ ಹೆಚ್ಚಿನ ಟಾಕ್ ಟೈಮ್ ಹಾಗು ಡೇಟಾ ಪ್ರಯೋಜನಗಳನ್ನು ಸಹ ನೀಡುತ್ತದೆ.
ಡಬಲ್ ಟಾಕ್ ಟೈಮ್
ಪರಿಷ್ಕೃತ ಏರ್‌ಟೆಲ್ ರೂ. 65 ಕಾಂಬೊ ಪ್ರಿಪೇಡ್ ರೀಚಾರ್ಜ್ ಯೋಜನೆ 200MB ಯ ಡೇಟಾ ಮಿತಿಯನ್ನು ನೀಡುತ್ತದೆ. ಏರ್ಟೆಲ್ ಚಂದಾದಾರರು ಏರಿಕೆಗೊಂಡ ರೂ. 130 ಯೋಜನೆಯೊಂದಿಗೆ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ನಿಮಿಷಕ್ಕೆ 0.60 ಒದಗಿಸಲಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಪ್ಯಾಕ್ ಅನ್ನು ಕಳೆದ ವರ್ಷ ಪ್ರಾರಂಭಿಸಲಾಗಿದ್ದು, ರೂ. 65 ಪ್ಲಾನ್ ಬಿಡುಗಡೆಯ ಸಮಯದಲ್ಲಿ ಏರ್ಟೆಲ್ ಚಂದಾದಾರರು 28 ದಿನಗಳ ಮಾನ್ಯತೆಗಾಗಿ ಹಾಗೂ 200MB ಡೇಟಾ ಮಾತ್ರ ಪಡೆಯುತ್ತಿದ್ದರು. ಅಂದರೆ ಪರಿಷ್ಕರಣೆಯ ನಂತರ ಟಾಕ್ ಟೈಮ್ ಸಮಯವನ್ನು ದ್ವಿಗುಣಗೊಳಿಸಲಾಗಿದೆ.
ಡಬಲ್ ಟಾಕ್ ಟೈಮ್ ಎಲ್ಲಿ ಲಭ್ಯ
ಟೆಲಿಕಾಂ ಟಾಕ್ ಈ ಹೊಸ ಬೆಳವಣಿಗೆಯ ಬಗ್ಗೆ ಮೊದಲು ವರದಿ ಮಾಡಿತು. ಅಸ್ಸಾಂ, ಬಿಹಾರ ಮತ್ತು ಜಾರ್ಖಂಡ್, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ ಮತ್ತು ಚತ್ತಿಸಘಡ್, ಈಶಾನ್ಯ, ಒರಿಸ್ಸಾ, ರಾಜಸ್ಥಾನ, ಯುಪಿ ಪೂರ್ವ, ಯುಪಿ ಪಶ್ಚಿಮ ಮತ್ತು ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಡಬಲ್ ಟಾಕ್ ಟೈಮ್ ಪಡೆಯಲಿವೆ.
ರೂ. 55 ಟಾಕ್ ಟೈಮ್
ಡಬಲ್ ಡೇಟಾ ಪ್ರಯೋಜನವನ್ನು ಪರಿಚಯಿಸದ ವಲಯಗಳಲ್ಲಿ, ರೂ. 65 ಪ್ರಿಪೇಯ್ಡ್ ಯೋಜನೆಯು 200MB ಡೇಟಾ ಮಿತಿಯನ್ನು ನೀಡುತ್ತದೆ. ಟಾಕ್ ಟೈಮ್ ರೂ. 55 ಮೊತ್ತದೊಂದಿಗೆ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ ಟ್ಯಾರಿಪ್ 60p / min, ಮತ್ತು 28 ದಿನಗಳ ಮಾನ್ಯತೆಯೊಂದಿಗೆ ಸಿಗಲಿದೆ. ಈ ಯೋಜನೆ ಆಂಧ್ರಪ್ರದೇಶ ಮತ್ತು ತೆಲಂಗಾಣ, ಕೋಲ್ಕತಾ, ದೆಹಲಿ ಎನ್‌ಸಿಆರ್, ಚೆನ್ನೈ, ಮುಂಬೈ, ಮತ್ತು ಹೆಚ್ಚಿನ ವಲಯಗಳಲ್ಲಿ ಲಭ್ಯವಿದೆ.


Click it and Unblock the Notifications