For Quick Alerts
ALLOW NOTIFICATIONS  
For Daily Alerts

ಆಭರಣಪ್ರಿಯರೆ, ಇಂದಿನ ಚಿನ್ನ - ಬೆಳ್ಳಿ ಬೆಲೆ

ಹಬ್ಬದ ಸೀಸನ್ ಆರಂಭವಾದ ಮೇಲೆ ಆಭರಣಪ್ರಿಯರು ಚಿನ್ನಾಭರಣ ಖರೀದಿಯೆತ್ತ ಮುಖ ಮಾಡುತ್ತಾರೆ. ದಸರಾದಲ್ಲಿ ಏರಿಕೆ ಕಂಡಿದ್ದ ಚಿನ್ನಾಭರಣ ಮತ್ತೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ದೀಪಾವಳಿ ಬರುತ್ತಿದ್ದು, ಮತ್ತೆ ಏರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ

|

ಹಬ್ಬದ ಸೀಸನ್ ಆರಂಭವಾದ ಮೇಲೆ ಆಭರಣಪ್ರಿಯರು ಚಿನ್ನಾಭರಣ ಖರೀದಿಯೆತ್ತ ಮುಖ ಮಾಡುತ್ತಾರೆ. ದಸರಾದಲ್ಲಿ ಏರಿಕೆ ಕಂಡಿದ್ದ ಚಿನ್ನಾಭರಣ ಮತ್ತೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ದೀಪಾವಳಿ ಬರುತ್ತಿದ್ದು, ಮತ್ತೆ ಏರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಒಂದೇಡೆ ತೈಲ ಬೆಲೆ ಏರಿಕೆ, ಇನ್ನೊಂದೆಡೆ ಚಿನ್ನದ ಬೆಲೆ ಏರಿಳಿಕೆ ಗ್ರಾಹಕರಿಗೆ ಶಾಕ್ ನೀಡುತ್ತಲೇ ಇತ್ತು.
ದೇಶದ ಚೀನಿವಾರ ಪೇಟೆಯ ಮೇಲೆ ಜಾಗತಿಕ ಮತ್ತು ದೇಶಿ ಆರ್ಥಿಕ ಹಿಂಜರಿತ, ಯುಎಸ್ ಚೀನಾ ವಾಣಿಜ್ಯ ಸಮರ ಹಾಗು ಮಾರುಕಟ್ಟೆ ಕುಸಿತಗಳು ಪ್ರತಿಕೂಲ ಪರಿಣಾಮ ಬೀರಿ ಬಲವಾದ ಏರಿಳಿಕೆಗೆ ತಳ್ಳುತ್ತಿದೆ.
ಶ್ರಾವಣ ಮಾಸ ಬಂದಾಗ ಹಿಂದುಗಳ ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಹಬ್ಬದ ಸೀಸನ್ ನಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಗೆ ಮುಗಿ ಬೀಳುವುದು ಸಹಜ.
ಷೇರುಪೇಟೆಯಲ್ಲಿನ ಪ್ರಮುಖ ಬದಲಾವಣೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

ಚಿನ್ನ-ಬೆಳ್ಳಿ ದರ ಏರಿಳಿಕೆಗೆ ಕಾರಣ

ಚಿನ್ನ-ಬೆಳ್ಳಿ ದರ ಏರಿಳಿಕೆಗೆ ಕಾರಣ

ಷೇರುಪೇಟೆಯಲ್ಲಿನ ಏರಿಳಿತ, ಉದ್ವಿಗ್ನತೆಯ ಬದಲಾವಣೆಗೆ ಅನುಗುಣವಾಗಿ ಚಿನ್ನ-ಬೆಳ್ಳಿ ದರಗಳು ಏರಿಳಿತಕ್ಕೆ ಒಳಗಾಗುವುದು ಸಾಮಾನ್ಯ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಭಾರತೀಯರಿಗೆ ಚಿನ್ನಾಭರಣದ ಮೇಲೆ ಹೆಚ್ಚು ವ್ಯಾಮೋಹ, ಪ್ರೀತಿ! ಕೇವಲ ಭಾರತಿಯರು ಮಾತ್ರವಲ್ಲ ಜಗತ್ತಿನ ಬಹುತೇಕ ದೇಶಗಳು ಚಿನ್ನ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಷ್ಟಪಡುವವರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 35950, 24 ಕ್ಯಾರೆಟ್ ಚಿನ್ನ ರೂ. 39220, ಬೆಳ್ಳಿ ದರ: ರೂ. 48500
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 35950, 24 ಕ್ಯಾರೆಟ್ ಚಿನ್ನ ರೂ. 39220, ಬೆಳ್ಳಿ ದರ: ರೂ. 48500
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 35950, 24 ಕ್ಯಾರೆಟ್ ಚಿನ್ನ ರೂ. 39220, ಬೆಳ್ಳಿ ದರ: ರೂ. 48500
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 35950, 24 ಕ್ಯಾರೆಟ್ ಚಿನ್ನ ರೂ. 39220, ಬೆಳ್ಳಿ ದರ: ರೂ. 48500
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 35950, 24 ಕ್ಯಾರೆಟ್ ಚಿನ್ನ ರೂ. 39220, ಬೆಳ್ಳಿ ದರ: ರೂ. 48500
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 35950, 24 ಕ್ಯಾರೆಟ್ ಚಿನ್ನ ರೂ. 39220, ಬೆಳ್ಳಿ ದರ: ರೂ. 48500

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 37450, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 48500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37600, 24 ಕ್ಯಾರೆಟ್ ಚಿನ್ನ ರೂ. 38600, ಬೆಳ್ಳಿ ದರ: ರೂ. 48500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37600, 24 ಕ್ಯಾರೆಟ್ ಚಿನ್ನ ರೂ. 38600, ಬೆಳ್ಳಿ ದರ: ರೂ. 48500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37600, 24 ಕ್ಯಾರೆಟ್ ಚಿನ್ನ ರೂ. 38600, ಬೆಳ್ಳಿ ದರ: ರೂ. 48500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 37450, 24 ಕ್ಯಾರೆಟ್ ಚಿನ್ನ ರೂ. 38650, ಬೆಳ್ಳಿ ದರ: ರೂ. 48500

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36650, 24ಕ್ಯಾರೆಟ್ ಚಿನ್ನ ರೂ. 39980, ಬೆಳ್ಳಿ ದರ: ರೂ. 48500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36650, 24ಕ್ಯಾರೆಟ್ ಚಿನ್ನ ರೂ. . 39980, ಬೆಳ್ಳಿ ದರ: ರೂ. 48500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36650, 24ಕ್ಯಾರೆಟ್ ಚಿನ್ನ ರೂ. 39980, ಬೆಳ್ಳಿ ದರ: ರೂ. 48500
ನಗರ: ಕೇರಳ
22 ಕ್ಯಾರೆಟ್ ಚಿನ್ನ ರೂ. 35500, 24ಕ್ಯಾರೆಟ್ ಚಿನ್ನ ರೂ. 38720, ಬೆಳ್ಳಿ ದರ: ರೂ. 48500
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36650, 24ಕ್ಯಾರೆಟ್ ಚಿನ್ನ ರೂ. . 39980, ಬೆಳ್ಳಿ ದರ: ರೂ. 48500

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37640, 24 ಕ್ಯಾರೆಟ್ ಚಿನ್ನ: ರೂ. . 38530, ಬೆಳ್ಳಿ ಬೆಲೆ: ರೂ. 48500
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37640, ಚಿನ್ನ ರೂ. 38530, ಬೆಳ್ಳಿ ದರ: ರೂ. 48500
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 36650, 24 ಕ್ಯಾರೆಟ್ ಚಿನ್ನ ರೂ. 39980, ಬೆಳ್ಳಿ ಬೆಲೆ: ರೂ. 48500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36600, ಕ್ಯಾರೆಟ್ ಚಿನ್ನ ರೂ. 38600, ಬೆಳ್ಳಿ ಬೆಲೆ: ರೂ. 48500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37720, 24 ಕ್ಯಾರೆಟ್ ಚಿನ್ನ ರೂ. 39120, ಬೆಳ್ಳಿ ದರ: ರೂ. 48500
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 37640, 24 ಕ್ಯಾರೆಟ್ ಚಿನ್ನ ರೂ. 38530, ಬೆಳ್ಳಿ ದರ: ರೂ. 48500

ಜಗತ್ತಿನಲ್ಲಿ ಅತಿಹೆಚ್ಚು ಬಂಗಾರ ಹೊಂದಿರುವ ಟಾಪ್ 10 ದೇಶಗಳು

ಜಗತ್ತಿನಲ್ಲಿ ಅತಿಹೆಚ್ಚು ಬಂಗಾರ ಹೊಂದಿರುವ ಟಾಪ್ 10 ದೇಶಗಳು

ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಚಿನ್ನ ಸಂಗ್ರಹಿಸುವಲ್ಲಿ ಪೈಪೋಟಿ ನೀಡುತ್ತಿವೆ. ಜಗತ್ತಿನ ಪ್ರತಿಯೊಬ್ಬರೂ ಅತೀಹೆಚ್ಚು ಇಷ್ಟಪಡುವ ವಸ್ತುಗಳಲ್ಲಿ ಬಂಗಾರಕ್ಕೆ ಅಗ್ರಸ್ಥಾನ ಎಂದರೆ ತಪ್ಪಾಗಲಾರದು! ಜಾಗತಿಕ ಆರ್ಥಿಕತೆ ಕುಸಿಯುತ್ತಿದ್ದರೂ ಉದಯೋನ್ಮುಖ ಮಾರುಕಟ್ಟೆಗಳು ಹಳದಿ ಲೋಹ ಸಂಗ್ರಹಿಸುವತ್ತ ಚಿತ್ತ ಹರಿಸಿವೆ. ಭಾರತವೂ ಕೂಡ ಕಳೆದ ವರ್ಷದಿಂದ ಚಿನ್ನದ ಸಂಗ್ರಹವನ್ನು ನಿಯಮಿತವಾಗಿ ಹೆಚ್ಚಿಸುತ್ತಾ ಸಾಗಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ಪ್ರಕಾರ, ಇತ್ತೀಚಿನ ಅಂಕಿಅಂಶಗಳ ವರದಿಯ ಅನ್ವಯ ಭಾರತವು ಅತೀ ಹೆಚ್ಚು ಬಂಗಾರ ಹೊಂದಿರುವ ಅಗ್ರ ಹತ್ತು ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಒಟ್ಟು ಚಿನ್ನದ ಸಂಗ್ರಹದ ದೃಷ್ಟಿಯಿಂದ ಅಗ್ರ ಹತ್ತು ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಬನ್ನಿ ನೋಡೋಣ..

10. ನೆದರ್ಲ್ಯಾಂಡ್ಸ್
ಟನ್: 612.5
ಶೇ. ವಿದೇಶಿ ಮೀಸಲು: 61.2%
ಪ್ರಸ್ತುತ ತನ್ನ ಚಿನ್ನವನ್ನು ಸಂಗ್ರಹಿಸಿಡಲು ಡಚ್ ಸೆಂಟ್ರಲ್ ಬ್ಯಾಂಕ್ ಸೂಕ್ತ ಸ್ಥಳವನ್ನು ಕೋರಿದೆ. ಅತಿಹೆಚ್ಚು ಚಿನ್ನದ ರಾಶಿ ಹಾಕಿರುವ ದೇಶಗಳ ಪೈಕಿ ನೆದರ್ಲ್ಯಾಂಡ್ಸ್ ಜಾಗತಿಕವಾಗಿ 10ನೇ ಸ್ಥಾನದಲ್ಲಿದೆ.

 

9. ಭಾರತ

9. ಭಾರತ

ಟನ್: 618.2
ಶೇ. ವಿದೇಶಿ ಮೀಸಲು: 6.5%
ವಿಶ್ವದಲ್ಲಿ ಹೆಚ್ಚು ಚಿನ್ನ ಹೊಂದಿರುವ ದೊಡ್ಡ ಮಳಿಗೆಗಳಲ್ಲಿ ಬ್ಯಾಂಕ್ ಆಫ್ ಇಂಡಿಯ ಕೂಡ ಒಂದು ಎನ್ನುವುದು ಅಚ್ಚರಿಯೇನಲ್ಲ. 125 ಕೋಟಿ ಜನಸಂಖ್ಯೆ ಹೊಂದಿರುವ ಭಾರತಿಯರು ಚಿನ್ನಾಭರಣಪ್ರಿಯರು. ಭಾರತ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅಕ್ಟೋಬರ್ ಮತ್ತು ಡಿಸೆಂಬರ್ ಅವಧಿಯ ಹಬ್ಬ ಮತ್ತು ಮದುವೆ ಸಮಾರಂಭಗಳ ಸೀಸನ್ ನಲ್ಲಿ ಚಿನ್ನಾಭರಣಗಳಿಗೆ ಐತಿಹಾಸಿಕ ಬೇಡಿಕೆ ಇದ್ದು, ದೊಡ್ಡ ಮಟ್ಟದ ವ್ಯಾಪಾರ ನಡೆಯುತ್ತದೆ.

8. ಜಪಾನ್

8. ಜಪಾನ್

ಟನ್: 765.2
ಶೇ. ವಿದೇಶಿ ಮೀಸಲು: 2.4%
ಜಪಾನ್ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆ ಹಾಗೂ ಹಳದಿ ಲೋಹ ಹೊಂದಿರುವ 8ನೇ ಅತಿದೊಡ್ಡ ದೇಶ. ಜಪಾನ್ ಸತತವಾಗಿ ಬಂಗಾರದ ದಾಸ್ತಾನು ಹೆಚ್ಚಿಸುತ್ತಾ ಬಂದಿದೆ ಎಂದು ಐಎಂಎಫ್ ಹೇಲಿದೆ. ಜಪಾನಿನ ಸೆಂಟ್ರಲ್ ಬ್ಯಾಂಕ್ ಚಿನ್ನದ ಮಳಿಗೆಯಾಗಿದ್ದು, ವಿಶ್ವದಾದ್ಯಂತ ಚಿನ್ನದ ಬೇಡಿಕೆಯನ್ನು ಹೊಂದಿದೆ.

7. ಸ್ವಿಟ್ಜರ್ಲ್ಯಾಂಡ್

7. ಸ್ವಿಟ್ಜರ್ಲ್ಯಾಂಡ್

ಟನ್: 1040
ಶೇ. ವಿದೇಶಿ ಮೀಸಲು: 6.7%
ಸ್ವಿಟ್ಜರ್ಲ್ಯಾಂಡ್ ಚಿನ್ನದ ನಿಕ್ಷೇಪವನ್ನು ಹೊಂದಿರುವ ವಿಶ್ವದ ಏಳನೇ ದೊಡ್ಡ ದೇಶ. ಇದು ಎರಡನೇ ವಿಶ್ವ ಯುದ್ದದ ಸಂಧರ್ಭದಲ್ಲಿ ಯೂರೋಪಿನಲ್ಲಿ ಚಿನ್ನದ ವ್ಯಾಪಾರ ವಹಿವಾಟು ಮಾಡುವ ದೇಶವಾಯಿತು. ಹಾಂಗ್ ಕಾಂಗ್ ಮತ್ತು ಚೀನಾ ದೇಶಗಳ ನಡುವೆ ಹೆಚ್ಚು ಚಿನ್ನದ ವ್ಯಾಪಾರ ಹೊಂದಿದೆ.

6. ಚೀನಾ ಟನ್: 1936.5

6. ಚೀನಾ ಟನ್: 1936.5

ಶೇ. ವಿದೇಶಿ ಮೀಸಲು: 2.5%
ಚೀನಾದ ಆರ್ಥಿಕತೆ ಹಾಗು ಯುಎಸ್-ಚೀನಾ ವಾಣಿಜ್ಯ ಸಮರದ ಹಿನ್ನೆಲೆಯಲ್ಲಿ ಹಿಂದಿನ ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ. ಶೇಕಡಾ ವಿದೇಶಿ ಮೀಸಲು ಕೇವಲ 2.5ರಷ್ಟಿದ್ದು, ಮುಂದಿನ ದಿನಗಳಲ್ಲಿ ಮೀಸಲು ಪ್ರಮಾಣ ಹೆಚ್ಚಿಸುವ ನಿರೀಕ್ಷೆ ಇದೆ.

5. ರಷ್ಯಾ

5. ರಷ್ಯಾ

ಟನ್: 2219.2
ಶೇ. ವಿದೇಶಿ ಮೀಸಲು: 19%
ರಷ್ಯಾ ಕಳೆದ ಹಲವಾರು ವರ್ಷಗಳಿಂದ ಚಿನ್ನ ರಾಶಿ ಹಾಕುವ ಕಾರ್ಯದಲ್ಲಿ ತೊಡಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಇದರ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. 2015ರಲ್ಲಿ ಇದು ಉನ್ನತ ಖರೀದಿದಾರ ದೇಶವಾಗಿದ್ದು, ಚಿನ್ನದ ವಹಿವಾಟಿನಲ್ಲಿ ತನ್ನದೇ ಛಾಪನ್ನು ಹೊಂದಿದೆ.

4. ಫ್ರಾನ್ಸ್

4. ಫ್ರಾನ್ಸ್

ಟನ್: 2436.1
ಶೇ. ವಿದೇಶಿ ಮೀಸಲು: 62.9%
ಫ್ರಾನ್ಸಿನ ಸೆಂಟ್ರಲ್ ಬ್ಯಾಂಕ್ ಕಳೆದ ಹಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ತನ್ನ ಚಿನ್ನವನ್ನು ಮಾರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಮಾರಾಟ ತಗ್ಗಿಸಿ ಮೀಸಲು ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ.

3. ಇಟಲಿ

3. ಇಟಲಿ

ಟನ್: 2451.8
ಶೇ. ವಿದೇಶಿ ಮೀಸಲು: 66.9%
ಇಟಲಿ ಕಳೆದ ಕೆಲ ವರ್ಷಗಳಿಂದ ತನ್ನ ಮೀಸಲು ಗಾತ್ರ ಕಾಪಾಡಿಕೊಂಡಿದೆ. ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಮಾರಿಯೋ ದ್ರಾಘಿ ಅವರಿಂದ ಬೆಂಬಲ ಹೊಂದಿದೆ.

2. ಜರ್ಮನಿ

2. ಜರ್ಮನಿ

ಟನ್: 3366.8
ಶೇ. ವಿದೇಶಿ ಮೀಸಲು: 70.6%
ಜರ್ಮನಿ ವಿದೇಶಿ ಸಂಗ್ರಹಣಾ ಕೇಂದ್ರಗಳಿಂದ ಹಾಗೂ ನ್ಯೂಯಾರ್ಕ್ ಮತ್ತು ಪ್ಯಾರಿಸ್ ಸೇರಿದಂತೆ ತನ್ನ ಬಂಗಾರವನ್ನು ಸ್ವದೇಶಕ್ಕೆ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದೆ.

1. ಅಮೆರಿಕ

1. ಅಮೆರಿಕ

ಟನ್: 8133.5
ಶೇ. ವಿದೇಶಿ ಮೀಸಲು: 74.9%
ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕ ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಜಗತ್ತಿನ ಅತಿದೊಡ್ಡ ಆರ್ಥಿಕತೆ ಹಾಗೂ ಅತಿಹೆಚ್ಚು ಬಂಗಾರ ಸಂಗ್ರಾಹ ಹೊಂದಿರುವ ದೇಶ. 8133.5 ಟನ್ ನೊಂದಿಗೆ ಶೇಕಡಾ ವಿದೇಶಿ ಮೀಸಲು 74.9ರಷ್ಟು ಹೊಂದಿದೆ.

Read more about: gold finance news silver money
English summary

Gold and silver price today

ಹಬ್ಬದ ಸೀಸನ್ ಆರಂಭವಾದ ಮೇಲೆ ಆಭರಣಪ್ರಿಯರು ಚಿನ್ನಾಭರಣ ಖರೀದಿಯೆತ್ತ ಮುಖ ಮಾಡುತ್ತಾರೆ. ದಸರಾದಲ್ಲಿ ಏರಿಕೆ ಕಂಡಿದ್ದ ಚಿನ್ನಾಭರಣ ಮತ್ತೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ದೀಪಾವಳಿ ಬರುತ್ತಿದ್ದು, ಮತ್ತೆ ಏರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.ಒಂದೇಡೆ ತೈಲ ಬೆಲೆ ಏರಿಕೆ, ಇನ್ನೊಂದೆಡೆ ಚಿನ್ನದ ಬೆಲೆ ಏರಿಳಿಕೆ ಗ್ರಾಹಕರಿಗೆ ಶಾಕ್ ನೀಡುತ್ತಲೇ ಇತ್ತು. ದೇಶದ ಚೀನಿವಾರ ಪೇಟೆಯ ಮೇಲೆ ಜಾಗತಿಕ ಮತ್ತು ದೇಶಿ ಆರ್ಥಿಕ ಹಿಂಜರಿತ, ಯುಎಸ್ ಚೀನಾ ವಾಣಿಜ್ಯ ಸಮರ ಹಾಗು ಮಾರುಕಟ್ಟೆ ಕುಸಿತಗಳು ಪ್ರತಿಕೂಲ ಪರಿಣಾಮ ಬೀರಿ ಬಲವಾದ ಏರಿಳಿಕೆಗೆ ತಳ್ಳುತ್ತಿದೆ.ಶ್ರಾವಣ ಮಾಸ ಬಂದಾಗ ಹಿಂದುಗಳ ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಹಬ್ಬದ ಸೀಸನ್ ನಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಗೆ ಮುಗಿ ಬೀಳುವುದು ಸಹಜ. ಷೇರುಪೇಟೆಯಲ್ಲಿನ ಪ್ರಮುಖ ಬದಲಾವಣೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X