For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಎಟಿಎಂ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಂಡಿದ್ದಿರಾ? ಪ್ರತಿದಿನ 2 ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡೋದು ಹೇಗೆ?

ಎಟಿಎಂಗಳಿಂದ ಆಗಾಗ್ಗೆ ಹಣವನ್ನು ಹಿಂತೆಗೆದುಕೊಳ್ಳುವವರಾಗಿದ್ದರೆ ಮತ್ತು ಶುಲ್ಕ ಹೆಚ್ಚಳದ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಚಿಂತಿಸಬೇಡಿ! ನಿಮಗಾಗಿ ಒಳ್ಳೆಯ ಸುದ್ದಿ ಇಲ್ಲಿದೆ.

|

ಅಕ್ಟೋಬರ್ ಆರಂಭದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಟಿಎಂ ವಿತ್ ಡ್ರಾ, ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿರುವುದು, ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ವಹಿವಾಟು ಇತ್ಯಾದಿಗಳಿಗೆ ವಿಧಿಸಲಾಗುವ ಬ್ಯಾಂಕ್ ಶುಲ್ಕಗಳ ಪರಿಷ್ಕೃತ ಪಟ್ಟಿಯನ್ನು ಹೊರ ತಂದಿದೆ.
ಎಸ್ಬಿಐ ಎಟಿಎಂನಲ್ಲಿ ಐದು ಬಾರಿ, ಇತರೆ ಎಟಿಎಂಗಳಲ್ಲಿ ಎಂಟು ಬಾರಿ ಉಚಿತವಾಗಿ ಹಣವನ್ನು ತೆಗೆಯಲು ಅವಕಾಶವಿದ್ದು, ನಂತರದ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಶುಲ್ಕದಿಂದ ತಪ್ಪಿಸಿಕೊಳ್ಳಲು ಅವಕಾಶವಿದ್ದು, ಎಟಿಎಂನಿಂದ ದಿನಕ್ಕೆ ಎರಡು ಬಾರಿ ಉಚಿತವಾಗಿ ಹಣ ತೆಗೆಯಬಹುದು.

 

ಯೋನೊ ಆಪ್

ಯೋನೊ ಆಪ್

ಎಸ್ಬಿಐ ಗ್ರಾಹಕರು ಯೋನೋ ಆಪ್ ಮೂಲಕ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. ಇದು ಕಾರ್ಡ್‌ ಲೆಸ್ ಟ್ರಾನ್ಸಾಕ್ಷನ್ ಆಗಿದೆ. ಡೆಬಿಟ್ ಕಾರ್ಡ್ ಅಗತ್ಯವಿಲ್ಲ, ಮೊಬೈಲ್ ಇದ್ದರೆ ಸಾಕು. ಆದರೆ ಎಸ್ಬಿಐ ಎಟಿಎಂ ಬಳಸಬೇಕಾಗುತ್ತದೆ. ಇಂಟರ್ನೆಟ್ ಲಾಗಿನ್ ಹಾಗೂ ಪಾಸ್ವರ್ಡ್ ಮೂಲಕ ಯೋನೋ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ವ್ಯವಹಾರ ನಡೆಸಬಹುದು.

ಎಂ ಪಿನ್ ಸೆಟ್ ಮಾಡಿ

ಎಂ ಪಿನ್ ಸೆಟ್ ಮಾಡಿ

ಯೋನೊ ಆಪ್ ಅನ್ನು ಡೌನ್ಲೋಡ್ ಮಾಡಿದ ನಂತರ ಆರು ಸಂಖ್ಯೆಯ ಎಂ ಪಿನ್ ಅನ್ನು ಸೆಟ್ ಮಾಡಿಕೊಳ್ಳಬೇಕು. ಲಾಗಿನ್ ಆದ ಬಳಿಕ ಸ್ಕ್ರೋಲ್ ಡೌನ್ ಮಾಡಿದಾಗ ಕ್ವಿಕ್ ಲಿಂಕ್ಸ್ ಸೆಕ್ಷನ್ ಲಭ್ಯವಾಗುತ್ತದೆ. ಅಲ್ಲಿ ಸಿಗುವ ಯೋನೋ ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಎಟಿಎಂ ಆಪ್ಷನ್ ನಲ್ಲೂ ಕ್ಲಿಕ್ ಮಾಡಿ ಮೊತ್ತವನ್ನು ನಮೂದಿಸಬೇಕು.

ವಿತ್ ಡ್ರಾವಲ್
 

ವಿತ್ ಡ್ರಾವಲ್

ಎಂ ಪಿನ್ ಸೆಟ್ ಮಾಡಿದ ನಂತರ ನಗದು ವಿತ್ ಡ್ರಾವಲ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಕ್ಯಾಶ್ ಪಿನ್ ಸೆಟ್ ಮಾಡಿ ಆರು ಡಿಜಿಟ್ ರೆಫರೆನ್ಸ್ ನಂಬರ್ ಲಭ್ಯವಾಗುತ್ತದೆ. ಆಗ ಎಟಿಎಂನಲ್ಲಿ ಇರುವ ಕಾರ್ಡು ರಹಿತ ಟ್ರಾನ್ಸಾಕ್ಷನ್ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ಯೋನೋ ಕ್ಯಾಶ್ ಆಯ್ಕೆ ಮಾಡಬೇಕು. ಆಗ ಸೆಟ್ ಮಾಡಿರುವ ಪಿನ್ ಸಂಖ್ಯೆ ಮತ್ತು ಅಲ್ಲಿಂದ ಬಂದಿರುವ ರೆಫರೆನ್ಸ್ ಸಂಖ್ಯೆಯನ್ನು ಒದಗಿಸಿದರೆ ಹಣ ಬರುತ್ತದೆ.

Read more about: money atm savings sbi banking
English summary

Worried about SBI new ATM charges? Here's how you can withdraw cash twice a day for free

If you are someone who withdraws money from ATMs often and are worried about the hike in charges. You can still withdraw money from your SBI ATM, as many times as you want, for free.
Story first published: Thursday, October 10, 2019, 15:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X