For Quick Alerts
ALLOW NOTIFICATIONS  
For Daily Alerts

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್! ಆನ್ಲೈನ್ ರಿಸರ್ವೇಶನ್ ಚಾರ್ಟ್ ಲಭ್ಯ

|

ನೀವು ರೈಲುಗಳಲ್ಲಿ ಆಗಾಗ್ಗೆ ಪ್ರಯಾಣಿಸುತ್ತೀರಾ? ಹಾಗಿದ್ದರೆ ನಿಮಗೊಂದು ಸಿಹಿಸುದ್ದಿ ಇದೆ. ರೈಲ್ವೆ ಇಲಾಖೆ ಎಲ್ಲಾ ರೈಲುಗಳಿಗೆ ರಿಸರ್ವೆಶನ್ ಸೀಟುಗಳನ್ನು ಸಾರ್ವಜನಿಕಗೊಳಿಸಿದ್ದರಿಂದ ಖಾಲಿ ಇರುವ ಬರ್ತಗಳ ಲಭ್ಯತೆಯನ್ನು ತಿಳಿಯಲು ಟಿಟಿ ಬಳಿ ಓಡಬೇಕಾಗಿಲ್ಲ!

 

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್! ಆನ್ಲೈನ್ ರಿಸರ್ವೇಶನ್ ಚಾರ್ಟ್ ಲಭ್

ಇಲ್ಲಿವರೆಗೆ ರೈಲಿನಲ್ಲಿ ಪ್ರಯಾಣಿಸುವಾಗ ರಿಸರ್ವೇಶನ್ ಸೀಟುಗಳು ಲಭ್ಯ ಇವೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇರುತ್ತಿರಲಿಲ್ಲ. ಆದರೆ ಇನ್ನುಮುಂದೆ ರಿಸರ್ವೇಷನ್ ಚಾರ್ಟನ್ನು ಐಆರ್ಸಿಟಿಸಿ ವೆಬ್‌ಸೈಟ್ ನಲ್ಲಿ ಕಾಣಬಹುದಾಗಿದೆ.
ಕೇಂದ್ರ ಸರ್ಕಾರವು ರೈಲ್ವೇ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಲುವಾಗಿ ನೂತನ ಕ್ರಮ ಜಾರಿಗೆ ತರುತ್ತಿದೆ. ಇದಕ್ಕಾಗಿ ಪ್ರಯಾಣಿಕರು ಐಆರ್ಸಿಟಿಸಿ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ಚಾರ್ಟ್ಸ್/ ವೇಕೆನ್ಸಿ ಎಂಬ ಆಪ್ಷನ್ ಇರುತ್ತದೆ. ಇದನ್ನು ಕ್ಲಿಕ್ ಮಾಡಿದರೆ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅಲ್ಲಿ ರೇಲ್ವೆ ಸಂಖ್ಯೆ, ಹೊರಡುವ ದಿನಾಂಕ ಹಾಗೂ ಎಲ್ಲಿಂದ ಹೊರಡುತ್ತದೆ ಎಂಬ ಮಾಹಿತಿಯನ್ನು ತುಂಬಬೇಕು. ತದನಂತರ ರಿಸರ್ವೇಷನ್ ಚಾರ್ಟ್ ಕಾಣುತ್ತದೆ. ಬಳಿಕ ನೀವು ನಿಖರ ಬರ್ತ್ ಅನ್ನು ಕ್ಲಿಕ್ ಮಾಡಿದಾಗ ಆ ವ್ಯಕ್ತಿ ಪ್ರಯಾಣಿಸುತ್ತಿದ್ದಾರೋ ಅಥವಾ ಇಲ್ಲವೋ ಎಂಬುದು ತಿಳಿಯುತ್ತದೆ. ಆಗ ನಿಮಗೆ ಆಯ್ಕೆ ಸುಲಭವಾಗುತ್ತದೆ.

Read more about: money finance news
English summary

Good news for train passengers! Online Reservation Chart Available

Do you travel frequently on trains? From now on, you don't have to run after the TTE to know the availability of vacant berths as Indian Railways has made the reservation charts public for all trains!
Story first published: Friday, October 11, 2019, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X