ಡಿಶ್ ಟಿವಿ ಮಸ್ತ್ ಸಸ್ತಾ ಆಫರ್! 250ಕ್ಕೂ ಹೆಚ್ಚು ಚಾನೆಲ್ ಗಳು ಲಭ್ಯ

ಹಬ್ಬದ ಋತುವಿನ ಭರಾಟೆಯಲ್ಲಿ ಪ್ರಮುಖ ಕಂಪನಿಗಳು ತಮ್ಮ ಗ್ರಾಹಕರನ್ನು ಸೆಳೆಯಲು ಮುಂದಾಗಿ, ಅನೇಕ ಫರ್ ಗಳನ್ನು ಘೋಷಿಸುತ್ತವೆ. ರಿಯಾಯಿತಿ ದರದ ವಿಶೇಷ ಕೊಡುಗೆಗಳನ್ನು ನೀಡುತ್ತವೆ. ಇದಕ್ಕೆ ಡಿಶ್ ಟಿವಿ ಹೊಸ ಸೇರ್ಪಡೆ.

ಹಬ್ಬದ ಋತುವಿನ ಭರಾಟೆಯಲ್ಲಿ ಪ್ರಮುಖ ಕಂಪನಿಗಳು ತಮ್ಮ ಗ್ರಾಹಕರನ್ನು ಸೆಳೆಯಲು ಮುಂದಾಗಿ, ಅನೇಕ ಫರ್ ಗಳನ್ನು ಘೋಷಿಸುತ್ತವೆ. ರಿಯಾಯಿತಿ ದರದ ವಿಶೇಷ ಕೊಡುಗೆಗಳನ್ನು ನೀಡುತ್ತವೆ. ಇದಕ್ಕೆ ಡಿಶ್ ಟಿವಿ ಹೊಸ ಸೇರ್ಪಡೆ. ದೀಪಾವಳಿ ಸಂದರ್ಭದಲ್ಲಿ ಡಿಶ್ ಟಿವಿ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಚಾನೆಲ್ ನೀಡಲು ಮುಂದಾಗಿದೆ.

250ಕ್ಕೂ ಹೆಚ್ಚು ಚಾನೆಲ್

250ಕ್ಕೂ ಹೆಚ್ಚು ಚಾನೆಲ್

ಡಿಶ್ ಕಂಪನಿಯ ಆಫರ್ ಪ್ರಕಾರ ತಿಂಗಳಿಗೆ ರೂ. 219 ರಿಚಾರ್ಜ್ ಮಾಡಿದರೆ 250ಕ್ಕೂ ಹೆಚ್ಚು ಚಾನೆಲ್ ವೀಕ್ಷಣೆ ಮಾಡುವ ಅವಕಾಶ ಸಿಗಲಿದೆ. ಈ ಕೊಡುಗೆಯ ಲಾಭಕ್ಕಾಗಿ ಗ್ರಾಹಕರು 2 ವರ್ಷಗಳವರೆಗಿನ ಚಂದಾದಾರಿಕೆ ಪಡೆಯಬೇಕು.

ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಎಸ್‌ಡಿ ಪ್ಯಾಕ್‌

ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಎಸ್‌ಡಿ ಪ್ಯಾಕ್‌

ಡಿಶ್ ಟಿವಿ ಹೇಳಿರುವಂತೆ, ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಎಸ್‌ಡಿ ಪ್ಯಾಕ್‌ನ 24 ತಿಂಗಳ ಶುಲ್ಕ ರೂ. 5,256 ಆಗಿರಲಿದೆ. ಅಂದರೆ ಒಂದು ವರ್ಷಕ್ಕೆ ರೂ. 2,628 ಆಗಲಿದೆ. ಒಂದು ತಿಂಗಳಿಗೆ ರೂ. 219 ಆಗಲಿದೆ.

ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಎಚ್‌ಡಿ ಪ್ಕಾಕ್

ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಎಚ್‌ಡಿ ಪ್ಕಾಕ್

ಡಿಶ್ ಟಿವಿ ಪ್ರಸ್ತುತ ಪಡಿಸುವ 24 ತಿಂಗಳ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಎಚ್‌ಡಿ ಬೆಲೆ ರೂ. 7,176. ಪ್ರತಿ ತಿಂಗಳಿಗೆ ರೂ. 299 ಲಭ್ಯವಾಗಲಿದೆ. ಫ್ಯಾಮಿಲಿ ಇಂಗ್ಲಿಷ್ ಎಸ್‌ಡಿ ಪ್ಯಾಕ್‌ನ ಬೆಲೆ 24 ತಿಂಗಳ ಅವಧಿಗೆ ರೂ. 7,800 ಆಗಲಿದೆ. ತಿಂಗಳಿಗೆ ರೂ. 325 ಪಾವತಿ ಮಾಡಬೇಕಾಗುತ್ತದೆ.

ಡಿಶ್ ಟಿವಿ ದೀರ್ಘಾವಧಿ ಯೋಜನೆ

ಡಿಶ್ ಟಿವಿ ದೀರ್ಘಾವಧಿ ಯೋಜನೆ

ಇನ್ನೊಂದೆಡೆ ದೀರ್ಘಕಾಲೀನ ಪ್ಯಾಕ್ ಅಡಿಯಲ್ಲಿ, ಟಾಟಾ ಸ್ಕೈ, ಡಿಶ್ ಟಿವಿ ಮತ್ತು ಡಿ 2 ಹೆಚ್ ತಮ್ಮ ಚಂದಾದಾರರಿಗೆ ಉಚಿತ ಸೇವೆಯನ್ನು ಒದಗಿಸುತ್ತಿದ್ದು, ದೀರ್ಘಾವಧಿಯ 120 ದಿನಗಳ ಉಚಿತ ಚಂದಾದಾರಿಕೆ ಒಳಗೊಂಡಿದೆ.

ಡಿಶ್ ಟಿವಿ ದೀರ್ಘಾವಧಿ ಯೋಜನೆ
ಡಿಶ್ ಟಿವಿಯ ದೀರ್ಘಾವಧಿಯ ಯೋಜನೆಯು ಡಿ2ಎಚ್‌ನಂತೆಯೇ ಇರುತ್ತದೆ. ಇದು ಕೂಡ ಹೆಚ್ಚುವರಿ ಉಚಿತ ಸೇವೆಗಳನ್ನು ನೀಡುತ್ತಿದೆ. 3 ತಿಂಗಳ ಚಂದಾದಾರಿಕೆಯನ್ನು ಹೊಂದಿರುವ ಡಿಶ್ ಟಿವಿ ಚಂದಾದಾರರು 7 ದಿನಗಳ ಉಚಿತ ಸೇವೆ ಪಡೆಯುತ್ತಾರೆ. 6 ತಿಂಗಳ ಚಂದಾದಾರಿಕೆಗೆ 15 ಹೆಚ್ಚುವರಿ ದಿನಗಳ ಸೇವೆ, 11 ತಿಂಗಳುಗಳ ಚಂದಾದರಿಕೆಗೆ 30 ದಿನಗಳ ಹೆಚ್ಚುವರಿ ಸೇವೆಯನ್ನು ಪಡೆಯುತ್ತಾರೆ.

 

ಟಾಟಾ ಸ್ಕೈ ಕ್ಯಾಶ್‌ಬ್ಯಾಕ್ ಆಫರ್ ಟಾಟಾ ಸ್ಕೈ

ಟಾಟಾ ಸ್ಕೈ ಕ್ಯಾಶ್‌ಬ್ಯಾಕ್ ಆಫರ್ ಟಾಟಾ ಸ್ಕೈ

ತನ್ನ ಚಂದಾದಾರರಿಗೆ ಒಂದು ವಿಶಿಷ್ಟವಾದ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಘೋಷಿಸಿದೆ. ಇದು ದೀರ್ಘಾವಧಿಯ ಕೊಡುಗೆಯಾಗಿದ್ದು, ಕ್ಯಾಶ್‌ಬ್ಯಾಕ್ ಕೊಡುಗೆಗೆ ಚಂದಾದಾರರು 12 ತಿಂಗಳ ಚಂದಾದಾರಿಕೆ ರೀಚಾರ್ಜ್ ಮಾಡಬೇಕಾಗುತ್ತದೆ. ನಂತರ ಚಂದಾದಾರರು ಒಂದು ತಿಂಗಳ ಉಚಿತ ಸೇವೆಯ ರೂಪದಲ್ಲಿ ಕ್ಯಾಶ್‌ಬ್ಯಾಕ್ ಅನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಟಾಟಾ ಸ್ಕೈ ಚಂದಾದಾರರು 12 ತಿಂಗಳ ರೀಚಾರ್ಜ್ ಮಾಡಿದರೆ ಹೆಚ್ಚುವರಿ ತಿಂಗಳ ಸೇವೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಕ್ಯಾಶ್‌ಬ್ಯಾಕ್ ಕೊಡುಗೆ ಅಡಿಯಲ್ಲಿ, ಚಂದಾದಾರರು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಕೇವಲ 48 ಗಂಟೆಗಳ ಒಳಗೆ ಸ್ವೀಕರಿಸುತ್ತಾರೆ.

ಡಿ2ಎಚ್ ದೀರ್ಘಾವಧಿ ಯೋಜ

ಡಿ2ಎಚ್ ದೀರ್ಘಾವಧಿ ಯೋಜ

ಎಲ್ಲಾ ಡಿಟಿಎಚ್ ಆಪರೇಟರ್‌ಗಳಲ್ಲಿ, ಡಿ2ಎಚ್ ಅತ್ಯಂತ ವಿಸ್ತಾರವಾದ ಮತ್ತು ಆಕರ್ಷಕ ದೀರ್ಘಕಾಲೀನ ಯೋಜನೆಗಳನ್ನು ಒಳಗೊಂಡಿದೆ. 3 ತಿಂಗಳ ಚಂದಾದಾರಿಕೆಯನ್ನು ಹೊಂದಿರುವ ಚಂದಾದಾರರು 7 ದಿನಗಳ ಉಚಿತ ಚಂದಾದಾರಿಕೆಯನ್ನು ಆನಂದಿಸುತ್ತಾರೆ. 6 ತಿಂಗಳ ಚಂದಾದಾರಿಕೆಯೊಂದಿಗೆ ಅವರು ಹೆಚ್ಚುವರಿ 15 ದಿನಗಳ ಚಂದಾದಾರಿಕೆಯನ್ನು ಆನಂದಿಸುತ್ತಾರೆ. 11 ತಿಂಗಳ ಚಂದಾದಾರಿಕೆಗೆ 30 ದಿನಗಳ ಹೆಚ್ಚುವರಿ ಉಚಿತ ಸೇವೆ ಪಡೆಯುತ್ತಾರೆ. ಚಂದಾದಾರರು 22 ತಿಂಗಳ ಚಂದಾದಾರಿಕೆಗೆ 60 ದಿನಗಳ ಹೆಚ್ಚುವರಿ ಸೇವೆಯನ್ನು ಪಡೆಯುತ್ತಾರೆ. 33 ತಿಂಗಳ ಯೋಜನೆಗೆ 90 ದಿನಗಳ ಉಚಿತ ಸೇವೆಹಾಗು 44 ತಿಂಗಳ ಯೋಜನೆಗೆ 120 ದಿನಗಳ ಹೆಚ್ಚುವರಿ ಸೇವೆಯನ್ನುಯನ್ನು ಪಡೆಯುತ್ತಾರೆ.

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+