For Quick Alerts
ALLOW NOTIFICATIONS  
For Daily Alerts

ವೋಡಾಫೋನ್-ಐಡಿಯಾ ಧಮಾಕಾ! 150 ಜಿಬಿ ಹೆಚ್ಚುವರಿ ಉಚಿತ ಡೇಟಾ

ದೇಶದ ಟೆಲಿಕಾಂ ರಂಗದಲ್ಲಿ ಜಿಯೋ ಪ್ರವೇಶಾತಿ ನಂತರ ದರ ಸಮರದ ರಂಗೇರಿದೆ! ಒಂದಕ್ಕಿಂತ ಒಂದು ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಮುಗಿಬಿದ್ದಿವೆ.

|

ದೇಶದ ಟೆಲಿಕಾಂ ರಂಗದಲ್ಲಿ ಜಿಯೋ ಪ್ರವೇಶಾತಿ ನಂತರ ದರ ಸಮರದ ರಂಗೇರಿದೆ! ಒಂದಕ್ಕಿಂತ ಒಂದು ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಮುಗಿಬಿದ್ದಿವೆ. ರಿಲಯನ್ಸ್ ಜಿಯೋ ಕಳೆದ ವಾರ ಜಿಯೋಹೊರತುಪಡಿಸಿ ಇತರೆ ನೆಟ್ವರ್ಕ್ ಕರೆಗಳಿಗೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದು ಜಿಯೋ ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ.

 

ವೋಡಾಫೊನ್ ಪ್ಲಾನ್

ವೋಡಾಫೊನ್ ಪ್ಲಾನ್

ಜಿಯೋ ವಿಧಿಸಿರುವ ಶುಲ್ಕವನ್ನು ವೋಡಾಫೋನ್ ಐಡಿಯಾ ಮತ್ತು ಏರ್ಟೆಲ್ ಟ್ರೋಲ್ ಮಾಡುತ್ತಿದ್ದು, ಇತರ ನೆಟ್ವರ್ಕ್ ಗಳಿಗೆ ಕರೆ ಶುಲ್ಕ ವಿಧಿಸುವುದಿಲ್ಲ ಎನ್ನುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಜೊತೆಗೆ ವೋಡಾಫೋನ್ ಅಸ್ತಿತ್ವದಲ್ಲಿರುವ ತನ್ನ 399 ರೂಪಾಯಿ ಪೋಸ್ಟ್ ಪೇಯ್ಡ್ ಯೋಜನೆಗೆ ಹೆಚ್ಚಿನ ಡೇಟಾ ನೀಡುವುದಾಗಿ ಹೇಳಿದೆ. ಇದು 150 ಜಿಬಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ. ಈ ಯೋಜನೆ 6 ತಿಂಗಳ ವ್ಯಾಲಿಡಿಟಿ ಹೊಂದಿದೆ. ರೂ. 399 ಗ್ರಾಹಕರಿಗೆ ತಿಂಗಳಿಗೆ 40 ಜಿಬಿ ಡೇಟಾ ನೀಡಲಿದೆ. ಅನಿಯಮಿತ ಕರೆ ಹಾಗೂ ರೋಮಿಂಗ್ ಸೌಲಭ್ಯ ಸಿಗಲಿದೆ.

ಭರಪೂರ ಲಾಭ

ಭರಪೂರ ಲಾಭ

ವೊಡಾಫೋನ್ ಯೋಜನೆಯು 200 ಜಿಬಿ ಡೇಟಾ ರೋಲ್‌ಓವರ್ ಮಿತಿಯನ್ನು ಹೊಂದಿದೆ. ಅಂದರೆ ಡೇಟಾವನ್ನು ಬಳಸದಿದ್ದರೆ ಮುಂದಿನ ತಿಂಗಳ ಡೇಟಾಗೆ ವರ್ಗಾಯಿಸಲಾಗುತ್ತದೆ. ಈ ಪ್ಯಾಕ್‌ನೊಂದಿಗೆ ವೊಡಾಫೋನ್ ಪ್ಲೇ, ಜಿ 5 ಚಂದಾದಾರಿಕೆ ಸಹ ಲಭ್ಯವಿದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯಡಿ ಗ್ರಾಹಕರಿಗೆ ರೂ. 2,497 ಲಾಭ ಸಿಗುತ್ತದೆ ಎಂದು ವೊಡಾಫೋನ್ ಹೇಳಿದೆ.

ಡೆಟಾದೊಂದಿಗೆ ಹೆಚ್ಚಿನ ಪ್ರಯೋಜನ
 

ಡೆಟಾದೊಂದಿಗೆ ಹೆಚ್ಚಿನ ಪ್ರಯೋಜನ

ಹೆಚ್ಚುವರಿ ಡೇಟಾದ ಹೊರತಾಗಿ, ವೊಡಾಫೋನ್ ವೊಡಾಫೋನ್ ಪ್ಲೇ, ಮೊಬೈಲ್ ಶೀಲ್ಡ್ ಮತ್ತು ಝೀ 5 5 ಗೆ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಆದ್ದರಿಂದ, ಈ ಪ್ಲ್ಯಾಟ್‌ಫಾರ್ಮ್‌ಗಳಿಂದ ಕಂಟೆಂಟ್ ಸ್ಟ್ರೀಮಿಂಗ್ ಮಾಡಲು ಹೆಚ್ಚಿನ ಡೇಟಾವನ್ನು ಬಳಸುವ ಚಂದಾದಾರರು ಸುಲಭವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಒಟ್ಟು 190 ಜಿಬಿ ಡೇಟಾ ಎಂದರೆ ಚಂದಾದಾರರು ನೆಟ್‌ಫ್ಲಿಕ್ಸ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಎಚ್‌ಡಿ ಗುಣಮಟ್ಟದ ವೀಡಿಯೊಗಳನ್ನು ಸುಲಭವಾಗಿ ಸ್ಟ್ರೀಮ್ ಮಾಡಬಹುದು.

 

 

Read more about: vodafone jio telecom money
English summary

Vodafone's cheapest postpaid plan now offers 150GB extra free data

Vodafone Idea's future in the telecom industry seems uncertain at the moment as the investors are unwilling to invest further.
Story first published: Tuesday, October 15, 2019, 12:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X