For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಅಲರ್ಟ್! ಈ ಸಲಹೆ ಪಾಲಿಸದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ

|

ಹೆಚ್ಚುತ್ತಿರುವ ವಂಚನೆಯ ಪ್ರಕರಣದ ದೃಷ್ಟಿಯಿಂದ, ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ತನ್ನ ಗ್ರಾಹಕರನ್ನು ಎಚ್ಚರಿಸಿದೆ.

 

ಐಸಿಐಸಿಐ ಅಲರ್ಟ್! ಈ ಸಲಹೆ ಪಾಲಿಸದಿದ್ದರೆ ಖಾತೆ ಖಾಲಿಯಾಗಲಿದೆ

ಐಸಿಐಸಿಐ ಬ್ಯಾಂಕ್ ಬ್ಯಾಂಕಿಂಗ್ ವಂಚನೆಯ ವಿರುದ್ಧ ಗ್ರಾಹಕರಿಗೆ ಅರಿವು ಮೂಡಿಸಿದ್ದು, ಹಣವನ್ನು ಸ್ವೀಕರಿಸಲು ಎಂದಿಗೂ ಪಿನ್ ಅವಶ್ಯಕತೆ ಇರುವುದಿಲ್ಲ ಎಂದು ಐಸಿಐಸಿಐ ಟ್ವೀಟ್ ಮಾಡಿದೆ.
ನಿಮ್ಮಿಂದ ಹಣವನ್ನು ಸ್ವೀಕರಿಸಲು ಯಾರಾದರೂ ಪಿನ್ ಕೇಳುತ್ತಿದ್ದರೆ, ಎಚ್ಚರವಾಗಿರಬೇಕು. ಯಾವುದೇ ಅನುಮಾನಾಸ್ಪದ ಮತ್ತು ಮೋಸದ ಚಟುವಟಿಕೆಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಿ. ಇದರಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ.
ಪಿನ್ ಹಾಕುವ ಮೊದಲು ನಿಲ್ಲಿ
- ಐಸಿಐಸಿಐ ಬ್ಯಾಂಕ್ ಪ್ರಕಾರ, ಹಣವನ್ನು ಸ್ವೀಕರಿಸುವ ಕೋರಿಕೆಗೆ ಪಿನ್ ಹಾಕುವ ಮೊದಲು ಯೋಚಿಸಿ. ನೀವು ಅಂತಹ ವಿನಂತಿಯನ್ನು ಪಡೆದರೆ, ಅದು ವಂಚನೆ ವಿನಂತಿ ಎಂದು ಅರ್ಥಮಾಡಿಕೊಳ್ಳಿ.
ಹಣವನ್ನು ಸ್ವೀಕರಿಸಲು ನಿಮ್ಮ ಪಿನ್ ಅನ್ನು ಏಕೆ ನಮೂದಿಸಬೇಕು?
- ಗ್ರಾಹಕರಿಂದ ಹಣವನ್ನು ಸ್ವೀಕರಿಸಲು ಬ್ಯಾಂಕ್ ಪಿನ್ ಅನ್ನು ಕೇಳುವುದಿಲ್ಲ ಎಂದು ಐಸಿಐಸಿಐ ಹೇಳುತ್ತದೆ. ಹಣವನ್ನು ಸ್ವೀಕರಿಸಲು ಪಿನ್ ಅನ್ನು ಏಕೆ ನಮೂದಿಸುವಿರಿ?
ಕ್ರಮ ತೆಗೆದುಕೊಳ್ಳಿ
- ಬ್ಯಾಂಕ್ ಟ್ವೀಟ್ ಪ್ರಕಾರ, ಹಣವನ್ನು ಸ್ವೀಕರಿಸಲು ವಿನಂತಿಯನ್ನು ಪಡೆದ ನಂತರ, ಚಿಂತನಶೀಲ ಕ್ರಮಗಳನ್ನು ತೆಗೆದುಕೊಳ್ಳಿ. ಇದು ವಂಚನೆ ಎಂದು ನೀವು ಅರ್ಥಮಾಡಿಕೊಳ್ಳಿ. ಪಿನ್ ಹಾಕದೆ ವಿನಂತಿಯನ್ನು ರದ್ದುಗೊಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಖಾತೆ ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ.

Read more about: icici banking money
English summary

icici bank alert! bank never ask for personal banking details like your otp

icici bank alert! bank never ask for personal banking details like your otp
Story first published: Wednesday, October 16, 2019, 13:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X