ದೀಪಾವಳಿ ಉಡುಗೊರೆ! ಎಪಿಎಫ್ಒ ನೌಕರರಿಗೆ ಬೋನಸ್ ಬಂಪರ್

ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ದೀಪಾವಳಿಗಿಂತ ಮುಂಚಿತವಾಗಿ ನೌಕರರಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ದೀಪಾವಳಿಗಿಂತ ಮುಂಚಿತವಾಗಿ ನೌಕರರಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. 2018-19ರ ಹಣಕಾಸು ವರ್ಷಕ್ಕೆ ಎಲ್ಲಾ ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ಉದ್ಯೋಗಿಗಳಿಗೆ 60 ದಿನಗಳ ಬೋನಸ್ ನೀಡಲು ಇಪಿಎಫ್‌ಒ ನಿರ್ಧರಿಸಿದ್ದು, ಈ ಸಂಬಂಧ ಕಾರ್ಮಿಕ ಸಚಿವಾಲಯ ಈಗಾಗಲೇ ಅಧಿಸೂಚನೆ ಹೊರಡಿಸಿದೆ.

ದೀಪಾವಳಿ ಉಡುಗೊರೆ! ಎಪಿಎಫ್ಒ ನೌಕರರಿಗೆ ಬೋನಸ್ ಬಂಪರ್

ಅಧಿಸೂಚನೆಯ ಪ್ರಕಾರ, ಎಲ್ಲಾ ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' (ಗೆಜೆಟೆಡ್ ಅಲ್ಲದ) ಉದ್ಯೋಗಿಗಳು 2018-19ರ ಆರ್ಥಿಕ ವರ್ಷದ ಉತ್ಪಾದಕತೆ ಲಿಂಕ್ಡ್ ಬೋನಸ್ (ಪಿಎಲ್‌ಬಿ) ಯೋಜನೆಯಡಿ 60 ದಿನಗಳ ಬೋನಸ್ ಪಡೆಯುತ್ತಾರೆ.
ವಲಯ ಕಚೇರಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ 60 ದಿನಗಳ ಬೋನಸ್ ನೀಡಲು ನಿರ್ಧರಿಸಲಾಗಿದೆ. ಪ್ರತಿ ಉದ್ಯೋಗಿಗೆ ಸರಾಸರಿ ರೂ. 7,000 ಬೋನಸ್ ರೂಪದಲ್ಲಿ ಸಿಗಲಿದೆ.
ಬೋನಸ್‌ ನ ಶೇ. 25 ರಷ್ಟು ಹಣ ನೇರವಾಗಿ ನೌಕರರ ವೇತನ ಖಾತೆಗೆ ಜಮಾ ಆಗಲಿದೆ. ಉಳಿದ ಶೇ. 75 ರಷ್ಟು ಹಣ ಪಿಎಫ್ ಖಾತೆಗೆ ಜಮಾ ಆಗಲಿದೆ. 2018-19ರ ಹಣಕಾಸು ವರ್ಷಕ್ಕೆ ಪಿಎಫ್ ಮೇಲಿನ ಬಡ್ಡಿದರವನ್ನು ಶೇ. 0.10 ರಷ್ಟು ಹೆಚ್ಚಿಸಿದೆ. ಕಳೆದ ಹಣಕಾಸು ವರ್ಷದ ಪಿಎಫ್‌ಗೆ ಶೇ. 8.65 ರಷ್ಟು ಬಡ್ಡಿಯನ್ನು ಪಾವತಿಸಲಿದೆ.
ಅಧಿಸೂಚನೆಯ ಪ್ರಕಾರ, ಇಪಿಎಫ್‌ಒ ಉದ್ಯೋಗಿಗಳಿಗೆ 30.4 ದಿನಗಳು ಸಿಗುತ್ತವೆ. ಅಂದರೆ ವಿತ್ತೀಯವಾಗಿ ಸುಮಾರು 7,000 ರೂಪಾಯಿ ಸಿಗಲಿದೆ. ಆದಾಗ್ಯೂ, ವಿವಿಧ ವರ್ಗದ ಉದ್ಯೋಗಿಗಳಿಗೆ ಮೊತ್ತವು ಬದಲಾಗಬಹುದು. ಇಪಿಎಫ್‌ಒ ನೌಕರರ ಬೋನಸ್ ಅನ್ನು ನಿರ್ಧರಿಸುವ ಸೂತ್ರವೆಂದರೆ (ಸರಾಸರಿ ವೇತನಗಳು X ದಿನಗಳ ಸಂಖ್ಯೆ)/ 30.4.
2018-19ರ ಆರ್ಥಿಕ ವರ್ಷಕ್ಕೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿದರವನ್ನು 8.65% ಕ್ಕೆ ಹೆಚ್ಚಿಸಲಾಗಿದೆ ಎಂದು ಕಳೆದ ತಿಂಗಳು ಇಪಿಎಫ್‌ಒ ಘೋಷಿಸಿತ್ತು. ಅಧಿಸೂಚನೆಯ ನಂತರ, 2018-19ನೇ ಸಾಲಿನ ಹೊಸದಾಗಿ ಅನುಮೋದಿತಗೊಂಡ ಬಡ್ಡಿ ದರದಲ್ಲಿ ರೂ. 54,000 ಕೋಟಿಗಳನ್ನು 6 ಕೋಟಿ ಖಾತೆದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+