For Quick Alerts
ALLOW NOTIFICATIONS  
For Daily Alerts

ಗೋಏರ್ ದೀಪಾವಳಿ ಸೂಪರ್ ಸೇವರ್ ಆಫರ್, ಆರಂಭಿಕ ದರ ಕೇವಲ ರೂ. 1296

|

ದೀಪಾವಳಿ ಹಬ್ಬಕ್ಕೂ ಮುನ್ನವೇ ಗೋಏರ್ ವಿಮಾನಯಾನ ಸಂಸ್ಥೆ ತನ್ನ ಪ್ರಯಾಣಿಕರಿಗೆ ಭರ್ಜರಿ ಆಫರ್ ಘೋಷಿಸಿದೆ.
ಅಂತರಾಷ್ಟ್ರೀಯ ಮತ್ತು ದೇಶೀ ಮಾರ್ಗಗಳಿಗಾಗಿ ರೂ. 1296 (ತೆರಿಗೆಗಳನ್ನು ಒಳಗೊಂಡಂತೆ) ದರದಲ್ಲಿ ಟಿಕೇಟ್ ಕಾಯ್ದಿರಿಸಬಹುದು.

 

ಗೋಏರ್ ದೀಪಾವಳಿ ಸೂಪರ್ ಸೇವರ್ ಆಫರ್, ಆರಂಭಿಕ ದರ ಕೇವಲ ರೂ. 1296

ನಿನ್ನೆಯಿಂದ ಗೋ ಏರ್ 24 ಗಂಟೆಗಳ ಸೂಪರ್ ಸೇವರ್ ಡೀಲ್ ಪ್ರಾರಂಭಿಸಿದ್ದು, ಟಿಕೇಟ್ ಮಾರಾಟ ಅಕ್ಟೋಬರ್ 17ರಂದು ಕೊನೆಗೊಳ್ಳಲಿದೆ.
ಪ್ರಯಾಣದ ಅವಧಿ - 2019 ರ ಅಕ್ಟೋಬರ್ 20 ರಿಂದ 23 ರವರೆಗೆ ಇರಲಿದೆ. ದೀಪಾವಳಿಯಲ್ಲಿ ಮಾಡುವ ಪ್ರಯಾಣಿಕರಿಗೆ ವರದಾನವಾಗಿದೆ. ಜಮ್ಮು-ಶ್ರೀನಗರ ಮಾರ್ಗದಲ್ಲಿ ರೂ. 1,296 ದರ ಅನ್ವಯವಾಗುತ್ತವೆ. ಗೋ ಏರ್ ಸಂಸ್ಥೆ ಎಲ್ಲಾ ಮಾರ್ಗಗಳಿಗೆ ಈ ಕೊಡುಗೆ ಅನ್ವಯವಾಗುತ್ತದೆ. ಗೋಏರ್ 33 ಸ್ಥಳಗಳಿಗೆ ವಿಮಾನ ಸೇವೆಗಳನ್ನು ಒದಗಿಸುತ್ತಿದೆ.
ಗೋಏರ್ ಹಾರಾಟ ನಡೆಸುವ ಎಲ್ಲಾ ಮಾರ್ಗಗಳಲ್ಲಿ ಆಫರ್‌ಗಳು ಅನ್ವಯವಾಗುತ್ತವೆ. ಸಂಸ್ಥೆಯ ಅಧಿಕೃತ ವೆಬ್ಸೈಟ್ www.goair.in ಮೂಲಕ ಅಥವಾ GoAir ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೇಟ್ ಬುಕ್ ಮಾಡಬಹುದು. ಈ ಕೊಡುಗೆಯನ್ನು ಬೇರೆ ಯಾವುದೇ ಕೊಡುಗೆಗಳೊಂದಿಗೆ ಹೊಂದಿಸಲಾಗುವುದಿಲ್ಲ. ಆಫರ್ ಟಿಕೆಟ್‌ಗಳನ್ನು ರದ್ದುಗೊಳಿಸಿದಲ್ಲಿ, ಪ್ರಮಾಣಿತ ರದ್ದತಿ ಶುಲ್ಕಗಳು ಅನ್ವಯವಾಗುತ್ತವೆ ಎಂದು ಗೋಏರ್ ತನ್ನ ಸೈಟ್‌ನಲ್ಲಿ ಉಲ್ಲೇಖಿಸಿದೆ.

Read more about: goair airlines money
English summary

GoAir Diwali sale offer: Flight tickets starts from ₹1,296

GoAir has announced pre-Diwali 'super saver fares' deal wherein customers can book tickets for as low as ₹1,296 (inclusive of taxes) for international and domestic routes.
Story first published: Thursday, October 17, 2019, 13:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X