ಹಣ ಸಂಪಾದನೆಗೆ ಅಥವಾ ಉದ್ಯೋಗ ಹುಡುಕಾಟಕ್ಕೆ ನೂರೆಂಟು ಮಾರ್ಗಗಳಿವೆ. ಡಿಜಿಟಲ್ ಯುಗದಲ್ಲಿ ಸಾಕಷ್ಟು ಅವಕಾಶಗಳಿದ್ದು, ಹೆಚ್ಚು ಹಣ ಸಂಪಾದನೆಗಾಗಿ ಪಾರ್ಟ್ ಟೈಮ್, ಪುಲ್ ಟೈಮ್ ಹೀಗೆ ಹಲವು ವಿಧಾನಗಳನ್ನು ಆರಿಸಿಕೊಳ್ಳಬಹುದು.
ಹಣ ಸಂಪಾದನೆಗೆ ಅಥವಾ ಉದ್ಯೋಗ ಹುಡುಕಾಟಕ್ಕೆ ನೂರೆಂಟು ಮಾರ್ಗಗಳಿವೆ. ಡಿಜಿಟಲ್ ಯುಗದಲ್ಲಿ ಸಾಕಷ್ಟು ಅವಕಾಶಗಳಿದ್ದು, ಹೆಚ್ಚು ಹಣ ಸಂಪಾದನೆಗಾಗಿ ಪಾರ್ಟ್ ಟೈಮ್, ಪುಲ್ ಟೈಮ್ ಹೀಗೆ ಹಲವು ವಿಧಾನಗಳನ್ನು ಆರಿಸಿಕೊಳ್ಳಬಹುದು. ಇದರಲ್ಲಿ ಆನ್ಲೈನ್ ವ್ಯವಹಾರವು ನಿಮಗೊಂದು ಉತ್ತಮ ಆಯ್ಕೆಯಾಗಬಲ್ಲದು. ಆನ್ಲೈನ್ ವ್ಯವಹಾರವನ್ನು ಪ್ರಾರಂಭಿಸುವುದು ತುಂಬಾ ಸುಲಭ. ಇದಕ್ಕೆ ಹೆಚ್ಚು ಸಮಯ ಮತ್ತು ಹೆಚ್ಚು ಬಂಡವಾಳದ ಅವಶ್ಯಕತೆಯೂ ಇಲ್ಲ. ನಿಮಗೆ ಆನ್ಲೈನ್ ವ್ಯವಹಾರ ಪ್ರಾರಂಭಿಸಲು ಸ್ವಲ್ಪ ತಾಂತ್ರಿಕ ಪರಿಣಿತಿ ಮತ್ತು ಕೌಶಲ್ಯ ಇರಬೇಕಷ್ಟೆ. ಆನ್ಲೈನ್ ಮೂಲಕ ನಡೆಸಬಹುದಾದ 5 ಆನ್ಲೈನ್ ವ್ಯವಹಾರಗಳ ವಿವರ ಇಲ್ಲಿದೆ.
ಆನ್ಲೈನ್ ಆಹಾರ ಉದ್ಯಮ
ಆನ್ಲೈನ್ ಪುಡ್ ಬಿಸಿನೆಸ್ ಪ್ರಾರಂಭ ಒಂದು ಉತ್ತಮ ವ್ಯಾಪಾರದ ಕಲ್ಪನೆ. ಈ ಉದ್ಯಮದ ಪರಿಕಲ್ಪನೆ ತುಂಬಾ ಸರಳ ಹಾಗೂ ಇದು ಪಿಜ್ಜಾ ಹಟ್ ಮಾದರಿಯಲ್ಲಿ ಕೆಲಸ ಮಾಡುತ್ತದೆ.
- ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿ ಮತ್ತು ಅದನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ. ಈ ವ್ಯವಹಾರಕ್ಕೆ ಕನಿಷ್ಟ ಬಂಡವಾಳ ಸಾಕು. ಆನ್ಲೈನ್ ಆಹಾರ ಉದ್ಯಮದ ಒಂದು ಉದಾಹರಣೆಯೆಂದರೆ Delfoo.com. ಇದು ರೆಸ್ಟೋರೆಂಟ್ ಗಳ ಜಾಲ ಹೊಂದಿದೆ. ಹಸಿದವರು ಆನ್ಲೈನ್ ನಲ್ಲಿ ಗುಂಡಿ ಒತ್ತಿ ಅಥವಾ ಫೋನ್ ಮೂಲಕ ಆಹಾರ ಆರ್ಡರ್ ಮಾಡಿ ತಮ್ಮ ಮನೆ ಬಾಗಿಲಿಗೆ ಆಹಾರ ತರಿಸಿಕೊಳ್ಳಬಹುದು. ಹಣವನ್ನು ನೇರವಾಗಿ ಅಥವಾ ಆನ್ಲೈನ್ ಮೂಲಕ ಪಾವತಿಸಬಹುದು. ಇದರ ಸೇವೆ ವಡೋದರ ಮತ್ತು ಸೂರತ್ ನಗರಗಳಲ್ಲಿ ಲಭ್ಯವಿದೆ, ನಿಮ್ಮ ಗಳಿಕೆಯು ಕಮಿಷನ್ ಅಥವಾ ನಿಗದಿತ ಪಾಲಿನ ಆಧಾರದಲ್ಲಿ ಇರಬಹುದು. ಇದೊಂದು ಹಸಿದವರಿಗೆ ಸಂತೋಷ ನೀಡಿ ಹಣಗಳಿಸುವ ಪರಿಕಲ್ಪನೆ.
ಆನ್ಲೈನ್ ಟ್ಯಾಕ್ಸಿ ಕಾಯ್ದಿರಿಸುವ
ಆನ್ಲೈನ್ ನಲ್ಲಿ ಬಾಡಿಗೆ ವಾಹನ ಕಾದಿರಿಸುವ ಸೇವೆ ಪ್ರಾರಂಭಿಸುವುದು ಮತ್ತೊಂದು ನವೀನ ಆನ್ಲೈನ್ ವ್ಯವಹಾರ. ಈ ವ್ಯವಹಾರದ ಮಾದರಿಯೆಂದರೆ ಟ್ಯಾಕ್ಸಿ/ ಕಾರನ್ನು ಸರಿಯಾದ ಸಮಯಕ್ಕೆ ಅಗತ್ಯವಿರುವ ಸ್ಥಳಕ್ಕೆ ಕಳುಹಿಸುವುದು. ಈ ವ್ಯವಹಾರದಲ್ಲಿ ಸಮಯ ಪರಿಪಾಲನೆ ಹಾಗೂ ಕಾರ್ ಅಥವಾ ಟ್ರಾವೆಲ್ ಏಜೆನ್ಸಿಗಳೊಂದಿಗಿನ ಉತ್ತಮ ಸಂಪರ್ಕ ಜಾಲ ಬಹುಮುಖ್ಯ ಪಾತ್ರ ವಹಿಸುತ್ತದೆ. ಆನ್ಲೈನ್ ಟ್ಯಾಕ್ಸಿ ಬುಕಿಂಗ್ ಸೇವೆಯ ಉದಾಹರಣೆಯೆಂದರೆ Taxiforsure.com. Taxiforsure.com ಗೆ ನಿಮ್ಮ ಪ್ರಯಾಣದ ಸವಯ, ಪ್ರಯಾಣದ ಆರಂಭ ಹಾಗೂ ಅಂತ್ಯದ ಸ್ಥಳವನ್ನು ತಿಳಿಸಿದರೆ ಸಾಕು. ನಿಮಗೆ ಬೇಕಾದ ಸಮಯದಲ್ಲಿ ಇದರ ಸೇವೆ ಉಪಲಬ್ದವಾಗುತ್ತದೆ. ಇದಲ್ಲದೆ ಇವರ ಸೇವೆ ವಿಮಾನ ನಿಲ್ದಾಣ ವರ್ಗಾವಣೆ, ತಡರಾತ್ರಿ ಕಾರ್ ಬಾಡಿಗೆ, ರಸ್ತೆ ಪ್ರವಾಸ ಗಳಂತಹ ನಿಮ್ಮ ನಿರ್ದಿಷ್ಟ ಅವಶ್ಯಕತೆಗಳಿಗಲ್ಲದೇ, ವಾರ್ಷಿಕೋತ್ಸವ, ಹುಟ್ಟು ಹಬ್ಬ, ವಿವಾಹ ಮಹೋತ್ಸವ ಗಳಂತಹ ವಿಶೇಷ ಸಂಧರ್ಭಗಳಿಗೂ ಲಭ್ಯವಿದೆ. ಇವರ ಸೇವೆ ಭಾರತದ ಬಹುಪಾಲು ಮುಖ್ಯ ಸ್ಥಳಗಳಲ್ಲಿ ಲಭ್ಯ.
ಆನ್ಲೈನ್ ಬುಕ್ ಲೈಬ್ರರಿ
ನಿಮಗೆ ಪುಸ್ತಕಗಳೆಂದರೆ ಅಕ್ಕರೆಯೇ? ಹಾಗಾದರೆ ಇದು ನಿಮಗಾಗಿ ಹೇಳಿ ಮಾಡಿಸಿರುವಂತಹ ವ್ಯವಹಾರ. ನೀವು ಆನ್ಲೈನ್ ಪುಸ್ತಕ ಗ್ರಂಥಾಲಯ ಪ್ರಾರಂಭಿಸಬಹುದು. ಇದು ತುಂಬಾ ಸರಳವಾದ ಪರಿಕಲ್ಪನೆ. ಇದಕ್ಕಾಗಿ ನೀವು ಕೆಲವು ಪುಸ್ತಕಗಳನ್ನು ಖರೀದಿಸಬೇಕು ಹಾಗೂ ವೆಬ್ಸೈಟ್ ವೊಂದರ ಮುಖಾಂತರ ಪ್ರದರ್ಶಿಸಬೇಕು. ಚಂದಾದಾರಿಕೆಯ ಯೋಜನೆಯನ್ನು ಮಾಡಿ ಮತ್ತು ನಿಮ್ಮ ಪುಸ್ತಕ ಭಂಡಾರಕ್ಕೆ ಸದಸ್ಯರಾಗಲು ಜನರನ್ನು ಆಹ್ವಾನಿಸಿ. ಅಗತ್ಯವಿದ್ದರೆ ಪುಸ್ತಕಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಬಹುದು. ಆನ್ಲೈನ್ ಪುಸ್ತಕ ಗ್ರಂಥಾಲಯದ ಉದಾಹರಣೆಯೆಂದರೆ Indiareads.com. Indiareads.com ನಲ್ಲಿ ನೀವು ಚಂದಾದಾರರಾಗಬಹುದು ಹಾಗೂ ನಿಮ್ಮ ಮನೆ ಬಾಗಿಲಿಗೆ ಪುಸ್ತಕಗಳ ವಿತರಣೆ ಪಡೆಯಬಹುದು.
ಆನ್ಲೈನ್ ಬಾಡಿಗೆ ಆಟಿಕೆಗಳು
ಆನ್ಲೈನ್ ಬಾಡಿಗೆ ಆಟಿಕೆ ಒಂದು ನವೀನ ಕಲ್ಪನೆಯ ಆನ್ಲೈನ್ ವ್ಯವಹಾರ. ಆಟಿಕೆಗಳೊಂದಿಗೆ ಆಡಲು ಇಷ್ಟ ಪಡುವವರಿಗಾಗಿ ಇದೊಂದು ಉತ್ತಮ ಕಲ್ಪನೆ. ನೀವು ಆನ್ಲೈನ್ ಆಟಿಕೆ ಬಾಡಿಗೆ ನೀಡುವ ಅಂತರ್ಜಾಲ ಪೋರ್ಟಲ್ ಪ್ರಾರಂಭಿಸಬಹುದು. ಈ ವ್ಯವಹಾರದ ಪರಿಕಲ್ಪನೆಯೂ ಸರಳವಾಗಿದೆ. ನೀವು ದೊಡ್ಡ ಪ್ರಮಾಣದಲ್ಲಿ ಆಟಿಕೆಗಳನ್ನು ಖರೀದಿಸಬೇಕು ಹಾಗೂ ನಿಮ್ಮ ಆನ್ಲೈನ್ ವೆಬ್ ಪುಟದಲ್ಲಿ ಅದನ್ನು ಬಾಡಿಗೆಗೆ ದೊರೆಯುವಂತೆ ಮಾಡಬೇಕು. ಇದಕ್ಕಾಗಿ ನೀವು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಚಂದಾ ಯೋಜನೆಯನ್ನು ರೂಪಿಸಬಹುದು. ವಯಸ್ಸಿಗನುಗುಣವಾಗಿ ಬಾಡಿಗೆ ಆಟಿಕೆಗಳನ್ನು ವಿತರಿಸಿ, ಹಾಗೂ ಹಣ ಸಂಪಾದಿಸಿ. ಆನ್ಲೈನ್ ಬಾಡಿಗೆ ಆಟಿಕೆ ಜಾಲತಾಣಕ್ಕೆ ಉದಾಹರಣೆಯೆಂದರೆ rentoys.in. rentoys.in ಗೆ ನೀವು ಸದಸ್ಯರಾಗುವುದರಿಂದ ನೀವು ಬಾಡಿಗೆ ಆಟಿಕೆ ಗಳನ್ನು ಪಡೆಯುವ ಅನುಕೂಲವನ್ನು ಹೊಂದಬಹುದು. ಈ ಸೇವೆ ಪ್ರಸ್ತುತ ಮುಂಬೈ, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆ ನಗರಗಳಲ್ಲಿ ಲಭ್ಯವಿದೆ.
ಆನ್ಲೈನ್ ಬಸ್ ಟಿಕೆಟ್ ಕಾದಿರಿಸುವುದು
ಇನ್ನೊಂದು ಯಶಸ್ವಿ ಆನ್ಲೈನ್ ವ್ಯವಹಾರವೆಂದರೆ ಆನ್ಲೈನ್ ಬಸ್ ಟಿಕೆಟ್ ಕಾದಿರಿಸುವುದು. ನೀವು ಟ್ರಾವೆಲ್ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಆನ್ಲೈನ್ ನಲ್ಲಿ ಬಸ್ ಟಿಕೇಟ್ ಬುಕ್ ಮಾಡುವುದನ್ನು ಪ್ರಾರಂಭಿಸಬೇಕು. ಆನ್ಲೈನ್ ಬಸ್ ಟಿಕೇಟ್ ಕಾಯ್ದಿರಿಸುವ ಜಾಲತಾಣದ ಉದಾಹರಣೆಯೆಂದರೆ Redbus.in. Redbus.in ನಲ್ಲಿ ನೀವು ನಿಮಗೆ ಬೇಕಾದ ಆಸನವನ್ನು ಜಾಲತಾಣದಲ್ಲಿ ನೀಡಿರುವ ಬಸ್ ಆಸನದ ನಕ್ಷೆಯ ಸಹಾಯದಿಂದ ಆರಿಸಿಕೊಂಡು ಕಾಯ್ದಿರಿಸಬಹುದು. ಇವರ ಸೇವೆಯು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಲಭ್ಯವಿದೆ.
ಮೇಲಿನ ಯಾವುದರೂ ಹೊಸ ಪರಿಕಲ್ಪನೆಯಂತಹ ವ್ಯವಹಾರ ಆರಂಭಿಸುವ ಬಗ್ಗೆ ಆಲೋಚಿಸಿ ಮತ್ತು ಹಣ ಗಳಿಸಲು ಪ್ರಾರಂಭಿಸಿ.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications