For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪನಿಗಳಿಗೆ ಸರ್ಕಾರದಿಂದ ಸಂಕಷ್ಟ!

ಇ-ಕಾಮರ್ಸ್ ದೈತ್ಯ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ದಸರಾ ಮತ್ತು ದೀಪಾವಳಿ ಹಬ್ಬದ ಕೊಡುಗೆಯಾಗಿ ಭರ್ಜರಿ ಆಫರ್ ಗಳನ್ನು ಘೋಷಿಸಿ ಕೋಟ್ಯಾಂತರ ಹಣ ಗಳಿಸುತ್ತಿದ್ದು, ಇದೀಗ ಸರ್ಕಾರದಿಂದ ಸಂಕಟ ಎದುರಾಗಿದೆ.

|

ಇ-ಕಾಮರ್ಸ್ ದೈತ್ಯ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ದಸರಾ ಮತ್ತು ದೀಪಾವಳಿ ಹಬ್ಬದ ಕೊಡುಗೆಯಾಗಿ ಭರ್ಜರಿ ಆಫರ್ ಗಳನ್ನು ಘೋಷಿಸಿ ಕೋಟ್ಯಾಂತರ ಹಣ ಗಳಿಸುತ್ತಿದ್ದು, ಇದೀಗ ಸರ್ಕಾರದಿಂದ ಸಂಕಟ ಎದುರಾಗಿದೆ.

 

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪನಿಗಳಿಗೆ ಸರ್ಕಾರದಿಂದ ಸಂಕಷ್ಟ!

ಆನ್ಲೈನ್ ವೇದಿಕೆಗಳನ್ನು ಬಳಸಿಕೊಂಡು ಹೆಚ್ಚು ವ್ಯಾಪಾರ ಮಾಡಿದ ಅಗ್ರ 5 ಕಂಪನಿಗಳು, ಸರಕುಗಳ ದರ ಪಟ್ಟಿ, ಇವುಗಳಿಗೆ ಕಂಪನಿ ನೀಡಿದ ಬೆಂಬಲ, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ದರ ಪಟ್ಟಿ, ಬಂಡವಾಳ, ವ್ಯವಹಾರ ಮಾದರಿ ಮತ್ತು ದಾಸ್ತಾನು ನಿರ್ವಹಣೆ ಸೇರಿದಂತೆ ಹಲವು ಸಂಗತಿಗಳ ಸಮರ್ಪಕ ಮಾಹಿತಿ ನೀಡುವಂತೆ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪನಿಗಳಿಗೆ ತಿಳಿಸಿದೆ.
ಹಬ್ಬದ ಮಾರಾಟದ ಸಂದರ್ಭದಲ್ಲಿ ಇ-ಕಾಮರ್ಸ್ ಕಂಪನಿಗಳು ವಿದೇಶಿ ನೇರ ಹೂಡಿಕೆ ನೀತಿಯನ್ನು ಉಲ್ಲಂಘಿಸುತ್ತಿವೆ ಎಂದು ವ್ಯಾಪಾರಿಗಳ ಸಂಸ್ಥೆ ಸಿಎಐಟಿಯಿಂದ ಇಲಾಖೆಗೆ ಹಲವಾರು ದೂರುಗಳು ಬಂದಿವೆ. ಆನ್ಲೈನ್ ಕಂಪನಿಗಳು ಎಫ್‌ಡಿಐ ನೀತಿ ಉಲ್ಲಂಘನೆ ಸೇರಿದಂತೆ ಹಲವು ತಪ್ಪು ವ್ಯಾಪಾರ ಪದ್ಧತಿ ಅನುಸರಿಸುತ್ತಿವೆ ಎಂದು ವ್ಯಾಪಾರಿಗಳ ಸಂಘ ಸಿಎಐಟಿ ದೂರು ನೀಡಿತ್ತು.
ಈ ವಿಷಯದ ಬಗ್ಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಕಳುಹಿಸಿದ ಇ-ಮೇಲ್ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

Read more about: amazon flipkart
English summary

Govt asks Amazon and Flipkart to reveal top 5 sellers, capital structure

E-commerce giants Amazon and Flipkart have been asked to disclose names of top five sellers on their platform.
Story first published: Monday, October 21, 2019, 12:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X