For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ ಚಿನ್ನ ಖರೀದಿಸುವವರಿಗೆ ಈ ಬ್ಯಾಂಕ್ ನಿಂದ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್

|

ದೀಪಾವಳಿ ಬಂತೆಂದರೆ ಹಲವಾರು ಕಂಪನಿಗಳು, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಉಡುಗೊರೆಗಳನ್ನು ಘೋಷಣೆ ಮಾಡುತ್ತವೆ. ಇಂದು ದೇಶದಾದ್ಯಂತ ಧನ್ ತೇರಸ್ ಆಚರಿಸಲಾಗುತ್ತಿರುವುದರಿಂದ ಜನರು ಚಿನ್ನಾಭರಣ ಖರೀದಿಗೆ ಮುಂದಾಗುತ್ತಾರೆ.

 

ದೀಪಾವಳಿಗೆ ಚಿನ್ನ ಖರೀದಿಸುವವರಿಗೆ ಈ ಬ್ಯಾಂಕ್ ನಿಂದ ಆಫರ್

ದೀಪಾವಳಿಯ ಪರ್ವದಲ್ಲಿ ದೇಶದ ಅನೇಕ ಬ್ಯಾಂಕುಗಳು ಗ್ರಾಹಕರಿಗೆ ಚಿನ್ನವನ್ನು ಖರೀದಿಗೆ ವಿಶೇಷ ಆಫರ್ ಘೋಷಿಸಿವೆ. ಎಚ್‌ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಆಫರ್ ನೀಡಲಿದೆ.
ಎಚ್‌ಡಿಎಫ್ಸಿ ಬ್ಯಾಂಕ್ ತನಿಶ್ಕ್ ಮಳಿಗೆಗಳಿಂದ ಚಿನ್ನ ಖರೀದಿಸುವ ಗ್ರಾಹಕರಿಗೆ ರಿಯಾಯಿತಿ ನೀಡುತ್ತಿದೆ. ಎಚ್‌ಡಿಎಫ್ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿದರೆ ಗ್ರಾಹಕರು ರಿಯಾಯಿತಿ ಪಡೆಯಲಿದ್ದಾರೆ. ಈಗಾಗೇ ಈ ಆಫರ್ ಶುರುವಾಗಿದ್ದು, ಅಕ್ಟೋಬರ್ 28ರವರೆಗೆ ರಿಯಾಯಿತಿ ಲಭ್ಯವಿದೆ.
ತನಿಶ್ಕ್ ಮಳಿಗೆಗಳಿಮದ ರೂ. 50,000 ದಿಂದ ರೂ. 99,000 ವರೆಗೆ ಚಿನ್ನ ಖರೀದಿಸಿದರೆ ರೂ. 2,500 ವರೆಗೆ ರಿಯಾಯಿತಿ ಸಿಗಲಿದೆ. ಈ ಆಫರ್ ಪಡೆಯಲು ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಬೇಕು. ರೂ. 1 ಲಕ್ಷದಿಂದ ರೂ. 2,49,999 ವರೆಗೆ ಖರೀದಿ ಮಾಡಿದರೆ ರೂ. 5,000 ಹಾಗೂ ರೂ. 2,50,000 ಕ್ಕಿಂತ ಹೆಚ್ಚು ಖರ್ಚು ಮಾಡಿದರೆ ರೂ. 10,000 ರಿಯಾಯಿತಿ ಸಿಗಲಿದೆ.
ಎಚ್‌ಡಿಎಫ್ಸಿ ಪ್ರಕಾರ, ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯಿಂದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ರೂ. 10,000 ಚಿನ್ನ ಖರೀದಿಸರೆ ಶೇ. 10ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಗರಿಷ್ಠ ಕ್ಯಾಶ್‌ಬ್ಯಾಕ್ ರೂ. 2,500.

Read more about: hdfc banking gold diwali 2019
English summary

Buying gold on Dhanteras, Diwali? HDFC Bank offer discounts, cashbacks

With Dhanteras being celebrated across the country today and Diwali just two days away, you may have plans to buy gold this festive season.
Story first published: Friday, October 25, 2019, 16:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X