ಪ್ರತೀ ವರ್ಷ ಕರ್ನಾಟಕ ಸರ್ಕಾರ (Karnataka Govt) ಆಯಾ ವರ್ಷದ ರಾಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ ಮುಂಬರುವ 2026 ನೇ ವರ್ಷದ ರಜಾದಿನಗಳ ಕ್ಯಾಲೆಂಡರ್ (Holidays Calender) ಅನ್ನು ಬಿಡುಗಡೆ ಮಾಡಿದೆ. ಇದೀಗ ಕರ್ನಾಟಕ ಸರ್ಕಾರವು 2026ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಗೆ ನೀಡಲಾಗಿದೆ.

ಕೊನೆಗೂ ರಾಜ್ಯ ಸರ್ಕಾರ 2026 ರ ಸಾರ್ವತ್ರಿಕ ರಜೆಗಳಿಗೆ ಅನುಮೋದನೆ ನೀಡಿದ್ದು, ಇದೀಗ ಅಧಿಕೃತವಾಗಿ ಪ್ರಕಟಿಸಿದೆ. ಈ ಪಟ್ಟಿ ಪ್ರಕಾರ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬ, ಧಾರ್ಮಿಕ ಹಬ್ಬ ಸೇರಿದಂತೆ 2026 ರಲ್ಲಿ ಒಟ್ಟು 20 ದಿನಗಳು ಸರ್ಕಾರಿ ರಜೆ ಘೋಷಿಸಲಾಗಿದೆ. ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2026ರ ಸಾರ್ವತ್ರಿಕ ರಜಾ ಪಟ್ಟಿಗೆ ಸರ್ಕಾರ ಅನುಮತಿ ನೀಡಿದೆ. ಇದು ಸರ್ಕಾರಿ ರಜಾ ದಿನಗಳಾಗಿದ್ದು, ಈ ರಜಾಪಟ್ಟಿ ಸರ್ಕಾರಿ ಕಚೇರಿಗಳಿಗೆ, ಶಾಲೆಗಳಿಗೆ, ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಅಲ್ಲದೇ ಇದರಲ್ಲಿ ಎಲ್ಲಾ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳನ್ನೂ ಸೇರಿಸಲಾಗಿದೆ.
2026ರ ರಜಾದಿನಗಳ ಪಟ್ಟಿ:
| ರಜಾದಿನ | ಹಬ್ಬದ ವಿವರ |
| ಜನವರಿ 15,ಗುರುವಾರ | ಸಂಕ್ರಾಂತಿ ಹಬ್ಬ |
| ಜನವರಿ 26, ಸೋಮವಾರ | ಗಣರಾಜ್ಯೋತ್ಸವ |
| ಮಾರ್ಚ್ 19, ಗುರುವಾರ | ಯುಗಾದಿ ಹಬ್ಬ |
| ಮಾರ್ಚ್ 21, ಶನಿವಾರ | ರಂಜಾನ್ |
| ಮಾರ್ಚ್ 31, ಮಂಗಳವಾರ | ಮಹಾವೀರ ಜಯಂತಿ |
| ಏಪ್ರಿಲ್ 3, ಶುಕ್ರವಾರ | ಗುಡ್ ಫ್ರೈಡೇ |
| ಏಪ್ರಿಲ್ 14, ಮಂಗಳವಾರ | ಅಂಬೇಡ್ಕರ್ ಜಯಂತಿ |
| ಏಪ್ರಿಲ್ 20, ಸೋಮವಾರ | ಬಸವಜಯಂತಿ/ ಅಕ್ಷಯ ತೃತೀಯ |
| ಮೇ 1, ಶುಕ್ರವಾರ | ಕಾರ್ಮಿಕರ ಜಯಂತಿ |
| ಮೇ 28, ಗುರುವಾರ | ಬಕ್ರೀದ್ |
| ಜೂನ್ 26, ಶುಕ್ರವಾರ | ಮೊಹರಾಂ ಕಡೇ ದಿನ |
| ಆಗಸ್ಟ್ 15, ಶನಿವಾರ | ಸ್ವಾತಂತ್ರ್ಯ ದಿನಾಚರಣೆ |
| ಆಗಸ್ಟ್ 26, ಬುಧವಾರ | ಈದ್ ಮಿಲಾದ್ |
| ಸೆಪ್ಟೆಂಬರ್ 14, ಸೋಮವಾರ | ಗಣೇಶ ಚತುರ್ಥಿ |
| ಅಕ್ಟೋಬರ್ 2, ಶುಕ್ರವಾರ | ಗಾಂಧಿ ಜಯಂತಿ |
| ಅಕ್ಟೋಬರ್ 20, ಮಂಗಳವಾರ | ಮಹಾನವಮಿ/ ಆಯುಧ ಪೂಜೆ |
| ಅಕ್ಟೋಬರ್ 21, ಬುಧವಾರ | ವಿಜಯದಶಮಿ |
| ನವೆಂಬರ್ 10, ಮಂಗಳವಾರ | ಬಲಿಪಾಡ್ಯಮಿ |
| ನವೆಂಬರ್ 27, ಶುಕ್ರವಾರ | ಕನಕದಾಸ ಜಯಂತಿ |
| ಡಿಸೆಂಬರ್ 25, ಬುಧವಾರ | ಕ್ರಿಸ್‌ಮಸ್ |
ಇನ್ನು ಈ ಪಟ್ಟಿಯಲ್ಲಿ ಎರಡನೇ, ನಾಲ್ಕನೇ ಶನಿವಾರ ಮತ್ತು ಭಾನುವಾರವನ್ನು ಸೇರಿಸಲಾಗಿಲ್ಲ. ಆದರೆ 2026 ರಲ್ಲಿ ಭಾನುವಾರ ಕೂಡಾ ಹಬ್ಬಗಳು ಬರಲಿದೆ. ಮಹಾ ಶಿವರಾತ್ರಿ ಫೆಬ್ರವರಿ 15, ಮಹರ್ಷಿ ವಾಲ್ಮೀಕಿ ಜಯಂತಿ ಅಕ್ಟೋಬರ್ 25, ಕನ್ನಡ ರಾಜ್ಯೋತ್ಸವ ನವೆಂಬರ್ 1, ನರಕ ಚತುರ್ದಶಿ ನವೆಂಬರ್ 8 ರಂದು ಬರಲಿದೆ. ಅದೇ ರೀತಿ ಅಕ್ಟೋಬರ್ 10, ಎರಡನೇ ಶನಿವಾರದಂದು ಮಹಾಲಯ ಅಮಾವಾಸ್ಯೆ ಬರಲಿದೆ. ಈ ಹಬ್ಬಗಳನ್ನು ರಜಾ ಪಟ್ಟಿಯಲ್ಲಿ ಗುರುತಿಸಿಲ್ಲ.
ಇನ್ನು ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕಕ್ಕೆ ಬರದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರು ಹಬ್ಬ ಆಚರಿಸುವ ದಿನದಂದು ರಜಾ ಮಂಜೂರು ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.
ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ರಜೆ!
ಇನ್ನು ಸೆಪ್ಟೆಂಬರ್ 03 (ಗುರುವಾರ), 2026 ರಂದು ಕೈಲ್ ಮುಹೂರ್ತ, ಅಕ್ಟೋಬರ್ 18 (ಭಾನುವಾರ) ತುಲಾ ಸಂಕ್ರಮಣ ಹಾಗೂ ನವೆಂಬರ್ 26, ಗುರುವಾರದಂದು ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂಯೆ ಸ್ಥಳೀಯವಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
2026 ರ ಒಟ್ಟು ರಜಾ ವಿವರ:
- ಭಾನುವಾರಗಳು: 52 ದಿನ
- ಎರಡನೇ, ನಾಲ್ಕನೇ ಶನಿವಾರ: 24 ರಜೆ
- ಹಬ್ಬಗಳಿಗೆ ಸರ್ಕಾರಿ ರಜಾದಿನಗಳು: 20 ದಿನ
- ಒಟ್ಟು ರಜೆಗಳು: 96 ದಿನಗಳು
ಈ ರಜಾ ಪಟ್ಟಿಗಳು ಕೇವಲ 2026 ರ ವರ್ಷದ್ದು ಮಾತ್ರವಾಗಿದ್ದು, ಪ್ರತೀ ವರ್ಷವೂ ಇದೇ ತಿಂಗಳಲ್ಲಿ ಅನುಮೋದನೆ ಮಾಡಲಾಗುತ್ತದೆ. ಅದೇ ರೀತಿ ಇಂದು ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ 2026 ರ ರಜಾ ಕ್ಯಾಲೆಂಡರ್ ಅಧಿಕೃತವಾಗಿ ಬಿಡುಗಡೆ ಮಾಡಿದೆ.


Click it and Unblock the Notifications