PM Kisan 20th Installment Date: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಲ್ಲಿ ಹೆಸರು ನೋಂದಾಯಿಸಿರುವ ದೇಶಾದ್ಯಂತ ಕೋಟ್ಯಂತರ ರೈತರಿಗೆ ಶೀಘ್ರದಲ್ಲೇ ಮತ್ತೊಂದು ಕಂತಿನ ಹಣವನ್ನು ಸಿಗುತ್ತದೆ. ಈ ಯೋಜನೆಯ 20 ನೇ ಕಂತನ್ನು ಜುಲೈ 18, 2025 ರಂದು ರೈತರ ಬ್ಯಾಂಕ್ ಖಾತೆಗಳಿಗೆ ಜಮಾವಾಗಬಹುದು ಎಂದು ವರದಿಗಳು ಹೇಳಿವೆ.ಈ ಯೋಜನೆಯ ಮೂಲಕ ಪ್ರತಿಯೊಬ್ಬ ಫಲಾನುಭವಿ ರೈತನಿಗೆ 2000 ರೂ. ಹಣ ಸಿಗುವ ಸಾಧ್ಯತೆಯಿದೆ.

ಈ ಮೊತ್ತವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ವಿಶೇಷತೆಯೆಂದರೆ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಮಾಡಲಾಗುತ್ತದೆ, ಇದರಿಂದಾಗಿ ಮಧ್ಯವರ್ತಿಗಳ ಹವಾಳಿ ತಪ್ಪಿ ಹಣವು ನೇರವಾಗಿ ರೈತರ ಖಾತೆಗಳಿಗೆ ತಲುಪುತ್ತದೆ.
ಈ ಐದು ವಿಷಯಗಳನ್ನು ನೆನಪಿನಲ್ಲಿ ಇಟ್ಟಿಕೊಳ್ಳಿ
- ಮೊದಲು ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು.
- ಬ್ಯಾಂಕ್ ಖಾತೆಯಲ್ಲಿ ಆಧಾರ್ ಜೋಡಣೆ ಸ್ಥಿತಿಯನ್ನು ಪರಿಶೀಲಿಸಿ.
- ನಿಮ್ಮ ಬ್ಯಾಂಕ್ ಖಾತೆಯಲ್ಲಿ ಡಿಬಿಟಿ ಸೌಲಭ್ಯ ಸಕ್ರಿಯವಾಗಿರಬೇಕು.
- ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನಿಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಲು ಮರೆಯದಿರಿ.
- 'ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ' ಆಯ್ಕೆಗೆ ಹೋಗುವ ಮೂಲಕ ನಿಮ್ಮ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಿ.
ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?
ನೀವು ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ಇದ್ದೀರೋ ಇಲ್ಲವೋ ಎಂದು ತಿಳಿಯಲು ಬಯಸಿದರೆ, ಈ ಕೆಳಗಿನ ಹಂತವನ್ನು ಅನುಸರಿಸಿ.
- ಮೊದಲು ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ
- ನಂತರ ಬಲಭಾಗದಲ್ಲಿರುವ "ಡ್ಯಾಶ್‌ಬೋರ್ಡ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ ಮತ್ತು ಪಂಚಾಯತ್ ಆಯ್ಕೆಮಾಡಿ.
- "ತೋರಿಸು" ಮೇಲೆ ಕ್ಲಿಕ್ ಮಾಡಿ ಮತ್ತು ನಂತರ "ವರದಿ ಪಡೆಯಿರಿ" ಮೇಲೆ ಕ್ಲಿಕ್ ಮಾಡಿ.
- ಈಗ ನೀವು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಬಹುದು.
ಈ ಯೋಜನೆಯ ಲಾಭ ಯಾರಿಗೆ ಸಿಗುವುದಿಲ್ಲ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಕಾರ, ಗಂಡ ಮತ್ತು ಹೆಂಡತಿ ಇಬ್ಬರೂ ಒಟ್ಟಿಗೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಯಾರಾದರೂ ಹೀಗೆ ಮಾಡಿದರೆ, ಅದು ನಕಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ಸರ್ಕಾರವು ಅವರಿಂದ ಕೊಟ್ಟ ಹಣವನ್ನು ವಸೂಲಿ ಮಾಡುತ್ತದೆ. ಇದಲ್ಲದೆ, ರೈತನ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸಿದರೆ ಅಂತವರಿಗೆ ಈ ಯೋಜನೆಯ ಪ್ರಯೋಜನವೂ ಸಿಗುವುದಿಲ್ಲ. ಇದರರ್ಥ ಗಂಡ ಅಥವಾ ಹೆಂಡತಿ ಇಬ್ಬರೂ ಕಳೆದ ವರ್ಷ ಆದಾಯ ತೆರಿಗೆ ಪಾವತಿಸಿದ್ದರೆ, ಅವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಒಬ್ಬ ರೈತ ಇನ್ನೊಬ್ಬ ರೈತರಿಂದ ಭೂಮಿಯನ್ನು ಬಾಡಿಗೆಗೆ ಪಡೆದು ಕೃಷಿ ಮಾಡುತ್ತಿದ್ದರೆ, ಅವರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಭೂ ಮಾಲೀಕತ್ವವು ಅವಶ್ಯಕ. ಒಬ್ಬ ರೈತ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಉನ್ನತ ಹುದ್ದೆಯನ್ನು ಹೊಂದಿದ್ದರೆ, ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.


Click it and Unblock the Notifications