ಪ್ರಧಾನಿ ನರೇಂದ್ರ ಮೋದಿ ಅವರು 21 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಅನುಷ್ಠಾನ ಮಾಡುವ ಜವಾಬ್ದಾರಿಯನ್ನು ತಂಡವೊಂದನ್ನು ಮಾಡಿ, ಈ ಸಚಿವರಿಗೆ ವಹಿಸಿದ್ದಾರೆ ಎಂಬ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈ ಕುರಿತು ಅಧಿಕೃತವಾಗಿ ತಂಡ ಎಂದು ಮಾಡದಿದ್ದರೂ ಆರ್ಥಿಕ ಪ್ಯಾಕೇಜ್ ಅನುಷ್ಠಾನದ ಹೊಣೆ ಈ ಸಚಿವರ ಮೇಲಿದೆ.
ಯಾರು ಆ ಸಚಿವರು ಎಂಬ ಬಗ್ಗೆ ಮೂಲಗಳ ಮಾಹಿತಿಯನ್ನು ಆಧರಿಸಿ, ವರದಿ ಮಾಡಲಾಗಿದೆ. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಹಾಗೂ ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಪುರಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಐದು ದಿನಗಳ ಕಾಲ ಸತತವಾಗಿ ಆರ್ಥಿಕ ಉತ್ತೇಜನ ಕ್ರಮಗಳನ್ನು ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ. ಇಂದಿನಿಂದ (ಮೇ 18, 2020) ಸಚಿವರು ಸಭೆಗಳನ್ನು ಸೇರಿ, ಅನುಷ್ಠಾನದ ಕೆಲಸಗಳನ್ನು ಶುರು ಮಾಡಲಿದ್ದಾರೆ. ಸದ್ಯಕ್ಕೆ ಭಾರತ ಸರ್ಕಾರ 20,97,053 ಕೋಟಿ ರುಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಪ್ರಕಾರ, ಈ ಆರ್ಥಿಕ ಪ್ಯಾಕೇಜ್ ಭವಿಷ್ಯ ಭಾರತಕ್ಕೆ ರೂಪ ನೀಡಲಿದೆ. ಕಳೆದ ವಾರದಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಸ್ವಾವಲಂಬಿ ಭಾರತದ ಬಗ್ಗೆ ಪ್ರಸ್ತಾವ ಮಾಡಿದ್ದರು. ಆದ್ದರಿಂದಲೇ "ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್" ಎಂದು ಹೆಸರಿಡಲಾಗಿತ್ತು.


Click it and Unblock the Notifications